ಮಾಲ್ಡಾ ಪ್ರಕರಣ: ಬಿಜೆಪಿ ನಾಯಕರಿಗೆ ಪ್ರವೇಶ ನಿರಾಕರಣೆ

Subscribe to Oneindia Kannada

ಮಾಲ್ಡಾ,(ಪಶ್ಚಿಮ ಬಂಗಾಳ) ಜನವರಿ, 11: ಮಾಲ್ಡಾ ಹಿಂಸಾಚಾರದ ಬಗ್ಗೆ ಮಾಹಿತಿ ಕಲೆಹಾಕಲು ತೆರಳಿದ್ದ ಮೂವರು ಬಿಜೆಪಿ ನಾಯಕರನ್ನು ಮಧ್ಯದಲ್ಲೇ ತಡೆಯಲಾಗಿದೆ. ಸೋಮವಾರ ಬೆಳಗ್ಗೆ ಮಾಲ್ಡಾಗಾ ಬಂಧಿಳಿದ ಬಿಜೆಪಿ ಸತ್ಯಶೋಧನಾ ಸಮಿತಿ ಸದಸ್ಯರನ್ನು ಅಧಿಕಾರಿಗಳು ತಡೆದಿದ್ದಾರೆ.

ಎಸ್ ಎಸ್ ಅಹುಲ್ ವಾಲಿಯಾ, ಬಿ ಡಿಮ ರಾಮ್ ಮತ್ತು ಭುಪೇಂದ್ರ ಯಾದವ್ ಪಶ್ಚಿಮ ಬಂಗಾಳದ ಮಾಲ್ಡಾಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕುವುದರಲ್ಲಿದ್ದರು. ಕಳೆದ ವಾರ ಎರಡು ಕೋಮುಗಳ ನಡುವಿನ ಸಂಘರ್ಷಕ್ಕೆ ಮಾಲ್ಡಾ ಸಾಕ್ಷಿಯಾಗಿತ್ತು.[ಇಬ್ಬರು ದಲಿತ ಮಕ್ಕಳ ಸಾವಿಗೆ ಮೊಬೈಲ್ ಕಾರಣವಾಯ್ತೆ?]

malda

ಸಂಸದರೂ ಆದ ಎಸ್.ಎಸ್. ಅಹಲ್ವಾಲಿಯಾ, ಭುಪೇಂದ್ರ ಯಾದವ್, ವಿಷ್ಣ ದಯಾಳ್ ರಾಮ್ ಸೇರಿದಂತೆ ಸತ್ಯ ಸಂಶೋಧನಾ ಸಮಿತಿಯ ಇನ್ನಿಬ್ಬರು ಸದಸ್ಯರಾದ ಬಂಗಾಳದ ಕೃಷ್ಣ ಮಿತ್ರ ಮತ್ತು ಜಾಯ್ ಬ್ಯಾನರ್ಜಿ ಅವರು ಕಾಲಿಯಾಚಕ್ ಪ್ರದೇಶವನ್ನು ಪ್ರವೇಶಿಸಲು ಮುಂದಾಗಿದ್ದರು. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಮಾತಿನ ಚಕಮಕಿ ನಡೆಸಿದ್ದ ಇವರು, ವಿರೋಧದ ನಡುವೆಯೂ ಪ್ರವೇಶಿಸಲು ಮುಂದಾದ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.[ಪುಂಡರಿಗೆ ಬಿಸಿ ಮುಟ್ಟಿಸಿದ ಬಿಸಲ ನಾಡ ಹುಡುಗಿಯರು]

ಜನವರಿ 3ರಂದು ಕೋಲ್ಕತದಿಂದ 300 ಕಿ.ಮೀ. ದೂರದಲ್ಲಿರುವ ಮಾಲ್ಡಾ ಜಿಲ್ಲೆಯ ಕಾಲಿಯಾಚೆಕ್​ನಲ್ಲಿ ನಡೆದ ಸಾವಿರಾರು ಸದಸ್ಯರ ಪ್ರತಿಭಟನೆ ಬಳಿಕ ಹಿಂಸಾಚಾರಕ್ಕೆ ತಿರುಗಿಕೊಂಡಿತ್ತು. ಪೊಲೀಸ್ ಠಾಣೆಯೊಳಗಿದ್ದ ಸಾಕಷ್ಟು ವಾಹನಗಳಿಗೆ ಬೆಂಕಿ ಇಟ್ಟ ಪ್ರಕರಣವೂ ನಡೆದಿತ್ತು. ಈಗಲೂ ಕಾಲಿಯಾಚೆಕ್​ ಪೊಲೀಸ್ ಬಂದೋಬಸ್ತ್ ನಲ್ಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The BJP's three member team to study the Malda violence has been detained in West Bengal. The three member team arrived at Malda this morning but were detained at the railway station this morning. The BJP's team comprised S S Ahluwalia, B D Ram and Bhupendra Yadav. The three member team had been formed to study the violence that erupted in Malda, West Bengal last week.
Please Wait while comments are loading...