ಪ್ರಧಾನಿ ಮೋದಿ ಜೊತೆ "Man vs Wild" ಎಲ್ಲಿ ಪ್ರಸಾರವಾಗುತ್ತೆ?
Recommended Video
ನವದೆಹಲಿ, ಆಗಸ್ಟ್ 10: ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯದಾಚೆಯ ಬದುಕಿನ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನವನ್ನು ಪ್ರಖ್ಯಾತ ವನ್ಯಪ್ರೇಮಿ, ಸಾಹಸಿ, ಬರಹಗಾರ ಬೇರ್ ಗ್ರಿಲ್ಸ್ ತಮ್ಮ 'ಮ್ಯಾನ್ ವರ್ಸಸ್ ವೈಲ್ಡ್' ಸರಣಿಯಲ್ಲಿ ಮಾಡಿದ್ದಾರೆ.
ಆಗಸ್ಟ್ 12 ರಂದು ಪ್ರಸಾರವಾಗಲಿರುವ ಈ ಸರಣಿ, ಸಂದರ್ಶನದ ಕೆಲವು ಆಯ್ದ ಭಾಗಗಳ ತುಣುಕುಗಳನ್ನು ಡಿಸ್ಕವರಿ ಚಾನೆಲ್ ಪ್ರಸಾರ ಮಾಡಿದೆ.
ಡಿಸ್ಕವರಿ ಚಾನೆಲ್ ಬಿಡುಗಡೆ ಮಾಡಿರುವ ತುಣುಕುಗಳಲ್ಲಿ, ಪ್ರಕೃತಿ ಬಗೆಗಿನ ತಮ್ಮ ಕಾಳಜಿ ಮತ್ತು ಅದರ ಸಂರಕ್ಷಣೆಯ ಅಗತ್ಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೊದಿ ಮುಕ್ತವಾಗಿ ಮಾತನಾಡಿದ್ದಾರೆ.

ಬೇರ್ ಗ್ರಿಲ್ಸ್ ಖ್ಯಾತ ಬ್ರಿಟಿಷ್ ಟಿವಿ ಶೋ 'ಮ್ಯಾನ್ ವರ್ಸ್ ವೈಲ್ಡ್' ಸರಣಿಯನ್ನು ಹಲವು ವರ್ಷಗಳಿಂದ ನಡೆಸಿಕೊಡುತ್ತಿದ್ದು, ಜನಪ್ರಿಯತೆ ಗಳಿಸಿದೆ.
ಉತ್ತರಾಖಂಡದ ಪ್ರಖ್ಯಾತ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕಿನಲ್ಲಿ ಈ ಟಿವಿ ಶೋ ಚಿತ್ರೀಕರಿಸಲಾಗಿದ್ದು, ಮೊದಲ ಎಪಿಸೋಡ್ ಆಗಸ್ಟ್ 12 ರಂದು ರಾತ್ರಿ 9 ಗಂಟೆಗೆ ಡಿಸ್ಕವರಿ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.
ಮೋದಿ ಜತೆಗಿನ Man vs Wild ಸರಣಿ ನೋಡುವುದು ಎಲ್ಲಿ?
* ಡಿಸ್ಕವರಿ ಚಾನೆಲ್ ನಲ್ಲಿ, ಮೊದಲ ಎಪಿಸೋಡ್ ಪ್ರಸಾರ ದಿನಾಂಕ ಆಗಸ್ಟ್ 12 ರಂದು ರಾತ್ರಿ 9 ಗಂಟೆಗೆ ಆರಂಭ.
* ಡಿಸ್ಕವರಿ ಚಾನೆಲ್ ಅಧಿಕೃತ ವೆಬ್ ತಾಣ(discoverychannel.co.in) ದಲ್ಲೂ ವೀಕ್ಷಿಸಬಹುದು.
* 12 ಚಾನೆಲ್ ಗಳಲ್ಲಿ ಏಕಕಾಲಕ್ಕೆ ಪ್ರಸಾರವಾಗಲಿದೆ. ಡಿಸ್ಕವರಿ ಚಾನೆಲ್, ಡಿಸ್ಕವರಿ ಎಚ್ ಡಿ ವರ್ಲ್ಡ್, ಅನಿಮಲ್ ಪ್ಲಾನೆಟ್, ಅನಿಮಲ್ ಪ್ಲಾನೆಟ್ ಎಚ್ ಡಿ ವರ್ಲ್ಡ್, ಟಿಎಲ್ ಸಿ, ಟಿಎಲ್ ಸಿ ಎಚ್ ಡಿ ವರ್ಲ್ಡ್, ಜೀತ್ ಪ್ರೈಮ್, ಜೀತ್ ಪ್ರೈಮ್ ಎಚ್ ಡಿ, ಡಿಸ್ಕವರಿ ಸೈನ್, ಡಿಸ್ಕವರಿ ಟರ್ಬೋ, ಡಿಸ್ಕವರಿ ಕಿಡ್ಸ್ ಹಾಗೂ ಆಗಸ್ಟ್ 12ರಂದು ಡಿಸ್ಕವರಿ ತಮಿಳು ಚಾನೆಲ್ ನಲ್ಲಿ ಪ್ರಸಾರವಾಗಲಿದೆ.
* ಡಿಸ್ಕವರಿ, ಡಿಸ್ಕವರಿ ಎಚ್ ಡಿ ವರ್ಲ್ಡ್ ನಲ್ಲಿ ಪ್ರಸಾರವಾಗುವ ಈ ಸರಣಿ ಇಂಗ್ಲೀಷ್, ಬೆಂಗಾಳಿ,ಹಿಂದಿ, ತಮಿಳು ಹಾಗೂ ತೆಲುಗು ಐದು ಭಾಷೆಗಳಲ್ಲಿ ಲಭ್ಯವಿರಲಿದೆ.












Click it and Unblock the Notifications