ಮಿನಿಷ್ಟ್ರ ಕುರ್ಚಿ ಮೇಲೆ ಕೂತು ಸೆಲ್ಫಿ ಕ್ಲಿಕ್ಕಿಸಿಕೊಂಡ ಯುವಕ ಅಂದರ್!

Posted By:
Subscribe to Oneindia Kannada

ಲಕ್ನೋ, ಜುಲೈ 21 : ಸದ್ಯಕ್ಕಂತೂ ಎಲ್ಲೆಡೆ ಸೆಲ್ಫಿ ಬಗ್ಗೆ ವಿಪರೀತ ಆಕರ್ಷಣೆ, ಯಾವ ಸ್ಥಳದಲ್ಲಿದ್ದೇನೆ ಎಂಬ ಅರಿವಿಲ್ಲದೇ ನಿಂತಲ್ಲಿ ಕೂತಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಒಂದು ಖಾಯಿಲೆಯಾಗಿದೆ.

ನೀವು ನಂಬಲೇಬೇಕು, ಸೆಲ್ಫಿ ಸಾವಿನಲ್ಲಿ ಭಾರತಕ್ಕೆ ಅಗ್ರ ಸ್ಥಾನ!

ಅದಂತೆ ಉತ್ತರ ಪ್ರದೇಶದಲ್ಲೊಬ್ಬ ಯುವಕ ಮಿನಿಷ್ಟ್ರ ಚೇರ್ ಮೇಲೆ ಕೂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಇದೀಗೆ ಪೊಲೀಸರ ಅತಿಥಿಯಾಗಿದ್ದಾನೆ.

Man arrested for clicking selfie on minister's chair

ಉತ್ತರ ಪ್ರದೇಶ ಶಿಕ್ಷಣ ಸಚಿವರ ಕುರ್ಚಿಯ ಮೇಲೆ ಕುಳಿತುಕೊಂಡು ಫೋಟೋ ಕ್ಲಿಕ್ಕಿಸಿಕೊಂಡ ಯುವಕನನ್ನು ಗುರುವಾರ ಉತ್ತರಪ್ರದೇಶ ಪೊಲೀಸರ ಬಂಧಿಸಿದ್ದಾರೆ.

ಬಾರಾಬಂಕಿಯ ಅಜಯ್ ತಿವಾರಿ ಎನ್ನುವ ಯುವಕ ತನ್ನ ಗೆಳೆಯರ ಜತೆ ಉತ್ತರ ಪ್ರದೇಶ ಶಿಕ್ಷಣ ಸಚಿವ ಸಂದೀಪ್ ಸಿಂಗ್ ಅವರನ್ನು ಭೇಟಿಯಾಗಲು ತೆರಳಿದ್ದ. ಈ ವೇಳೆ ಸಚಿವರ ಕೊಠಡಿಯಲ್ಲಿ ಇರಲಿಲ್ಲವಾಗಿತ್ತು, ಗೆಳೆಯರು ಹೊರಗಿದ್ದರು, ಆಗ ಯುವಕ ಸಚಿವರ ಕುರ್ಚಿಯಲ್ಲಿ ಕುಳಿತು ಫೋಟೋ(ಸೆಲ್ಫಿ) ತೆಗೆದುಕೊಂಡಿದ್ದ.

ಕರ್ನಾಟಕದ ಶಾಸಕರ ಸಂಬಳ ಕೇಳಿ ತಲೆ ತಿರುಗಿ ಬೀಳಬೇಡಿ!

ಬಳಿಕ ತಿವಾರಿ ಆ ಫೋಟೋವನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿಬಿಟ್ಟಿದ್ದ. ಸಚಿವರ ಕೊಠಡಿಗೆ ತೆರಳಿ ಅವರ ಕುರ್ಚಿ ಮೇಲೆ ಕುಳಿತು ಫೋಟೋ ತೆಗೆಸಿಕೊಂಡ ಬಗ್ಗೆ ಜನರು ದೂರನ್ನು ನೀಡಿ, ಕಟುವಾಗಿ ಟೀಕಿಸಿದ್ದರು.

Narendra Modi is threatened by 50 Crores Ransom

ದೂರನ್ನು ಸ್ವೀಕರಿಸಿದ ನಂತರ ಸಿಂಗ್ ತನ್ನ ಕಾರ್ಯದರ್ಶಿ ಮೂಲಕ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಸೈಬರ್ ಅಪರಾಧ ವಿಭಾಗದ ಪೊಲೀಸರು ಆರೋಪಿ ಅಜಯ್ ತಿವಾರಿಯನ್ನು ಬಂಧಿಸಿದ್ದು, ವಿಚಾರಣೆಗಾಗಿ ಹುಸೈನ್ ಗಂಜ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Barabanki man was arrested for getting himself photographed while sitting on the chair of Uttar Pradesh's education minister Sandeep Singh.
Please Wait while comments are loading...