ವಿಮಾನ ನಿಲ್ದಾಣದಲ್ಲೇ ಸಂಧ್ಯಾವಂದನೆ: ವೈರಲ್ ಆಯ್ತು ಆಚಾರ್ ಫೋಟೊ!
ಏರ್ಪೋರ್ಟಿನಲ್ಲಿ ವ್ಯಕ್ತಿಯೊಬ್ಬ ಮಡಿ ವಸ್ತ್ರ ತೊಟ್ಟು, ವಿಭೂತಿ ಬಳಿದುಕೊಂಡು, 'ಓಂ ಭೂರ್ ಭುವ ಸ್ವಃ... ತತ್ ಸವಿತುರ್ವರೇಣ್ಯಂ' ಎನ್ನುತ್ತ ಗಾಯತ್ರಿಮಂತ್ರ ಪಠಿಸಿದರೆ ಹೇಗಿರುತ್ತೆ? ಶ್ರೀನಿವಾಸ್ ಆಚಾರ್ ಸುದ್ದಿಯಾಗಿದ್ದು ಇದೇ ಕಾರಣಕ್ಕೆ.
ಲಕ್ನೊ, ಮಾರ್ಚ್ 25: ನಿನ್ನೆಯವರೆಗೂ ಒಬ್ಬ ಸಾಮಾನ್ಯ ಬ್ರಾಹ್ಮಣರಾಗಿದ್ದ ಶ್ರೀನಿವಾಸ್ ಆಚಾರ್ ಇದೀಗ ಇಡೀ ಭಾರತಕ್ಕೂ ಪರಿಚಿತರು! ಅದಕ್ಕೆ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಅವರದೊಂದು ಫೋಟೋ!
ಏರ್ಪೋರ್ಟಿನಲ್ಲಿ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಮಡಿ ವಸ್ತ್ರ ತೊಟ್ಟು, ಗೋಪಿ ಚಂದನ ಬಳಿದುಕೊಂಡು, 'ಓಂ ಭೂರ್ ಭುವ ಸ್ವಃ... ತತ್ ಸವಿತುರ್ವರೇಣ್ಯಂ...ಎನ್ನುತ್ತ ಗಾಯತ್ರಿ ಮಂತ್ರ ಶುರುಮಾಡಿದರೆ ಹೇಗಿರುತ್ತದೆ? ಶ್ರೀನಿವಾಸ್ ಆಚಾರ್ ಸುದ್ದಿಯಾಗಿದ್ದು ಇದೇ ಕಾರಣಕ್ಕೆ![ಆದಿತ್ಯನಾಥ್ ಕಚೇರಿಯಲ್ಲಿ ಮುಲಾಯಂ ಪುತ್ರ, ಸೊಸೆ: ಯಾಕೀ ಭೇಟಿ?]

ನಮ್ಮ ಕರ್ನಾಟಕದ ಹುಬ್ಬಳ್ಳಿಯ ಶ್ರೀನಿವಾಸ್ ಆಚಾರ್ ಮಾರ್ಚ್ 24 ಶುಕ್ರವಾರ, ಲಕ್ನೋ ಏರ್ಪೋರ್ಟಿನಲ್ಲಿ ಯಾವ ಮುಜುಗರವಿಲ್ಲದೆ ಸಂಧ್ಯಾವಂದನೆ ಪೂರೈಸಿ ಏರ್ಪೋರ್ಟಿನಲ್ಲಿದ್ದ ಸಾವಿರಾರು ಜನರ ಅಚ್ಚರಿಗೆ ಕಾರಣರಾದರು.
ಅವರು ಸಂಧ್ಯಾವಂದನೆ ಮಾಡುತ್ತಿದ್ದ ಫೋಟೋವನ್ನು ಅಶೋಕ್ ಕುಮಾರ್ ಎಂಬುವವರು ಸಾಮಾಜಿಕ ಜಾಲತಾಣಗಳಿಗೆ ಹಂಚಿದ್ದಾರೆ. [ಆದಿತ್ಯನಾಥ್ 'ಯೋಗಿಯೋ, ಭೋಗಿಯೋ'ಎಂದಿದ್ದ ಯುವಕನ ಬಂಧನ]
ಪ್ರಾರ್ಥನಾ ಸಮಯವಾಗುತ್ತಿದ್ದಂತೆಯೇ ಮುಸ್ಲಿಮರು ಹೀಗೆ ನಮಾಜ್ ಮಾಡುವುದನ್ನು ನೋಡಿದ್ದೆ, ಆದರೆ ಬ್ರಾಹ್ಮಣರೊಬ್ಬರು ಯಾವ ಮುಜುಗರವಿಲ್ಲದೆ ಪ್ರಾತಃ ವಿಧಿ ಮಾಡಿರುವುದನ್ನು ನೋಡಿದ್ದು ಇದೇ ಮೊದಲು ಎಂದು ಅವರು ಬರೆದುಕೊಂಡಿದ್ದಾರೆ.
ಈಗಾಗಲೇ ಸಾವಿರಕ್ಕೂ ಹೆಚ್ಚು ಮಂದಿ ಈ ಚಿತ್ರವನ್ನು ಶೇರ್ ಮಾಡಿದ್ದು, ಶ್ರೀನಿವಾಸ್ ಆಚಾರ್ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.












Click it and Unblock the Notifications