ಮಧ್ಯಪ್ರದೇಶ: ಶಾಲೆಯೆದುರಲ್ಲೇ ಯುವತಿಯ ಬರ್ಬರ ಹತ್ಯೆ
ಅನುಪ್ಪುರ್, ಫೆಬ್ರವರಿ 23: ಹದಿನಾರು ವರ್ಷದ ಯುವತಿಯೊಬ್ಬಳನ್ನು ವ್ಯಕ್ತಿಯೊಬ್ಬ ಆಕೆಯ ಶಾಲೆಯೆದುರಲ್ಲೇ ಕೊಚ್ಚಿ ಸಾಯಿಸಿದ ಬರ್ಬರ ಘಟನೆ ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯ ಕೊಟ್ಮಾ ಎಂಬಲ್ಲಿ ಗುರುವಾರ(ಫೆ.23)ನಡೆದಿದೆ.
ಆಲ್ ಗರ್ಲ್ಸ್ ಗವರ್ನ್ಮೆಂಟ್ ಸ್ಕೂಲ್ ನಲ್ಲಿ 11 ನೇ ತರಗತಿ ಓದುತ್ತಿದ್ದ ಆಕೆಯನ್ನು ಶಾಲೆಯೆದುರು ಮಚ್ಚಿನಿಂದ ಕೊಚ್ಚಿ ಸಾಯಿಸಲಾಗಿದೆ. ದುಷ್ಕರ್ಮಿ ಆಕೆಯ ಕತ್ತು ಸೀಳಿದ್ದರಿಂದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ಪೊಲಿಸರು ತಿಳಿಸಿದ್ದಾರೆ.
ಆರೋಪಿ ದಿಲೀಪ್ ಸಾಹು ಎಂಬುವವನಿರಬಹುದು ಎಂದು ಮೃತಯುವತಿಯ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. 2014 ರಲ್ಲಿಯೇ ದಿಲೀಪ್ ವಿರುದ್ಧ ಯುವತಿ ಮತ್ತವರ ಮನೆಯವರು ದೂರು ನೀದಿದ್ದರು. ಹಲವು ಬಾರಿ ಯುವತಿಯನ್ನು ದಿಲೀಪ್ ಛೇಡಿಸಿದ್ದಲ್ಲದೆ, ಆಕೆಯ ಮೇಲೆ ದೌರ್ಜನ್ಯ ಎಸಗಲು ಯತ್ನಿಸಿದ್ದ.

ಆದ್ದರಿಂದ ಆತನೇ ಕೊಲೆ ಮಾಡಿರಬಹುದೆಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದ್ದು, ಪೊಲೀಸರು ಆರೋಪಿಯ ಬಂಧನಕ್ಕೆ ಬಲೆಬೀಸಿದ್ದಾರೆ.












Click it and Unblock the Notifications