ನಕಲಿ ನೋಟು ಪ್ರಕರಣದಲ್ಲಿ ಮಲಯಾಳಂ ನಟಿ ಬಂಧನ

ಕೊಲ್ಲಂ(ಕೇರಳ), ಜುಲೈ 04: ಲಕ್ಷಾಂತರ ಮೌಲ್ಯದ ನಕಲಿ ನೋಟು ಹೊಂದಿದ್ದ ಕಾರಣಕ್ಕೆ ಮಲಯಾಳಂ ಕಿರುತೆರೆ ನಟಿ ಹಾಗೂ ಆಕೆ ಕುಟುಂಬದ ಇಬ್ಬರು ಸದಸ್ಯರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.

ಕೊಲ್ಲಂನ ತಮ್ಮ ನಿವಾಸದಲ್ಲಿ ನಟಿ ಸೂರ್ಯ ಶಶಿಕುಮಾರ್, ಆಕೆಯ ತಂಗಿ ಶ್ರುತಿ ಹಾಗೂ ತಾಯಿ ರೆಮಾ ದೇವಿ ಅವರನ್ನು ಕೊಚ್ಚಿಯಲ್ಲಿ ಬಂಧಿಸಿರುವ ಇಡುಕ್ಕಿ ಪೊಲೀಸರು, ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ.

Malayalam TV actress arrested in fake currency case

ಸದ್ಯ ಬಂಧಿತರನ್ನು ಇಡುಕ್ಕಿ ಜಿಲ್ಲೆಯ ಕಟ್ಟಪನಾ ಎಂಬಲ್ಲಿ ಇರಿಸಲಾಗಿದ್ದು, ವಿಚಾರಣೆ ಜಾರಿಯಲ್ಲಿದೆ. ಕೊಲ್ಲಂನ ನಿವಾಸದಲ್ಲಿ 57 ಲಕ್ಷ ರು ಜಪ್ತಿ ಮಾಡಲಾಗಿದೆ ಎಂದು ಇಡುಕ್ಕಿ ಪೊಲೀಸ್ ಮುಖ್ಯಸ್ಥ ಕೆಬಿ ವೇಣುಗೋಪಾಲ್ ಹೇಳಿದ್ದಾರೆ.

ಈ ಪ್ರಕರಣದಲ್ಲಿ ನಟಿಯ ತಾಯಿ ರೆಮಾ ಅವರು ಕಿಂಗ್ ಪಿನ್ ಆಗಿದ್ದು, ತಮ್ಮ ನಿವಾಸದ ಮೇಲಿನ ಮಹಡಿಯಲ್ಲಿ ಎಲ್ಲಾ ರೀತಿಯ ಅಕ್ರಮ ಚಟುವಟಿಕೆಗೆ ಅನುವು ಮಾಡಿಕೊಟ್ಟಿದ್ದರು. 4.36 ಲಕ್ಷ ರು ವ್ಯಯಿಸಿ ನಕಲಿ ನೋಟು ಮುದ್ರಿಸಲು ಒಪ್ಪಂದ ಮಾಡಿಕೊಂಡಿದ್ದರು.

ಮುದ್ರಣಕ್ಕೆ ಬೇಕಾದ ಸಾಮಾಗ್ರಿಗಳು, ಖರ್ಚು ವೆಚ್ಚ ಸೇರಿಸಿದರೆ ಈ ನಕಲಿ ನೋಟು ದಂಧೆಗೆ 7 ಕೋಟಿ ರು ಗೂ ಅಧಿಕ ಬಂಡವಾಳ ಹೂಡಿರುವುದು ಪತ್ತೆಯಾಗಿದೆ.

ಇತ್ತೀಚೆಗೆ, 2.25 ಲಕ್ಷ ರು ನಕಲಿ ನೋಟು ಹೊಂದಿದ್ದ ಕಾರಣಕ್ಕೆ ಇಡುಕ್ಕಿಯಲ್ಲಿ ಮೂವರನ್ನು ಬಂಧಿಸಿದ್ದ ಪೊಲೀಸರಿಗೆ ಈ ನಟಿ ಹಾಗು ಅವರ ಕುಟುಂಬದ ನಕಲಿ ನೋಟು ಜಾಲದ ಬಗ್ಗೆ ತಿಳಿದು ಬಂದಿದೆ. ನೋಟು ದಂಧೆಯಲ್ಲಿ ಮಾಜಿ ಸೈನಿಕರೊಬ್ಬರು ಭಾಗಿಯಾಗಿದ್ದರು ಎಂದು ಅವರಿಂದ ಈ ಮೂವರು ಮಹಿಳೆಯ ಹೆಸರುಗಳು ತಿಳಿದು ಬಂದಿತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+