Manipur: ಕುಕಿ ನಾಯಕನ ಮನೆಗೆ ಬೆಂಕಿ- ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದ ಉದ್ರಿಕ್ತರು, ಅತಿರೇಕಕ್ಕೆ ತಲುಪಿದ ಹಿಂಸಾಚಾರ
ಇಂಫಾಲ, ಜುಲೈ 04: ಮಣಿಪುರದ ಚುರಾಚಂದ್‌ಪುರದಲ್ಲಿ ಕುಕಿ ನ್ಯಾಷನಲ್ ಆರ್ಗನೈಸೇಶನ್ (ಕೆಎನ್‌ಒ) ವಕ್ತಾರ ಸೆಲೆನ್ ಹಾಕಿಪ್ ಅವರ ಮನೆಗೆ ಸೋಮವಾರ ರಾತ್ರಿ ಬೆಂಕಿ ಹಚ್ಚಲಾಗಿದೆ. ಕಾಂಗ್ಪೊಕ್ಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 2 ನಲ್ಲಿನ ದಿಗ್ಬಂಧನವನ್ನು ತೆಗೆದುಹಾಕುವುದಾಗಿ ಕೆಎನ್‌ಒ ಮತ್ತು ಯುನೈಟೆಡ್ ಪೀಪಲ್ಸ್ ಫ್ರಂಟ್ ಘೋಷಿಸಿದ್ದವು. ಇದಾದ ಒಂದು ದಿನದ ಬಳಿಕ ಈ ದುರ್ಘಟನೆ ಸಂಭಂಧಿವಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆ ಇದೆ.
ಹಾಕಿಪ್ ಅವರ ಮನೆ ಚುರಾಚಂದಪುರ ಜಿಲ್ಲೆಯ ಸಾಂಗ್ಪಿಯಲ್ಲಿದೆ. ಅವರ ಮನೆಯನ್ನು ಸಂಪೂರ್ಣವಾಗಿ ಸುಟ್ಟ ಹಾಕಲಾಗಿದೆ. ಇದಾದ ಬಳಿಕ ಇಂಫಾಲ್‌ನ ಕೆಲವು ಭಾಗಗಳಲ್ಲಿ ಮೈತೆಯ್ ನಾಯಕರ ಆಸ್ತಿಗಳನ್ನು ಸುಟ್ಟುಹಾಕಿದ ಹಲವಾರು ಘಟನೆಗಳು ನಡೆದಿವೆ. ಇದು ಕುಕಿ-ಜೋಮಿ ಪ್ರಾಬಲ್ಯವಿರುವ ಪ್ರದೇಶದಲ್ಲಿ ಕುಕಿ ನಾಯಕನ ನಿವಾಸವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ ಮೊದಲ ಘಟನೆಯಾಗಿದೆ.

ರಾತ್ರಿ 11:30 ರ ಸುಮಾರಿಗೆ ಈ ಘಟನೆ ನಡೆದಿದೆ. ಆ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಹಾಕಿಪ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 2 ರಾಜ್ಯದ ಅತಿ ಪ್ರಮುಖ ಹೆದ್ದಾರಿಯಾಗಿದೆ. ಇದು ಇಂಫಾಲ್ ಅನ್ನು ನಾಗಾಲ್ಯಾಂಡ್‌ನ ದಿಮಾಪುರ್‌ಗೆ ಸಂಪರ್ಕಿಸುತ್ತದೆ. ಮೇ 3 ರಂದು ಮೊದಲು ಹಿಂಸಾಚಾರ ಪ್ರಾರಂಭವಾದಾಗಿನಿಂದ ಈ ರಸ್ತೆಯ ಮೇಲೆ ಪೊಲೀಸರು ದಿಗ್ಬಂಧನ ಹೇರಿದ್ದಾರೆ. ಈ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಸರಬರಾಜಿನ ಮೇಲೆ ಪರಿಣಾಮ ಬೀರಿದೆ.
ಈ ಹಿನ್ನೆಲೆಯಲ್ಲಿ ಕುಕಿ ಸಮದಾಯದವರು ಹೆದ್ದಾರಿ ಮೇಲಿನ ದಿಗ್ಬಂಧನವನ್ನು ತೆಗೆದುಹಾಕಿದ್ದಾರೆ. ಘಟನೆಯ ಬಳಿಕ ಭುಗಿಲೆದ್ದ ಹಿಂಸಾಚಾರವು ಕುಕಿ ಜನಾಂಗದವನ್ನು ಗುರಿಯಾಗಿಸಿ ನಡೆದಿದೆ. ಕುಕಿ ಮುಖಂಡನ ನಿವಾಸವನ್ನು ಸಂಪೂರ್ಣವಾಗಿ ಸುಟ್ಟು ಹಾಕಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಣಿಪುರದಲ್ಲಿ ಶಾಂತಿ ಮಾತುಕತೆ ನಡೆಸಿದ ನಂತರವೂ ಹಿಂಸಾಚಾರ ಮುಂದುವರಿದಿರುವುದು ಕೇಂದ್ರ ಸರ್ಕಾರವನ್ನು ಚಿಂತೆಗೀಡು ಮಾಡಿದೆ.
ಮೇ 3 ರಿಂದ ಮೈಟೆಯಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಘರ್ಷಣೆಗಳಿಂದ ನಲುಗುತ್ತಿರುವ ಮಣಿಪುರದಲ್ಲಿ ಈ ವರೆಗೂ ಕನಿಷ್ಠ 122 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸುಮಾರು 50,000 ಜನರನ್ನು ಸ್ಥಳಾಂತರಿಸಲಾಗಿದೆ. ಸಾವಿರಾರು ಮನೆಗಳು ಮತ್ತು ಧಾರ್ಮಿಕ ಸ್ಥಳಗಳನ್ನು ಸುಟ್ಟು ಹಾಕಲಾಗಿದೆ.












Click it and Unblock the Notifications