ಮಹಾರಾಷ್ಟ್ರದ ದೇವಸ್ಥಾನದೊಳಗೆ ಶಸ್ತ್ರಸಜ್ಜಿತ ‘ಭಯೋತ್ಪಾದಕ’ನಿಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿ!

ವ್ಯಕ್ತಿಯೊಬ್ಬ ಸಶಸ್ತ್ರ 'ಭಯೋತ್ಪಾದಕ'ನಿಗೆ ಕಪಾಳಮೋಕ್ಷ ಮಾಡಿದ ಘಟನೆ ಮಹಾರಾಷ್ಟ್ರದ ಧುಲೆ ಜಿಲ್ಲೆಯ ದೇವ್‌ಪುರ ಪ್ರದೇಶದ ಶ್ರೀ ಸ್ವಾಮಿನಾರಾಯಣ ದೇವಸ್ಥಾನದೊಳಗೆ ನಡೆದಿದೆ. ಮುಖವಾಡದ 'ಭಯೋತ್ಪಾದಕ'ನಿಗೆ ಜೋರಾಗಿ ಕಪಾಳಮೋಕ್ಷ ಮಾಡುವ ಮೂಲಕ ವ್ಯಕ್ತಿ ಅನುಕರಣೀಯ ಧೈರ್ಯವನ್ನು ತೋರಿಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಏಕಾಏಕಿ ಸ್ವಾಮಿನಾರಾಯಣ ದೇವಸ್ಥಾನದೊಳಗೆ ನುಗ್ಗಿದ ಮುಖವಾಡದ 'ಭಯೋತ್ಪಾದಕ'ರು ವ್ಯಕ್ತಿಯೊಬ್ಬನಿಗೆ ರೈಫಲ್ ತೋರಿಸಿ ಬೆದರಿಸಿದರು. ಇಬ್ಬರು ಭಯೋತ್ಪಾದಕರು ರೈಫಲ್ನೊಂದಿಗೆ ಶಸ್ತ್ರಸಜ್ಜಿತನಾಗಿದ್ದರು. ರೈಫಲ್ ತೋರಿಸಿದ ತಕ್ಷಣ ವ್ಯಕ್ತಿ ಮಂಡಿಯೂರಿ ಕುಳಿತಿದ್ದಾನೆ. ಸ್ಥಳದಲ್ಲಿರುವವರು ಗಾಬರಿಗೊಂಡು ಆ ಸ್ಥಳದಿಂದ ಕೊಂಚ ದೂರಕ್ಕೆ ಓಡಿದ್ದಾರೆ.

man-who-slapped-an-armed-terrorist

ಕೊಂಚ ದೂರದಿಂದ ಘಟನೆಯನ್ನು ವೀಕ್ಷಿಸಿದ್ದಾರೆ. ಆದರೆ ಕೆಲವು ಪುರುಷರು ಹತ್ತಿರಕ್ಕೆ ಹೋಗಿ ಘಟನೆಯ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಈ ವೇಳೆ ಗುಂಪಿನಿಂದ ಬಂದ ವ್ಯಕ್ತಿಯೊಬ್ಬ ರೈಫಲ್ನೊಂದಿಗೆ ನಿಂತಿದ್ದ ಭಯೋತ್ಪಾದಕನಿಗೆ ಧೈರ್ಯದಿಂದ ಕಪಾಳಮೋಕ್ಷ ಮಾಡಿದ್ದಾನೆ. ಬಳಿಕ ಕೋಪಗೊಂಡ ವ್ಯಕ್ತಿಯನ್ನು ಭಯೋತ್ಪಾದಕರಿಂದ ಕೊಂಚ ದೂರ ಕರೆದುಕೊಂಡು ಹೋಗಲಾಯಿತು. ಆದರೆ ಈ ವಿಡಿಯೋ ಹಿಂದಿನ ಸತ್ಯ ಬೇರೆನೇ ಆಗಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವೀಡಿಯೊವನ್ನು ಇಲ್ಲಿ ವೀಕ್ಷಿಸಿ

ಈ ದೃಶ್ಯ ಮೇಲ್ನೋಟಕ್ಕೆ ಸ್ಪಷ್ಟವಾಗಿ "ಭಯೋತ್ಪಾದಕ ದಾಳಿ" ಮತ್ತು "ಭಕ್ತರನ್ನು ಒತ್ತೆಯಾಳುಗಳನ್ನಾಗಿ ಮಾಡುವಂತೆ" ಗೋಚರಿಸಿದರೂ ಇದು ಪೊಲೀಸರು ನಡೆಸಿದ ಅಣಕು ಡ್ರಿಲ್‌ನ ಭಾಗವಾಗಿತ್ತು. ಭಯೋತ್ಪಾದಕನೊಂದು ಭಾವಿಸಿ ಪೊಲೀಸ್ ಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿಯನ್ನು 35 ವರ್ಷದ ಪ್ರಶಾಂತ್ ಕುಲಕರ್ಣಿ ಎಂದು ಗುರುತಿಸಲಾಗಿದೆ.

"ಭಯೋತ್ಪಾದಕರು" ಹಠಾತ್ ಆಗಮನದಿಂದ ಭಕ್ತರು ಭಯಭೀತರಾಗಿದ್ದರು ಮತ್ತು ಪ್ರಶಾಂತ್ ಕುಲಕರ್ಣಿ ಅವರ ಸ್ವಂತ ಮಗಳು ಸೇರಿದಂತೆ ಕೆಲವು ಮಕ್ಕಳು ಅಳಲು ಪ್ರಾರಂಭಿಸಿದರು ಎಂದು ವರದಿಯಾಗಿದೆ. ಇದು ಅವನಿಗೆ ಕೋಪ ತರಿಸಿದೆ. ತಕ್ಷಣ ಅವನು "ಭಯೋತ್ಪಾದಕ"ರ ಕಡೆಗೆ ಓಡಿಹೋದನು. ಅವರ ಮೇಲೆ ಕೂಗಾಡಿದನು. ನಂತರ ಅವರಿಗೆ ಬಲವಾಗಿ ಹೊಡೆದನು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ವೀಡಿಯೊಗೆ ಹಲವಾರು ಕಾಮೆಂಟ್‌ಗಳು ಬಂದಿವೆ. ಕೆಲವನ್ನು ಹಂಚಿಕೊಳ್ಳಲಾಗಿದೆ.

'ಇದು ನಿಜವಾದ ಒಳ್ಳೆಯ ಕೆಲಸ, ವ್ಯಕ್ತಿಯ ಧೈರ್ಯಕ್ಕೆ ಮೆಚ್ಚಬೇಕು' ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.

'ರೈಫಲ್ನೊಂದಿಗೆ ಶಸ್ತ್ರಸಜ್ಜಿತನಾದವನ ಮೇಲೆ ಕೈ ಮಾಡುವುದು ಗುಂಡಿಗೆ ಬೇಕು' ಮತ್ತೊಬ್ಬರ ಕಾಮೆಂಟ್

'ಇದು ನಿಜವಾದ ಭಯೋತ್ಪಾದಕ ದಾಳಿ ಆಗಿದ್ದರೆ, ವ್ಯಕ್ತಿಯ ಪ್ರತಿಕ್ರಿಯೆ ಎಲ್ಲರಿಗೂ ಪಾಠವಾಗುತ್ತಿತ್ತು' ಮೂರನೇ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.

'ಸಾರ್ವಜನಿಕವಾಗಿ ಇಂತಹ ಅಣಕು ಡ್ರಿಲ್‌ ಮಾಡುವಾಗ ಜಾಗರೂಕರಾಗಿರಬೇಕು' ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

'ಇದು ಪೊಲೀಸರ ಅಣಕು ಡ್ರಿಲ್‌ ಆದರೂ ಸಾರ್ವಜನಿಕರು ನಿಜವೆಂದು ಭಾವಿಸಿ ಭಯಭೀತರಾಗಿದ್ದಾರೆ, ಇದರಲ್ಲಿ ಪುಟ್ಟ ಮಕ್ಕಳೂ ಗಾಬರಿಯಾಗಿದ್ದಾರೆ'

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+