ಭಾರತದ ಕಾಲು ಹಿಡಿದ ಮಾಲ್ಡೀವ್ಸ್: ಯಾಕೆ ಗೊತ್ತಾ?
ಮಾಲ್ಡೀವ್ಸ್ ಭಾರತದ ವಿರೋಧಿ ಅನ್ನೋದನ್ನ ಪದೇ ಪದೇ ತೋರಿಸಿ, ಇದೀಗ ಬೆಚ್ಚಿಬಿದ್ದು ಪರದಾಡುತ್ತಿದೆ. ಯಾಕಂದ್ರೆ ಭಾರತದ ವಿರೋಧ ಕಟ್ಟಿಕೊಂಡು ಯಾವುದೇ ದೇಶ ಉದ್ಧಾರ ಆಗಲು ಸಾಧ್ಯ ಇಲ್ಲ. ಈಗ ಮಾಲ್ಡೀವ್ಸ್ ರಾಜಕಾರಣಿಗಳಿಗೆ ಕೂಡ ಈ ವಿಚಾರ ಸೂಕ್ಷ್ಮವಾಗಿ ಅರ್ಥವಾದಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ಮತ್ತೊಮ್ಮೆ ಭಾರತದ ಕಾಲು ಹಿಡಿಯೋದಕ್ಕೆ ಸಜ್ಜಾಗಿದ್ದಾರೆ!
ಮಾಲ್ಡೀವ್ಸ್ ಮತ್ತು ಭಾರತದ ನಡುವೆ ಉತ್ತಮ ಸಂಬಂಧ ಇತ್ತು. ಈಗಾಗಲೇ ಭಾರತ ಕೂಡ ಸಾವಿರಾರು ಕೋಟಿ ರೂಪಾಯಿ ಹಣವನ್ನು ಮಾಲ್ಡೀವ್ಸ್‌ಗೆ ಸಾಲವಾಗಿ ನೀಡಿದೆ. ಹೀಗಿದ್ದರು ಕೂಡ ಮಾಲ್ಡೀವ್ಸ್ ತಿಂದ ಮನೆಗೆ ದ್ರೋಹ ಬಗೆಯುತ್ತಿದೆ. ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝ ನೂತನವಾಗಿ ಆಯ್ಕೆಯಾಗಿ ಬಂದ ನಂತರ ಪ್ರತಿ ಹಂತದಲ್ಲೂ ತಾನು ಭಾರತ ವಿರೋಧಿ ಅನ್ನೋದನ್ನ ತೋರಿಸುತ್ತಿದ್ದಾರೆ. ಹೀಗಿದ್ದಾಗ ಭಾರತ ಕೂಡ ಮಾಲ್ಡೀವ್ಸ್‌ಗೆ ಶಾಕ್ ಮೇಲೆ ಶಾಕ್ ಕೊಡುತ್ತಿದೆ. ಪರಿಸ್ಥಿತಿ ಕೈಮೀರಿ ಹೋಗಿರುವ ಸಮಯದಲ್ಲೇ ಭಾರತದ ಬಳಿ ಕಾಲು ಹಿಡಿಯಲು ಈಗ ಮಾಲ್ಡೀವ್ಸ್ ಸಜ್ಜಾದಂತೆ ಕಾಣುತ್ತಿದೆ.

ಭಾರತಕ್ಕೆ ಹೋಲಿಕೆ ಮಾಡಿದರೆ ಮಾಲ್ಡೀವ್ಸ್ ಒಂದು ಪುಟಾಣಿ ದೇಶ. ಆ ದೇಶಕ್ಕೆ ಆದಾಯ ಬರುವುದು ಪ್ರವಾಸೋದ್ಯಮದಿಂದ ಮಾತ್ರ. ಹೀಗಿದ್ದಾಗ ಭಾರತದ ಲಕ್ಷ ಲಕ್ಷ ಜನರು ಅಲ್ಲಿ ಅಂದ್ರೆ ಮಾಲ್ಡೀವ್ಸ್ ದೇಶಕ್ಕೆ ಪ್ರವಾಸಕ್ಕೆ ಹೋಗುತ್ತಿದ್ದರು. ಆದರೆ ಯಾವಾಗ ಭಾರತದ ಜತೆ ದೊಡ್ಡದಾಗಿ ಕಿರಿಕ್ ಆಯ್ತೋ, ಆ ದಿನದಿಂದಲೇ ಮಾಲ್ಡೀವ್ಸ್‌ನ ಅಹಂಕಾರಿ ರಾಜಕಾರಣಿಗಳಿಗೆ ಭಾರತೀಯರು ಶಾಕ್ ಮೇಲೆ ಶಾಕ್ ಕೊಡುತ್ತಿದ್ದಾರೆ. ಹೀಗಾಗಿ ಸದ್ಯಕ್ಕೆ ಮಾಲ್ಡೀವ್ಸ್ ಬೀದಿಗೆ ಬಿದ್ದು ಒದ್ದಾಡುವ ಪರಿಸ್ಥಿತಿಗೆ ತಲುಪಿದೆ. ಕೈಯಲ್ಲಿ ಹಣ ಇಲ್ಲದೆ ಪರದಾಡುತ್ತಿರುವ ಇದೇ ದೇಶ ಮತ್ತೆ ಭಾರತದ ಕಾಲು ಹಿಡಿಯಲು ಸಜ್ಜಾಗಿದೆ!
ಭಾರತದ ಜೊತೆಗೆ ರಾಜಿ ತಂತ್ರ!
ಹೌದು ಮಾಲ್ಡೀವ್ಸ್ ಈಗಾಗಲೇ ಚೀನಾ ಬಳಿ ಸುಮಾರು 18 ಬಿಲಿಯನ್ ಡಾಲರ್ ಸಾಲ ಮಾಡಿದೆ. ಇದು ಸಾಲದು ಎನ್ನುವಂತೆ ಭಾರತದ ಬಳಿಯೂ ಸುಮಾರು 8 ಬಿಲಿಯನ್ ಡಾಲರ್ ಅಷ್ಟು ಸಾಲ ಮಾಡಿದೆ. ಹೀಗಿದ್ದಾಗ ಭಾರತಕ್ಕೆ ಮಾಲ್ಡೀವ್ಸ್ ಸುಮಾರು 60 ಸಾವಿರ ಕೋಟಿ ರೂಪಾಯಿ ಸಾಲ ವಾಪಸ್ ಕೊಡಬೇಕು. ಇಷ್ಟು ಸಾಲ ಮಾಡಿದ್ದರೂ ಭಾರತದ ಜೊತೆಗೆ ಕಿರಿಕ್ ತೆಗೆದು ಫೈಟಿಂಗ್ ಮಾಡುತ್ತಿರುವ ಮಾಲ್ಡೀವ್ಸ್ ದೇಶಕ್ಕೆ ಭಾರತೀಯರು ಬುದ್ಧಿ ಕಲಿಸಿದ್ದಾರೆ.
ಇದೆಲ್ಲ ಸಾಲದು ಎನ್ನುವಂತೆ ಮತ್ತೆ ಮತ್ತೆ ಮಾಲ್ಡೀವ್ಸ್ ಹೊಸ ಅಧ್ಯಕ್ಷ ಕಿರಿಕ್ ಮಾಡುತ್ತಿದ್ದಾರೆ. ಈ ಬೆಳವಣಿಗೆ ಮಧ್ಯೆ ಈಗ ಮಾಲ್ಡೀವ್ಸ್ ಮಾಜಿ ಅಧ್ಯಕ್ಷ, ಭಾರತದ ಜೊತೆ ರಾಜಿ ಮಾಡಿಕೊಳ್ಳಿ ಎಂಬ ಸಲಹೆ ನೀಡಿದ್ದಾರೆ! ಹಾಗಾದರೆ ಯಾರು ಅದು ಮಾಲ್ಡೀವ್ಸ್ ಮಾಜಿ ಅಧ್ಯಕ್ಷ? ಇವರ ಪಾಲಿಗೆ ಭಾರತ ಅತ್ಯಗತ್ಯ ಯಾಕೆ? ಭಾರತದ ಜೊತೆ ರಾಜಿ ಮಾಡಿಕೊಳ್ಳಲು ಮಾಲ್ಡೀವ್ಸ್‌ನ ಹಾಲಿ ಅಧ್ಯಕ್ಷರಿಗೆ ಮಾಜಿ ಅಧ್ಯಕ್ಷರ ಸಲಹೆ ಏನು? ಬನ್ನಿ ತಿಳಿಯೋಣ.
ಭಾರತವೇ ಬೆಸ್ಟ್ ಎಂದ ಮಾಲ್ಡೀವ್ಸ್!
ಅಂದಹಾಗೆ ಮಾಲ್ಡೀವ್ಸ್ ದೇಶದ ಮಾಜಿ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರು ಇದೀಗ, ಹಾಲಿ ಅಧ್ಯಕ್ಷ ಮೊಹಮ್ಮದ್ ಮುಯಿಝ ಅವರಿಗೆ ಖಡಕ್ ಸಲಹೆ ಒಂದನ್ನ ನೀಡಿ ಭಾರತದ ಬಳಿ ರಾಜಿ ಮಾಡಿಕೊಳ್ಳಿ ಎಂದಿದ್ದಾರೆ. ಯಾಕಂದ್ರೆ ಭಾರತದ ಜೊತೆ ಉತ್ತಮವಾದ ಸಂಬಂಧ ಇಟ್ಟುಕೊಂಡರೆ ಮಾತ್ರ ಅಭಿವೃದ್ಧಿ ಸಾಧ್ಯ ಎನ್ನುವುದು ಮಾಲ್ಡೀವ್ಸ್ ದೇಶದ ಮಾಜಿ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರ ಅಭಿಪ್ರಾಯ. ಇದೇ ಕಾರಣಕ್ಕೆ ಸಂಬಂಧ ಹಾಳು ಮಾಡಿಕೊಳ್ಳದೆ ಭಾರತದ ಜೊತೆ ಕೂತು ಮಾತನಾಡಿ ಎಂಬ ಸಲಹೆಯನ್ನ ನೀಡಿರುವ ಮೊಹಮ್ಮದ್ ಸೋಲಿಹ್, ಮಾಲ್ಡೀವ್ಸ್‌ನ ಇತರ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.












Click it and Unblock the Notifications