ಏರ್ ಇಂಡಿಯಾ ಸಿಬ್ಬಂದಿಗೆ ಕಡ್ಡಾಯ ಕೋವಿಡ್ - 19 ಪರೀಕ್ಷೆ

ನವದೆಹಲಿ, ಮೇ 31 : ದೆಹಲಿ-ಮಾಸ್ಕೋ ಏರ್ ಇಂಡಿಯಾ ವಿಮಾನದ ಪೈಲೆಟ್‌ಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು. ಇದರಿಂದಾಗಿ ಶನಿವಾರ ಭಾರತೀಯರನ್ನು ಕರೆತರಲು ಹೊರಟ್ಟಿದ್ದ ವಿಮಾನ ಮಾರ್ಗ ಮಧ್ಯಯೇ ವಾಪಸ್ ಆಗಿತ್ತು.

Recommended Video

      ಲಾಕ್‌ಡೌನ್ ನಂತರ ಹಾರಿದ ಮೊದಲ ವಿಮಾನದಲ್ಲಿನ ಕನ್ನಡದ ಗಗನಸಖಿ| Kannadati Air Hostess Explain Current situation

      ಏರ್ ಇಂಡಿಯಾ ಈಗ ವಿಮಾನದ ಎಲ್ಲಾ ಸಿಬ್ಬಂದಿಗಳಿಗೆ ಕೋವಿಡ್ - 19 ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ. ಕೋವಿಡ್ - 19 ಪರೀಕ್ಷೆಯ ನೆಗೆಟೀವ್ ವರದಿ ತೋರಿಸದ ಹೊರತು ಅವರಿಗೆ ವಿಮಾನ ಹತ್ತಲು ಅವಕಾಶ ನೀಡುವುದಿಲ್ಲ.

      ಪ್ರಯಾಣಿಕರ ಸುರಕ್ಷತೆಯೇ ನಮ್ಮ ಆದ್ಯತೆಯಾಗಿದೆ. ಸಿಬ್ಬಂದಿಯಿಂದ ಪ್ರಯಾಣಿಕರಿಗೆ ಸೋಂಕು ಹಬ್ಬಬಾರದು. ಆದ್ದರಿಂದ, ಕೋವಿಡ್ - 19 ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಪರೀಕ್ಷೆ ವರದಿ ನೋಡಿದ ಬಳಿಕವೇ ಅವರನ್ನು ಸೇವೆಗೆ ನಿಯೋಜನೆ ಮಾಡಲಾಗುತ್ತದೆ ಎಂದು ಸೂಚನೆ ನೀಡಲಾಗಿದೆ.

      Mandatory COVID - 19 Test For Air India Pilots And Cabin Crew

      ಐಸಿಎಂಆರ್ ಮಾನ್ಯತೆ ಪಡೆದ ಲ್ಯಾಬ್‌ನಿಂದ ಏರ್ ಇಂಡಿಯಾ ಸಿಬ್ಬಂದಿಗಳು ಕೋವಿಡ್ - 19 ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಪರೀಕ್ಷೆ ಪೈಲೆಟ್, ವಿಮಾನದ ಸಿಬ್ಬಂದಿಗಳು ಈ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.

      ಶನಿವಾರ ಏರ್ ಬಸ್ ಎ320 7.15ಕ್ಕೆ ದೆಹಲಿಯಿಂದ ಟೇಕಾಫ್‌ ಆಗಿತ್ತು. ಮಾಸ್ಕೋದಲ್ಲಿ ಸಿಲುಕಿರುವ ಭಾರತೀರನ್ನು ಕರೆತರಲು ವಂದೇ ಭಾರತ್ ಮಿಷನ್ ಅಡಿ ಈ ವಿಮಾನ ತೆರಳಿತ್ತು. ಆದರೆ, ಪೈಲೆಟ್‌ಗೆ ಕೋವಿಡ್ - 19 ಸೋಂಕು ಇರುವುದು ಖಚಿತವಾದ ತಕ್ಷಣ ವಿಮಾನವನ್ನು ವಾಪಸ್ ಕರೆಸಿಕೊಳ್ಳಲಾಗಿತ್ತು.

      ದೆಹಲಿಯಿಂದ ಮಾಸ್ಕೋಗೆ ಹೊರಟಿದ್ದ ವಿಮಾನದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. 12.30ಕ್ಕೆ ವಿಮಾನ ದೆಹಲಿಗೆ ವಾಪಸ್ ಆಗಿತ್ತು. ಬಳಿಕ ಬೇರೆ ವಿಮಾನವನ್ನು ಏರ್ ಇಂಡಿಯಾ ಮಾಸ್ಕೋಗೆ ಕಳಿಸಿತು.

      ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ ಈ ಬಗ್ಗೆ ತನಿಖೆಗೆ ಆದೇಶ ನೀಡಿತ್ತು. ಪೈಲೆಟ್‌ನ ಕೋವಿಡ್ - 19 ಪರೀಕ್ಷೆ ವರದಿ ಬರುವ ಮೊದಲೇ ವಿದೇಶಕ್ಕೆ ತೆರಳಲು ನಿಯೋಜನೆ ಮಾಡಿದ್ದು ಏಕೆ ಎಂದು ಪ್ರಶ್ನೆ ಮಾಡಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+