ಜಿಎಸ್ ಟಿ ಅಂದರೆ ಗ್ರೇಟ್ ಸೆಲ್ಫಿಷ್ ಟ್ಯಾಕ್ಸ್ : ಮಮತಾ ಬ್ಯಾನರ್ಜಿ

Posted By:
Subscribe to Oneindia Kannada

ಜನರ ಶೋಷಣೆಗೆ ಅಂತಲೇ ತಂದ ಜಿಎಸ್ ಟಿ ಅಂದರೆ ಗ್ರೇಟ್ ಸೆಲ್ಫಿಷ್ ಟ್ಯಾಕ್ಸ್ (ಅತ್ಯಂತ ಸ್ವಾರ್ಥ ತೆರಿಗೆ). ಉದ್ಯೋಗವನ್ನು ಕಸಿಯಲು, ವ್ಯವಹಾರಗಳಿಗೆ ಹಾನಿ ಮಾಡಲು, ಆರ್ಥಿಕತೆಯನ್ನೇ ಮುಗಿಸಲು ಇದನ್ನು ಜಾರಿಗೆ ತರಲಾಗಿದೆ. ಭಾರತ ಸರಕಾರ ಜಿಎಸ್ ಟಿ ಜಾರಿಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ಅಪನಗದೀಕರಣದ ಲಾಭನಷ್ಟಗಳೇನು, ಯಾರಾದ್ರೂ ವಿವರಿಸಿ

ಕೆಲ ದಿನದ ಹಿಂದಷ್ಟೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಜಿಎಸ್ ಟಿ ಅಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಟೀಕೆ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಆರ್ಥಿಕ ನೀತಿಗಳ ಪ್ರಬಲ ಹಾಗೂ ಪ್ರಮುಖ ಟೀಕಾಕಾರರಲ್ಲಿ ಒಬ್ಬರಾದ ಮಮತಾ ಬ್ಯಾನರ್ಜಿ ಅವರು ಅಪನಗದೀಕರಣ ಹಾಗೂ ಜಿಎಸ್ ಟಿ ಜಾರಿ ವಿರುದ್ಧದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದಾರೆ.

Mamata banerjee

ನವೆಂಬರ್ ಎಂಟರಂದು ಅಪನಗದೀಕರಣಕ್ಕೆ ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಬಿಜೆಪಿಯು ಕಪ್ಪುಹಣ ವಿರೋಧಿ ದಿನಾಚರಣೆಗೆ ಮುಂದಾಗಿದ್ದರೆ, ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿವೆ. ಅಪನಗದೀಕರಣದಿಂದ ದೇಶದ ಆರ್ಥಿಕ ವ್ಯವಸ್ಥೆಯ ಮೇಲಾದ ದುಷ್ಪರಿಣಾಮಗಳ ಬಗ್ಗೆ ಗಮನ ಸೆಳೆಯಲು ಮುಂದಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As the opposition parties ready themselves to observe November 8, the first anniversary of demonetisation, as 'Black Day," Bengal Chief Minister Mamata Banerjee has already started initiated her economic crusade against the Modi Government.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ