ಡಿಗ್ರಿ ಪಡೆಯಲು ತಂದೆ ಹೆಸರು ಕಡ್ಡಾಯ ಬೇಡ ಮೇನಕಾ ಗಾಂಧಿ
ಪದವಿ ಪ್ರಮಾಣ ಪತ್ರದಲ್ಲಿ ವಿದ್ಯಾರ್ಥಿಗಳು ತಂದೆಯ ಹೆಸರು ದಾಖಲಿಸುವುದು ಕಡ್ಡಾಯವಾಗಬಾರದು. ಕೆಲವರಿಗೆ ತಾಯಿ ಮಾತ್ರ ಇರುತ್ತಾರೆ. ಇಂಥಹವರನ್ನು ಗಮನಿಸಿಕೊಂಡು ಈ ಪತ್ರ ಬರೆಯುತ್ತಿರುವುದಾಗಿ ಮೇನಕಾ ಗಾಂಧಿ ಹೇಳಿದ್ದಾರೆ.
ನವ ದೆಹಲಿ, ಏಪ್ರಿಲ್ 17: ಪದವಿ ಪ್ರಮಾಣ ಪತ್ರ ಪಡೆಯಲು ತಂದೆಯ ಹೆಸರು ಕಡ್ಡಾಯ ಬೇಡ ಎಂದು ಕೋರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.
ಪದವಿ ಪ್ರಮಾಣ ಪತ್ರದಲ್ಲಿ ವಿದ್ಯಾರ್ಥಿಗಳು ತಂದೆಯ ಹೆಸರು ದಾಖಲಿಸುವುದು ಕಡ್ಡಾಯವಾಗಬಾರದು. ಕೆಲವರಿಗೆ ತಾಯಿ ಮಾತ್ರ ಇರುತ್ತಾರೆ. ಇಂಥಹವರನ್ನು ಗಮನಿಸಿಕೊಂಡು ಈ ಪತ್ರ ಬರೆಯುತ್ತಿರುವುದಾಗಿ ಮೇನಕಾ ಗಾಂಧಿ ಹೇಳಿದ್ದಾರೆ.['ಮಾನವ ಗುರಾಣಿ', ಭಾರತೀಯ ಸೇನೆ ವಿರುದ್ದ ಎಫ್ಐಆರ್]

ಈ ಹಿಂದೆ ಪಾಸ್ಪೋರ್ಟ್ ಗೆ ಸಂಬಂಧಿಸಿದಂತೆಯೂ ಮೇನಕಾ ಗಾಂಧಿ ಇದೇ ರೀತಿಯ ಮನವಿ ಸಲ್ಲಿಸಿದ್ದರು. ಈ ಕುರಿತು ಹೇಳಿಕೆ ನೀಡಿರುವ ಮೇನಕಾ ಗಾಂಧಿ ಹಲವು ಒಂಟಿ ತಾಯಂದಿರು, ಗಂಡನಿಂದ ದೂರವಾದವರು, ವಿಧವೆಯರು ನನ್ನ ಬಳಿ ಬರುತ್ತಾರೆ. ತಂದೆಯ ಹೆಸರನ್ನು ಡಿಗ್ರಿ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸುವುದು ಕಡ್ಡಾಯವಾಗಿದ್ದರಿಂದ ಅವರ ಮಕ್ಕಳಿಗೆ ಪ್ರಮಾಣಪತ್ರ ಪಡೆಯಲಾಗುತ್ತಿಲ್ಲ ಎಂದು ಹೇಳಿದ್ದಾರೆ.[ವಿಮಾನ ಹೈಜಾಕ್ ಬೆದರಿಕೆ ಸುಳ್ಳು. ಮತ್ತೇನು?]
ಈ ಹಿಂದೆ ಇದೇ ರೀತಿಯಲ್ಲಿ ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಗೆ ಮೇನಕಾ ಗಾಂಧಿ ಪತ್ರ ಬರೆದು ಒಂಟಿ ತಾಯಂದಿರು ದೌರ್ಜನ್ಯ ಅನುಭವಿಸುತ್ತಿದ್ದಾರೆ. ಹಾಗಾಗಿ ತಂದೆಯ ಹೆಸರು ಉಲ್ಲೇಖಿಸುವುದು ಪಾಸ್ಪೋರ್ಟ್ ಗಳಲ್ಲಿ ಕಡ್ಡಾಯವಾಗಬಾರದು ಎಂದು ಒತ್ತಾಯಿಸಿದ್ದರು.












Click it and Unblock the Notifications