ಉಗ್ರನೆಂದು ತಪ್ಪಾಗಿ ಅರ್ಥೈಸಿ ವ್ಯಕ್ತಿಯನ್ನು ಕೊಂದ ಭಾರತೀಯ ಸೇನೆ?

Posted By:
Subscribe to Oneindia Kannada

ಗುವಾಹಟಿ, ಜೂನ್ 16: ಭಾರತ, ಮ್ಯಾನ್ಮಾರ್ ಗಡಿ ಭಾಗದಲ್ಲಿ ಅನುಮಾನಾಸ್ಪದವಾಗಿ ಓಡಾಡಿದ ವ್ಯಕ್ತಿಯೊಬ್ಬನನ್ನು ಭಯೋತ್ಪಾದಕನೆಂದು ತಪ್ಪಾಗಿ ಅರ್ಥೈಸಿದ ಭಾರತೀಯ ಸೇನೆ, ಗುಂಡು ಹಾರಿಸಿ ಆತನನ್ನು ಹತ್ಯೆಗೈದಿದೆ. ಬುಧವಾರ (ಜೂನ್ 14) ರಾತ್ರಿ ಈ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ತಿಂಗು ನೆಮು (35) ಎಂದು ಗುರುತಿಸಲಾಗಿದೆ. ಈ ಚಂಗ್ಲಾಂಗ್ ಜಿಲ್ಲೆಯವನೆಂದು ಸೇನೆ ಹೇಳಿದೆ. ಇದೇ ಜಿಲ್ಲೆಗೆ ಹೊಂದಿಕೊಂಡಂತಿರುವ ಮ್ಯಾನ್ಮಾರ್ ದೇಶದ ಗಡಿ ಭಾಗದಲ್ಲಿ ಅರೆಸೇನಾ ಪಡೆ ಈ ಗುಂಡಿನ ದಾಳಿ ನಡೆಸಿತ್ತು.

Man Shot Dead In Arunachal Pradesh By Army; 'Mistaken Identity', It Says

ಭಾರತೀಯ ಸೇನೆಯ ಹೇಳಿಕೆ ಪ್ರಕಾರ, ಮ್ಯಾನ್ಮಾರ್ ಗಡಿ ಪ್ರದೇಶದಲ್ಲಿ ಮ್ಯಾನ್ಮಾರ್ ನಿಂದ ಅಪಾಯಕಾರಿ ಉಗ್ರರು ಭಾರತದೊಳಕ್ಕೆ ನುಸುಳುವ ಸಾಧ್ಯತೆಗಳಿವೆ ಎಂದು ಗುಪ್ತಚರ ಇಲಾಖೆಯು ಹೇಳಿದ್ದರಿಂದಾಗಿ, ಈ ಪ್ರದೇಶದಲ್ಲಿ ಹದ್ದಿನ ಕಣ್ಣಿಡಲಾಗಿತ್ತು.

ಬುಧವಾರವೂ ಈ ಕಾರ್ಯಾಚರಣೆ ನಡೆಯುವಾಗ, ಅಕಸ್ಮಾತ್ತಾಗಿ ಅದೇ ಪ್ರದೇಶಕ್ಕೆ ಬಂದ ತಿಂಗು, ಸೈನಿಕರ ಕಣ್ಣಿಗೆ ಬಿದ್ದಿದ್ದಾನೆ. ಭಾರತೀಯ ಯೋಧರು ಆತನನ್ನು ವಶಕ್ಕೆ ತೆಗೆದುಕೊಳ್ಳಲು ಮೊದಲು ಯತ್ನಿಸಿದರೂ ಆತ ಅನುಮಾನಾಸ್ಪದವಾಗಿ ಓಡಿಹೋಗಲು ಯತ್ನಿಸಿದ್ದರಿಂದಾಗಿ ಆತನ ಮೇಲೆ ಗುಂಡು ಹಾರಿಸಲಾಗಿತ್ತು ಎಂದು ಸೇನಾ ಮೂಲಗಳು ಹೇಳಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A 35-year-old man was shot dead late last night in Arunachal Pradesh bordering Myanmar by Army, which has called it a case of "mistaken identity".
Please Wait while comments are loading...