'ಯುಎಸ್ಎ ಖಾತೆಯಲ್ಲಿ ಭಾರತದ ಕೋಟ್ಯಂತರ ದುಡ್ಡಿದೆ'

Posted By:
Subscribe to Oneindia Kannada

ನವದೆಹಲಿ, ಮಾ. 06: ಅಮೆರಿಕದ ಪೆಂಟಗನ್ ನಿಯಂತ್ರಣದ ಬ್ಯಾಂಕ್ ಖಾತೆಯಲ್ಲಿ ಭಾರತಕ್ಕೆ ಸೇರಿದ ಕೋಟ್ಯಂತರ ಮೊತ್ತವಿದೆ. ಆದರೆ, ನಾವು ಹೊಸ ಶಸ್ತ್ರಾಸ್ತ್ರ ಖರೀದಿಗಾಗಿ ಮತ್ತೆ ಮತ್ತೆ ಹಣ ನೀಡುತ್ತಿದ್ದೇವೆ ಎಂದು ರಕ್ಷಣಾ ಖಾತೆ ಸಚಿವ ಮನೋಹರ್ ಪಾರಿಕ್ಕಾರ್ ಅವರು ಹೇಳಿದ್ದಾರೆ.

ರಕ್ಷಣಾ ಸಚಿವಾಲಯ(MoD) ಹಣವನ್ನು ಹೇಗೆ ನಿರ್ವಹಿಸುತ್ತಿದೆ ಎಂಬ ಬಗೆಗಿನ ಚಿತ್ರಣವೊಂದನ್ನು ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಬಹಿರಂಗಪಡಿಸಿದ್ದಾರೆ. ಈ ಮೊದಲೇ ಅಮೆರಿಕದ ಪೆಂಟಾ ಗನ್‌ಗೆ ಪಾವತಿಸಲಾದ 300 ಕೋಟಿ ಡಾಲರ್ ಅಲ್ಲೇ ಕೊಳೆಯುತ್ತಿದೆ. ಹೊಸ ಖರೀದಿಗೆ ಮತ್ತೆ ಹಣ ನೀಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

Manohar Parrikar

ವಿದೇಶಿ ಸೇನಾ ವ್ಯಾಪಾರ ಯೋಜನೆ(FMS) ಯಡಿ ಶಸ್ತ್ರಾಸ್ತ್ರಗಳ ಖರೀದಿಗೆ ಪಾವತಿ ಮಾಡಿದ್ದ 300 ಕೋಟಿ ಡಾಲರ್ (3 ಬಿಲಿಯನ್ ಡಾಲರ್) ಮೊತ್ತ ಇನ್ನೂ ಪೆಂಟಾಗನ್ ಖಾತೆಯಲ್ಲೇ ಇದೆ. ಬೋಯಿಂಗ್ ಹಾಗೂ ಲಾಕ್‌ಹೀಡ್ ಮಾರ್ಟಿನ್‌ನಂಥ ಸಂಸ್ಥೆಗಳಿಗೆ ಪಾವತಿಸಬೇಕಾದ ಹಣ ಇದಾಗಿದೆ ಎಂದು ಮನೋಹರ್ ವಿವರಿಸಿದರು.

ಅಸಮರ್ಪಕ ನಿರ್ವಹಣೆಯಿಂದ, ಖಾತೆಯ ಬಗ್ಗೆ ಸೂಕ್ತ ಗಮನ ನೀಡದಿರುವುದರಿಂದ 300 ಕೋಟಿ ಡಾಲರ್ ಹಣ ಅಲ್ಲಿ ರಾಶಿ ಬಿದ್ದಿದೆ. ಇದಕ್ಕೆ ಯಾವ ಬಡ್ಡಿಯೂ ಬರುತ್ತಿಲ್ಲ. ಕೇವಲ ಅವರ ಖಾತೆಯಲ್ಲಿ ಬಿದ್ದಿದೆ ಎಂದು ಪಾರಿಕ್ಕರ್ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಇದನ್ನು ಗಮನಿಸಿ ಹಣವನ್ನು ವಾಪಸ್ ಪಡೆದು ಹಣಕಾಸು ಸಚಿವಾಲಯಕ್ಕೆ ನೀಡಲಾಗಿದೆ. ಇದೀಗ 300 ಕೋಟಿ ಡಾಲರ್ ನಿಂದ ಈ ಪ್ರಮಾಣ 170 ರಿಂದ 180 ಕೋಟಿ ಡಾಲರ್‌ಗೆ ಇಳಿದಿದೆ. ಕಳೆದ ವರ್ಷ 6,000 ಕೋಟಿ ಡಾಲರ್ ಪಾವತಿಸಿದ್ದು, ಸುಮಾರು 800 ಕೋಟಿ ಡಾಲರ್ ಉಳಿಸಿದ್ದೇವೆ ಎಂದು ಸಮರ್ಥಿಸಿಕೊಂಡರು. ಇದೀಗ ಕಟ್ಟು ನಿಟ್ಟಾಗಿ, ಹಣಪಾವತಿ ವಿಧಾನದ ಮೇಲೆ ನಿಗಾ ಇರಿಸಲಾಗಿದೆ ಎಂದು ತಿಳಿಸಿದರು.

ಮುಂಬರುವ ವರ್ಷಗಳಲ್ಲಿ ಸುಮಾರು 1 ಲಕ್ಷ ಕೋಟಿ ರು ಮೌಲ್ಯದ ಹೊಸ ಖರೀದಿ ವ್ಯವಹಾರವನ್ನು ರಕ್ಷಣಾ ಇಲಾಖೆ ಮಾಡಲಿದೆ. ರಫೆಲ್ ಸಂಸ್ಥೆ ಜತೆ 63,000 ಕೋಟಿ ರು ಪ್ರಮುಖವಾದ ಒಪ್ಪಂದವಾಗಲಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Defence Minister Manohar Parrikar revealed that he discovered India was paying the US Department of Defense (Pentagon) for new weaponry, even though $3 billion which had been earlier remitted was lying in an account in Washington as reported on Business Standard.
Please Wait while comments are loading...