Manipura Violence: ಹಿಂಸಾಚಾರದ ವಿಡಿಯೋ, ಫೋಟೊ ಶೇರ್ ಮಾಡದಂತೆ ಸರ್ಕಾರ ಆದೇಶ

ಅಕ್ಟೋಬರ್ 13: ಇಡೀ ದೇಶವೇ ತಿರುಗಿ ನೋಡುವಷ್ಟರ ಮಟ್ಟಿಗೆ ಗಲಭೆ, ಘರ್ಷಣೆಗಳು ನಡೆದು ಉದ್ವಿಗ್ನ ಪರಿಸ್ಥಿತಿ ಮಣಿಪುರದಲ್ಲಿ ನಿರ್ಮಾಣವಾಗಿತ್ತು. ಇಲ್ಲಿನ ಹಿಂಸಾಚಾರಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಛಾಯಾಚಿತ್ರಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ. ಇದರಿಂದ ಉದ್ವಿಗ್ನ ಸ್ಥಿತಿ ಎದುರಿಸುತ್ತಿರುವ ಆ ರಾಜ್ಯದ ಬಿಜೆಪಿ ಸರ್ಕಾರ ಕೆಲವು ನಿರ್ಬಂಧಗಳನ್ನು ವಿಧಿಸಿದೆ.

ಮಣಿಪುರ ಹಿಂಸಾಚಾರ ಕುರಿತಂತೆ ಯಾವುದೇ ವಿಡಿಯೋ ಆಗಲಿ, ಫೋಟೊಗಳನ್ನಾಗಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ ಎಂದು ಇಲ್ಲಿನ ಬಿಜೆಪಿ ಸರ್ಕಾರ ನಿಷೇಧ ಹೇರಿದೆ. ಈ ಮೂಲಕ ಸಂಘರ್ಷ ಪೀಡಿತ ರಾಜ್ಯಕ್ಕೆ ಸಹಜ ಸ್ಥಿತಿ ತರುವತ್ತ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

manipur-govt-order-issued-to-violence

ಮಣಿಪುರದ ಗೃಹ ಇಲಾಖೆ ಅಧಿಕಾರಿಗಳಾದ ಟಿ ರಂಜಿತ್ ಸಿಂಗ್ ಅವರು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ನಿಯಂತ್ರಿಸುವ ನಿಟ್ಟಿನಲ್ಲಿ ಹಿಂಸಾಚಾರ ಕುರಿತ ವೀಡಿಯೊಗಳು ಮತ್ತು ಚಿತ್ರ ಪೋಸ್ಟ್ ಮಾಡದಂತೆ ತಿಳಿಸಿ ಆದೇಶ ಹೊರಡಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗೆ ಅವಕಾಸ ಇಲ್ಲ

ಮಣಿಪುರದ ರಾಜ್ಯಪಾಲರು, ನಿಯತಕಾಲಿಕೆ, ಕಂಪ್ಯೂಟರ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಾದ (ಎಲೆಕ್ಟ್ರಾನಿಕ್) ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್‌ನಂತಹ ವಿವಿಧ ಆನ್‌ಲೈನ್ ವೇದಿಕೆಗಳಲ್ಲಿ ಘಟನೆ ಸಂಬಂಧಿಸಿದ ವಿಡಿಯೋ, ಫೋಟೊಗಳ ಪ್ರಸಾರ ಇಲ್ಲವೇ ಪೊಸ್ಟ್ ಹಂಚಿಕೊಳ್ಳಲು ಯಾರಿಗೂ ಅವಕಾಶ ಇಲ್ಲ ಎಂಬುದನ್ನು ಆದೇಶದಲ್ಲಿ ಪುನರುಚ್ಚರಿಸಿದ್ದಾರೆ.

ಫೋನ್, ಸಂದೇಶ ರವಾನೆ, ಮೊಬೈಲ್‌ನಲ್ಲಿ ಹಿಂಸಾಚಾರದ ವೀಡಿಯೊಗಳು/ಚಿತ್ರಗಳು ಇಟ್ಟುಕೊಂಡಿದ್ದರೆ ಅಂತವರು ನ್ಯಾಯವ್ಯಾಪ್ತಿ ಲೆಕ್ಕಿಸದೆ ಹತ್ತಿರದ ಪೊಲೀಸ್ ಅಧೀಕ್ಷಕರನ್ನು ಸಂಪರ್ಕಿಸಬೇಕು. ಇಂತಹ ವಿಡಿಯೋಗಳನ್ನು ಹರಡಲು ಉತ್ತೇಜಿಸುವುದು ಮಾಡಬಾರದು ಎಂದು ತಿಳಿಸಿದ್ದಾರೆ.

ಇಂಟರ್‌ನೆಟ್ ಸ್ಥಗಿತ ಬಳಿಕ ಈ ಆದೇಶ

ಮೊಬೈಲ್ ಮತ್ತು ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಬಳಕೆಗೆ ಈಗಾಗಲೇ ನಿರ್ಬಂಧ ಇತ್ತು. ಅದರೊಂದಿಗೆ ಈ ವಿಡಿಯೋ, ಫೋಟೊ ಹಂಚಿಕೆ ನಿಷೇಧ ಆದೇಶವು ಇದೀಗ ಹೊರ ಬಿದ್ದಿದೆ. ಕಳೆದ ಮೇ 3 ರಂದು ಬಹುಸಂಖ್ಯಾತ ಮೈತೆಯೀ ಮತ್ತು ಕುಕಿ ಬುಡಕಟ್ಟು ಜನಾಂಗದವರ ನಡುವಿನ ಗಲಭೆ ಭುಗಿಲೆದ್ದು, ಅದು ಹಿಂಸಾತ್ಮಕದ ಕಡೆಗೆ ತಿರುಗಿತ್ತು. ಇದರಿಂದ ಮಣಿಪುರದತ್ತ ಇಡಿ ದೇಶವೇ ತಿರುಗಿ ನೋಡುವಂತಾಯಿತು.

manipur-govt-order-issued-to-violence

ಘಟನೆಯಲ್ಲಿ ಸುಮಾರು 175 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸುಮಾರು 60,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಅಲ್ಲದೇ ಇಬ್ಬರು ಮಹಿಳೆಯರ ನಗ್ನ ಮೆರವಣಿಗೆ, ಸಾಮೂಹಿಕ ಲೈಂಗಿಕ ಕಿರುಕುಳ ನೀಡಿದ ವಿಡಿಯೋ ವೈರಲ್ ಆಗಿತ್ತು. ಇದು ದೇಶಾದ್ಯಂತ ಮತ್ತೆ ಘರ್ಷಣೆಗೆ, ಆಕ್ರೋಶಕ್ಕೆ ಕಾರಣವಾಯಿತು.

ಕಾಣೆಯಾದ ಮಕ್ಕಳ ಫೋಟೊ ವೈರಲ್: ಅಂತರ್ಜಾಲ ಮತ್ತೆ ಬಂದ್

ಕೇಂದ್ರ ಸರ್ಕಾರ ಈ ನಗ್ನ ಮೆರವಣಿಗೆ, ಕಿರುಕುಳ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಆದೇಶಿಸಿದೆ. ಪರಿಸ್ಥಿತಿ ಸ್ವಲ್ಪ ಸುಧಾರಿಸಿದ ನಂತರ, ರಾಜ್ಯ ಸರ್ಕಾರವು ಕಳೆದ ಸೆಪ್ಟೆಂಬರ್ 23 ರಂದು ಮೊಬೈಲ್ ಇಂಟರ್‌ನೆಟ್ ಬಳಕೆಗೆ ಅವಕಾಶ ದೊರೆಯಿತು. ಆದರೆ ಇಬ್ಬರು ಕಾಣೆಯಾಗಿದ್ದ ಮೈತೆಯಿ ಸಮುದಾಯ ಮಕ್ಕಳ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಇದು ಮತ್ತೆ ಪರಿಸ್ಥಿತಿ ನಿಯಂತ್ರಣ ತಪ್ಪಲು ಆರಂಭಿಸಿತು. ಹೀಗಾಗಿ ಮತ್ತೆ ಇಂಟರ್‌ನೆಟ್ ನಿಷೇಧಿಸಲಾಯಿತು.

ಜುಲೈ 6 ರಿಂದ ನಾಪತ್ತೆಯಾದ ಮಕ್ಕಳ ಪ್ರಕರಣವನ್ನು ಕೇಂದ್ರವು ತನಿಖೆಯನ್ನು ಕೈಗೊಳ್ಳಲು ವಿಶೇಷ ಸಿಬಿಐ ತಂಡಕ್ಕೆ ಸೂಚಿಸಿತು. ಪ್ರಕರಣ ಸಂಬಂಧ ಆರು ಕುಕಿ ವ್ಯಕ್ತಿಗಳನ್ನು ಬಂಧಿಸಲಾಯಿತು. ಸೋಮವಾರ ವ್ಯಕ್ತಿಯೊಬ್ಬರನ್ನು ಸುಟ್ಟು ಹಾಕಿದ್ದ ವಿಡಿಯೋ ವೈರಲ್ ಆಗುತ್ತಿದ್ದಂತೆ ಕುಕಿ ಬೆಟ್ಟದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ಉಂಟಾಯಿತು.

ಈ ರೀತಿಯ ವಿಡಿಯೋ, ಫೊಟೊಗಳು ಇದ್ದರೆ ಅದನ್ನು ಪೊಲೀಸರಿಗೆ ಒಪ್ಪಿಸುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಲು ತನಿಖೆಗೆ ಸಹಕರಿಸುವಂತೆ ಆದೇಶದ ಮೂಲಕ ಜನರಿಗೆ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+