ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವರಾತ್ರಿ ಪೂಜೆಯಲ್ಲಿ ಭಾಗಿಯಾದ ಮಮತಾ ಬ್ಯಾನರ್ಜಿ: ಢಕ್ಕೆ ಬಾರಿಸಿದ ವಿಡಿಯೋ ವೈರಲ್

|
Google Oneindia Kannada News

ಕೋಲ್ಕತ್ತಾ, ಸೆಪ್ಟೆಂಬರ್ 29: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೋಲ್ಕತ್ತಾದಲ್ಲಿ ಸಮುದಾಯ ದುರ್ಗಾ ಪೂಜೆಯ ಉದ್ಘಾಟನಾ ಸಮಾರಂಭದಲ್ಲಿ ಸಾಂಪ್ರದಾಯಿಕ ಢಕ್ಕೆ ಅಂದರೆ ಢಾಕಾ (ವಾದ್ಯ) ನುಡಿಸಿದರು. ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬುಧವಾರ ಸಿಎಂ ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತಾದ ನ್ಯೂ ಅಲಿಪುರದಲ್ಲಿರುವ ಸುರುಚಿ ಸಂಘದ ಪೂಜಾ ಪಂಡಲ್‌ಗೆ ಆಗಮಿಸಿದ್ದರು. ಸಿಎಂ ಮಮತಾ ಬ್ಯಾನರ್ಜಿ ಅವರ ಕ್ಯಾಬಿನೆಟ್ ಸಹೋದ್ಯೋಗಿಗಳಾದ ಫಿರ್ಹಾದ್ ಹಕೀಮ್ ಮತ್ತು ಅರೂಪ್ ಬಿಸ್ವಾಸ್ ಜೊತೆಗಿದ್ದರು. ಈ ವೇಳೆ ಸಿಎಂ ಮಮತಾ ಬ್ಯಾನರ್ಜಿ ನವರಾತ್ರಿ ಅಂದರೆ ದುರ್ಗಾಪೂಜೆಯಲ್ಲಿ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸಿಎಂ ಮಮತಾ ಅವರು ಆರತಿ ಮಾಡುವಾಗ ಮನಸ್ಸಿಂದ ಢಕ್ಕೆ (ಢಾಕಾ) ಬಾರಿಸುವುದನ್ನು ಕಾಣಬಹುದು.

ಪಶ್ಚಿಮ ಬಂಗಾಳ ಸರ್ಕಾರವು ಈ ವರ್ಷ ರಾಜ್ಯದಲ್ಲಿ ದುರ್ಗಾಪೂಜೆ ಸಂಘಟನಾ ಸಮಿತಿಗಳ ಅನುದಾನವನ್ನು 50,000 ರೂ.ನಿಂದ 60,000 ರೂ.ಗೆ ಹೆಚ್ಚಿಸಿದೆ. ಮಾತ್ರವಲ್ಲದೆ ಸಿಎಂ ಬ್ಯಾನರ್ಜಿ ಅವರು ದುರ್ಗಾ ಪೂಜೆಗಾಗಿ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 10 ರವರೆಗೆ ರಜೆಯ ಅವಧಿಯನ್ನು ಘೋಷಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ಬಾಂಬ್, ಬಂದೂಕುಗಳಿಂದ ಶಸ್ತ್ರಸಜ್ಜಿತರಾಗಿದ್ದರು; ಮಮತಾ ಬ್ಯಾನರ್ಜಿ ಬಿಜೆಪಿ ಕಾರ್ಯಕರ್ತರು ಬಾಂಬ್, ಬಂದೂಕುಗಳಿಂದ ಶಸ್ತ್ರಸಜ್ಜಿತರಾಗಿದ್ದರು; ಮಮತಾ ಬ್ಯಾನರ್ಜಿ

ದುರ್ಗಾ ಪೂಜೆಯನ್ನು ಪ್ರಪಂಚದಾದ್ಯಂತದ ದೊಡ್ಡ ಹಬ್ಬಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. UNESCO ಡಿಸೆಂಬರ್ 15 ರಂದು "ಕೋಲ್ಕತ್ತಾದಲ್ಲಿ ದುರ್ಗಾ ಪೂಜೆ" ಅನ್ನು "ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿ ಪಟ್ಟಿ" ಯಲ್ಲಿ ಸೇರಿಸಿದೆ.

Mamata Banerjee participating in Navratri Puja: Video of banging drum goes viral

ದುರ್ಗಾಪೂಜೆಯ ವಿಶೇಷ ಹಿಂದೂ ಹಬ್ಬವಾಗಿದೆ. ಇದನ್ನು ದುರ್ಗೋತ್ಸವ ಅಥವಾ ಶರದೋತ್ಸವ ಎಂದೂ ಕರೆಯಲಾಗುತ್ತದೆ. ಹಿಂದೂ ದೇವತೆ ದುರ್ಗಾವನ್ನು ಗೌರವಿಸುವ ಮತ್ತು ಮಹಿಷಾಸುರನ ಮೇಲೆ ಆಕೆಯ ವಿಜಯವನ್ನು ಆಚರಿಸುವ ವಾರ್ಷಿಕ ಹಬ್ಬವಾಗಿ ಪ್ರತಿ ವರ್ಷ ಆಚರಿಸಲಾಗುತ್ತದೆ. ಮಹಿಷಾಸುರನನ್ನು ನಾಶಮಾಡಲು ದುರ್ಗಾ ದೇವತೆಯು ಎಲ್ಲಾ ದೇವತೆಗಳ ಶಕ್ತಿಗಳ ಸಮ್ಮಿಳನದಿಂದ ಸ್ವರ್ಗದಲ್ಲಿ ಕಾಣಿಸಿಕೊಂಡಳು. ದುರ್ಗಾ ದೇವಿಯು ಹತ್ತು ತೋಳುಗಳನ್ನು ಹೊಂದಿದ್ದಳು ಮತ್ತು ಅವುಗಳಲ್ಲಿ ಪ್ರತಿಯೊಂದರ ಮೇಲೆ ಅವಳು ದೇವರಿಗೆ ಸಂಬಂಧಿಸಿದ ಅತ್ಯಂತ ಮಾರಣಾಂತಿಕ ಆಯುಧವನ್ನು ಹೊಂದಿದ್ದಳು. ಈ ಸಮಯದಲ್ಲಿ ದುರ್ಗಾ ದೇವಿಯ ಎಲ್ಲಾ ಆಯುಧಗಳನ್ನು ಪವಿತ್ರಗೊಳಿಸಲಾಗುತ್ತದೆ.

English summary
West Bengal Chief Minister Mamata Banerjee plays the traditional Dhakka (instrument) at the inauguration of the Community Durga Puja in Kolkata.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X