ಲುಧಿಯಾನಾ ಕಾರ್ಖಾನೆಯಲ್ಲಿ ಅಗ್ನಿ ಆಕಸ್ಮಿಕ: 4 ಮಂದಿ ಸಾವು
ಲುಧಿಯಾನಾ, ಅಕ್ಟೋಬರ್ 10: ಪಂಜಾಬಿನ ಲುಧಿಯಾನಾದ ಕಲ್ಯಾಣ ನಗರದ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ನಾಲ್ವರು ಮೃತರಾಗಿದ್ದಾರೆ.
ಬುಧವಾರ ಬೆಳಿಗ್ಗಿನ ಜಾವ ಸುಮಾರು 4 ಗಂಟೆಗೆ ಈ ದುರಂತ ಸಂಭವಿಸಿದೆ. ಮೂವರು ಕಾರ್ಮಿಕ ಕಾರ್ಖಾನೆಯ ಮೂರನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದ್ದು, ಮೂವರು ಕಾರ್ಮಿಕರು ಮತ್ತು ಓರ್ವ ಕಂಟ್ರಾಕ್ಟರ್ ಸೇರಿ ಒಟ್ಟು ನಾಲ್ವರು ಮೃತರಾಗಿದ್ದಾರೆ.
ಇದ್ದಕ್ಕಿದ್ದಂತೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರ್ಮಿಕರಿಗೆ ಹೊರ ಹೋಗುವುದಕ್ಕೆ ದಾರಿ ಕಾಣದೆ, ಉಸಿರುಗಟ್ಟಿ ಅಲ್ಲಿಯೇ ಮೃತರಾಗಿದ್ದಾರೆ.

ಮಂಗಳವಾರವಷ್ಟೇ ಛತ್ತೀಸ್ ಗಢದ ಭಿಹಾಲಿ ಎಂಬಲ್ಲಿ ಸ್ಟೀಲ್ ಕಾರ್ಖಾನೆಯೊಂದರ ಪೈಪ್ ಲೈನ್ ಸ್ಫೋಟಿಸಿದ ಪರಿಣಾಮ 9 ಮಂದಿ ಮೃತರಾದ ದಾರುಣ ಘಟನೆ ನಡೆದಿತ್ತು.
ಈ ಘಟನೆಯಲ್ಲಿ 14 ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದರು.












Click it and Unblock the Notifications