ಸೇಲಂನಲ್ಲಿ ಭೀಕರ ಅಪಘಾತ: 7 ಜನರ ದುರ್ಮರಣ
ಸೇಲಂ, ಸೆಪ್ಟೆಂಬರ್ 01: ತಮಿಳುನಾಡಿನ ಸೇಲಂನಲ್ಲಿ ಇಂದು(ಸೆ.01) ಸಂಭವಿಸಿದ ಭೀಕರ ಅಪಘಾತದಲ್ಲಿ ಏಳು ಜನ ಮೃತರಾಗಿದ್ದಾರೆ. ಅಪಘಾತದಲ್ಲಿ 50 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ತಮಿಳುನಾಡಿನ ಸೇಲಂನಿಂದ ಧರ್ಮಾಪುರಿಗೆ ಹೊರಟಿದ್ದ ಬಸ್ಸು ಸೇಲಂನಲ್ಲಿ ಅಪಘಾತಕ್ಕೊಳಗಾಗಿದ್ದು, ಈ ದುರಂತ ಸಂಭವಿಸಿದೆ. 40 ಜನರನ್ನು ಹೊತ್ತಿದ್ದ ಖಾಸಗಿ ಬಸ್ ಎದುರಿನಿಂದ ಬರುತ್ತಿದ್ದ ಮತ್ತೊಂದು ಬಸ್ ಮತ್ತು ಲಾರಿಗೆ ಡಿಕ್ಕಿ ಹೊಡೆ ಪರಿಣಾಮ ಈ ಘಟನೆ ನಡೆದಿದ್ದು, ಮೂರೂ ವಾಹನಗಳಲ್ಲಿದ್ದ 50 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ.
ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ.

ಇತ್ತೀಚೆಗಷ್ಟೆ ಜಮ್ಮು ಕಾಶ್ಮೀರದ ಕಿಶ್ತ್ವಾರ್ ನಲ್ಲಿ ವೇಗವಾಗಿ ಸಾಗುತ್ತಿದ್ದ ವಾಹನ ನದಿಗೆ ಉರುಳಿದ ಪರಿಣಾಮ 13 ಮಂದಿ ಸಾವಿಗೀಡಾಗಿದ್ದರು.
ಆಗಸ್ಟ್ 28 ರಂದು ಶಿರಾ-ತುಮಕೂರು ಹೆದ್ದಾರಿಯಲ್ಲಿ ಕೆಎಸ್ ಆರ್ ಟಿಸಿ ಬಸ್, ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತರಾಗಿದ್ದರು.
ಆಗಸ್ಟ್ 19 ರಂದು ತೆಲಂಗಾಣದ ನಲ್ಗೊಂಡ ಎಂಬಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ತೆಲುಗು ನಟ, ರಾಜಕಾರಣಿ ನಂದಮೂರಿ ಹರಿಕೃಷ್ಣ ಮೃತರಾಗಿದ್ದರು.












Click it and Unblock the Notifications