ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಟಿಎಂಗಳಲ್ಲಿ ಹಣದ ಕೊರತೆ, ನಿಖರ ಕಾರಣ ಏನು?

|
Google Oneindia Kannada News

ಬೆಂಗಳೂರು, ಜನವರಿ 10 : ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳ ಎಟಿಎಂಗಳಲ್ಲಿ ಹಣದ ಕೊರತೆ ಎದುರಾಗಿದೆ. ಇದಕ್ಕೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ, ಜನರು ಪರದಾಡುತ್ತಿರುವುದಂತೂ ಸತ್ಯ.

200 ರೂ. ಹೊಸ ನೋಟುಗಳ ಹಂಚಿಕೆಗೆ ಎಟಿಎಂಗಳ ತಂತ್ರಾಶವನ್ನು ಬದಲಾವಣೆ ಮಾಡಲಾಗುತ್ತಿದೆ. ಆದ್ದರಿಂದ, ಎಟಿಎಂಗಳಲ್ಲಿ ಹಣದ ಕೊರತೆ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಸಂಕ್ರಾಂತಿ ವಿಶೇಷ ಪುಟ

Many ATMs facing problems, What could be the cause

ರಿಸರ್ವ ಬ್ಯಾಂಕ್ ಆಫ್ ಇಂಡಿಯಾ ದೇಶದ 2.2 ಲಕ್ಷ ಎಟಿಎಂಗಳಲ್ಲಿ 200 ರೂ. ನೋಟುಗಳನ್ನು ಹಂಚಿಕೆಗೆ ತಂತ್ರಾಶ ಅಪ್‌ಡೇಟ್ ಮಾಡುವಂತೆ ಸೂಚಿಸಿದೆ. 2017ರ ಆಗಸ್ಟ್‌ನಲ್ಲಿ ಬಿಡುಗಡೆಯಾದ 200 ರೂ. ನೋಟುಗಳು ಸದ್ಯ ಬ್ಯಾಂಕ್‌ಗಳಲ್ಲಿ ದೊರೆಯುತ್ತಿದೆ. ಶೀಘ್ರದಲ್ಲೇ ಎಟಿಎಂಗಳಲ್ಲಿ ಲಭ್ಯವಾಗಲಿದೆ.

ಹೊಸ 10, 50, 200 ರುಪಾಯಿ ನೋಟುಗಳತ್ತ ನೋಟಹೊಸ 10, 50, 200 ರುಪಾಯಿ ನೋಟುಗಳತ್ತ ನೋಟ

ಡಿಜಿಟಲ್ ಪೇಮೆಂಟ್ : ಹಣದ ಕೊರತೆಗೆ ಮತ್ತೊಂದು ಕಾರಣ ಡಿಜಿಟಲ್ ಪೇಮೆಂಟ್ ಉತ್ತೇಜಿಸಲು ಹಣದ ಕೊರತೆ ಉಂಟು ಮಾಡಲಾಗುತ್ತಿದೆ ಎಂಬುದು. ಆದರೆ, ಇದು ಕೇವಲ ಗಾಳಿಸುದ್ದಿಯಾಗಿದೆ.

ಸಣ್ಣ ವರ್ತಕರಿಗೆ ಆರ್ ಬಿಐ ಕೊಡುಗೆ: ಡೆಬಿಟ್ ಕಾರ್ಡ್ ಎಂಡಿಆರ್ ಕಡಿತಸಣ್ಣ ವರ್ತಕರಿಗೆ ಆರ್ ಬಿಐ ಕೊಡುಗೆ: ಡೆಬಿಟ್ ಕಾರ್ಡ್ ಎಂಡಿಆರ್ ಕಡಿತ

500 ಮತ್ತು 1000 ರೂ. ನೋಟುಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಿದಾಗ ಎಟಿಎಂಗಳಲ್ಲಿ ಹಣದ ಕೊರತೆ ಉಂಟಾಗಿದ್ದನ್ನು ನೆನೆಪು ಮಾಡಿಕೊಳ್ಳಬಹುದು. ಆಗ ಎಟಿಎಂಗಳ ಮುಂದೆ ಜನರ ಸರತಿ ಸಾಲು ಸಾಮಾನ್ಯವಾಗಿತ್ತು.

English summary
Many ATM machines across the country are said to be either out of cash or are not working which is causing great inconvenience to people. The exact reason behind non-functioning of ATMs is not clear.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X