Get Updates
Get notified of breaking news, exclusive insights, and must-see stories!

ಸುಗ್ಗಿ ಹಬ್ಬ ಮಕರ ಸಂಕ್ರಾಂತಿ ಆಚರಿಸೋಣ ಬನ್ನಿ

ಬೆಂಗಳೂರು, ಜ. 13: ಸುಗ್ಗಿ ಹಬ್ಬ ಮಕರ ಸಂಕ್ರಾಂತಿ ದೇಶದ ವಿವಿಧೆಡೆ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಧಾರ್ಮಿಕ ಹಿನ್ನೆಲೆಯ ಜತೆಗೆ ರೈತರಿಗೆ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವನ್ನು ಹಂಚಿಕೊಂಡು ಸಂಭ್ರಮಿಸುವ ದಿನ ಇದಾಗಿದೆ.

ಸಂಕ್ರಾಂತಿ ದಿನದಂದು ಬೆಂಗಳೂರು ನಗರದ ಗವಿಗಂಗಾಧರೇಶ್ವರ ಸ್ವಾಮಿ ದೇಗುಲದ ಶಿವ ಲಿಂಗದ ಮೇಲೆ ಬೀಳುವ ಸೂರ್ಯರಶ್ಮಿಯನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಭಕ್ತರ ಅನುಕೂಲಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಜ.14ರ ಸಂಜೆ 5:14ರಿಂದ 5:17ರ ವರೆಗೆ ಸೂರ್ಯರಶ್ಮಿ ಲಿಂಗದ ಮೇಲೆ ಬೀಳಲಿದೆ ಎಂದು ದೇಗುಲದ ಪ್ರಧಾನ ಅರ್ಚಕರಾದ ದೀಕ್ಷಿತರು ಹೇಳಿದ್ದಾರೆ.

ದೇವಸ್ಥಾನ ಮುಂಭಾಗದ ಮೈದಾನದಲ್ಲಿ ಶಾಮಿಯಾನ ಹಾಕಿಸಿದ್ದು, ಎರಡು ಸಿನಿಮಾ ಪರದೆಗಳು, ಎಂಟು ಸರ್ಕ್ಯೂಟ್ ಟಿವಿ ಅಳವಡಿಸಲಾಗಿದೆ. ವೃದ್ಧರು, ಅಂಗವಿಕಲರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ ಎಂದು ಗವಿಗಂಗಾಧರೇಶ್ವರ ಸ್ವಾಮಿ ಪಲ್ಲಕ್ಕೆ ಉತ್ಸವ ಸಮಿತಿ ಹೇಳಿದೆ.

ಸೂರ್ಯ ರಶ್ಮಿ ದರ್ಶನ ನಂತರ ಭಕ್ತರಿಗೆ ಸಂಕ್ರಾಂತಿ ಹಬ್ಬದ ವಿಶೇಷವಾದ ‘ಎಳ್ಳುಬೆಲ್ಲ' ಪ್ರಸಾದ ಹಂಚಲಾಗುತ್ತದೆ. ಪಂಚಾಂಗದ ಪ್ರಕಾರ ಜ.14ರ ಮಂಗಳವಾರವೇ ಆಚರಿಸಬೇಕೆಂದು ಧಾರ್ಮಿಕ ದತ್ತಿ ಇಲಾಖೆ ಸೂಚಿಸಿದ್ದು, ಅದರಂತೆ ಆಚರಣೆ ನಡೆಯಲಿದೆ.

ಜ.14ರ ಮಧ್ಯಾಹ್ನ 1 ಗಂಟೆಯಿಂದ ಸಂಜೆ 5.30ರವರೆಗೆ ದೇವಸ್ಥಾನಕ್ಕೆ ಪ್ರವೇಶ ಇರುವುದಿಲ್ಲ. ಅನಂತರ ಭಕ್ತಾದಿಗಳು, ಸಾರ್ವಜನಿಕರು ದೇವರ ದರ್ಶನ ಪಡೆಯಬಹುದೆಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ವೆಂಕೋಬರಾವ್ ಸಿಂಧೆ ಹೇಳಿದ್ದಾರೆ.ದೇಶದ ವಿವಿಧೆಡೆ ಮಕರ ಸಂಕ್ರಾಂತಿ ಆಚರಣೆ ಹಾಗೂ ಸಂಕ್ರಾಂತಿ ಹಬ್ಬದ ಕುರಿತ ಮಾಹಿತಿ ಮುಂದೆ ಓದಿ...

ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ

ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ

ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಮಂಗಳವಾರ(ಜ.14) ಸಂಜೆ ಮಕರಜ್ಯೋತಿ ದರ್ಶನವಾಗಲಿದೆ. ಈ ಹಿನ್ನೆಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಸೇರಿದ್ದು, ಭದ್ರತೆಗಾಗಿ ಸುಮಾರು 10 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಕೇರಳ ಸರ್ಕಾರ ನಿಯೋಜಿಸಿದೆ.

ನವೆಂಬರ್ 15ರಂದು ಆರಂಭಗೊಂಡ ಮಂಡಲಪೂಜೆ ಮಹೋತ್ಸವ ಡಿ.26ರಂದು ಕೊನೆಗೊಳ್ಳಲಿದೆ. ಮಕರವಿಲಿಕ್ಕು ಸಂಭಮ ಡಿ. 30 ರಂದು ಆರಂಭಗೊಂಡು ಜನವರಿ 20 ರಂದು ಕೊನೆಗೊಳ್ಳಲಿದೆ. ಮಕರ ಜ್ಯೋತಿ ದರ್ಶನ ಜನವರಿ 14ರಂದು ನಡೆಯಲಿದೆ

ದೇವಾಲಯದ ಸುತ್ತಮುತ್ತ ಹಾಗೂ ಪಂಪಾನದಿಯ ಸಮೀಪದಲ್ಲಿ ಜನದಟ್ಟಣೆಯನ್ನು ನಿಯಂತ್ರಕ್ಕೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 2011ರಲ್ಲಿ ಸಂಭಾವ್ಯ ಕಾಲ್ತುಳಿತ ಪ್ರಕರಣಗಳನ್ನು ತಡೆಯಲು ಈ ಬಾರಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲಿ ಭಕ್ತಾದಿಗಳು ಆಗಮಿಸಿರುವುದರಿಂದ ಸಾಲಿನಲ್ಲಿ ಸುಮಾರು 20 ಗಂಟೆಗಳ ಕಾಲ ಕಾಯಬೇಕಾದ ಸ್ಥಿತಿ ಉಂಟಾಗಿದೆ. ಇದೇ ವೇಳೆ, 'ತಿರುವಾಭರಣಂ' ಮೆರವಣಿಗೆ(ಮಕರವಿಳಕ್ಕು ದಿನ ಅಯ್ಯಪ್ಪ ಸ್ವಾಮಿಗೆ ಧರಿಸಲಾಗುವ ಆಭರಣಗಳ ಮೆರವಣಿಗೆ)ಯು ಭಾನುವಾರ ಪತ್ತಣಂತಿಟ್ಟ ಜಿಲ್ಲೆಯ ಪಂದಳಂನಲ್ಲಿ ಆರಂಭವಾಗಿದೆ.

ವಿವಿಧೆಡೆ ಮುಂದುವರೆದ ಗಾಳಿಪಟ ಹಬ್ಬ

ವಿವಿಧೆಡೆ ಮುಂದುವರೆದ ಗಾಳಿಪಟ ಹಬ್ಬ

ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ದಿನದಂದು ಗಾಳಿಪಟಗಳನ್ನು ಹಾರಿಬಿಡುವ ಸಂಪ್ರದಾಯ ಹಿಂದಿನಿಂದ ನಡೆದುಕೊಂಡು ಬಂದಿದೆ. ಮಹಾರಾಷ್ಟ್ರದಲ್ಲೂ, ಎಳ್ಳು ಮತ್ತು ಸಕ್ಕರೆಯ ಕುಸುರಿಕಾಳನ್ನು ಬಂಧು ಮಿತ್ರರಿಗೆ ಹಂಚುವ ರೂಢಿ ಇದೆ.

ಗುಜರಾತಿನಲ್ಲಿ 26ನೇ ವಾರ್ಷಿಕ ಅಂತಾರಾಷ್ಟ್ರೀಯ ಗಾಳಿಪಟ ಹಬ್ಬ ಜನವರಿ 7 ರಿಂದ ಜನವರಿ 14 ರವರೆಗೂ ವಿವಿಧ ಸ್ಥಳಗಳಲ್ಲಿ ಗಾಳಿಪಟ ಹಾರಿಸುವ ಹಬ್ಬ ಆಯೋಜನೆಗೊಂಡಿದೆ.ದೆಹಲಿ, ಮುಂಬೈ ಹಾಗೂ ಅಹಮದಾಬಾದಿನಲ್ಲಿ ಈ ಹಬ್ಬ ಆಚರಣೆಯಾಗಿದೆ. ಫ್ರಾನ್ಸ್, ರಷ್ಯಾ, ಉಕ್ರೇನ್, ಮಲೇಷಿಯಾ, ವಿಯೆಟ್ನಂ, ಎಸ್ಟೋನಿಯಾ ಅಲ್ಲದೆ ಭಾರತದ ಗಾಳಿಪಟ ಪ್ರವೀಣರು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಸುಮಾರು 40 ಕ್ಕೂ ಅಧಿಕ ವೃತ್ತಿಪರ ಗಾಳಿ ಪಟ ಹಾರಾಟಗಾರರು ಈ ಬಾರಿ ಹಬ್ಬದಲ್ಲಿ ಭಾಗವಹಿಸಿದ್ದಾರೆ.

ಸಂಕ್ರಾಂತಿಯಂದು ಪವಿತ್ರ ಸ್ನಾನ

ಸಂಕ್ರಾಂತಿಯಂದು ಪವಿತ್ರ ಸ್ನಾನ

ನದಿಸಂಗಮ, ಸಮುದ್ರ ಮುಂತಾದವುಗಳಲ್ಲಿ ಪವಿತ್ರ ಸ್ನಾನ ಮಾಡುವ ಪದ್ಧತಿ ಸಂಪ್ರದಾಯವಾಗಿದೆ. ಶರೀರದ ಕೊಳೆಯನ್ನು ನಿವಾರಿಸುವ ಜತೆಗೆ ಮಾನಸಿಕ ಕೊಳೆಯನ್ನು ನಾಶ ಮಾಡುವುದು ಪವಿತ್ರ ಸ್ನಾನದ ಉದ್ದೇಶ. ಸಂಕ್ರಾಂತಿ ಸಂದರ್ಭಗಳಲ್ಲಿ ಕುಂಭಮೇಳಗಳು ನಡೆಯುತ್ತವೆ.

ಸಂಕಲ್ಪ ಪೂರ್ವಕವಾಗಿ ಅಂದರೆ ಸರ್ವರೋಗ ನಿವೃತ್ತಿಗಾಗಿ, ಎಲ್ಲ ಅಭೀಷ್ಟೆಯ ಸಿದ್ಧಿಗಾಗಿ ಸ್ನಾನವನ್ನು ಮಾಡಬೇಕು. ಇದು ಪರಮಾತ್ಮನ ಅಭಿಮುಖಕ್ಕೆ ಅತ್ಯಂತ ಪ್ರಶಸ್ತವಾದ ಕಾಲವಾದ್ದರಿಂದ ಪರಮಾತ್ಮನ ಧ್ಯಾನ ಮಾಡುವುದು ವಿಶೇಷ ಫಲದಾಯಕ. ಮಂತ್ರ-ಧ್ಯಾನಾದಿಗಳ ಉಪದೇಶ ದೀಕ್ಷೆಯನ್ನೂ ಈ ಕಾಲದಲ್ಲಿ ಪಡೆಯಬಹುದು.[ಪವಿತ್ರ ಸಂಗಮದಲ್ಲಿ ಮುಳುಗು]

ಎಳ್ಳು ಬೆಲ್ಲ, ತರ್ಪಣ, ಗೋ ದಾನ

ಎಳ್ಳು ಬೆಲ್ಲ, ತರ್ಪಣ, ಗೋ ದಾನ

ಎಳ್ಳನ್ನು ಈ ಹಬ್ಬದಲ್ಲಿ ವಿಶೇಷವಾಗಿ ಬಳಸುತ್ತಾರೆ. ಎಳ್ಳಿನ ನೀರಿನಿಂದ ಸ್ನಾನ ಮಾಡುತ್ತಾರೆ. ಎಳ್ಳು ನೀರಿನಿಂದ ತರ್ಪಣ ಕೊಡುತ್ತಾರೆ. ಎಳ್ಳಿನ ಗೋವನ್ನು ದಾನ ಮಾಡುವುದೂ ಶ್ರೇಯಸ್ಕರ. ಪೀಡಾ ಪರಿಹಾರಕ್ಕಾಗಿ ಎಳ್ಳು, ಬೆಲ್ಲ, ಕೊಬ್ಬರಿ ಇತ್ಯಾದಿಗಳನ್ನು ಹಂಚಬೇಕು. ಮಕ್ಕಳ ಮೇಲೆ ಎಳ್ಳನ್ನು ಸುರಿಯುವುದರಿಂದ ಬಾಲಾರಿಷ್ಟ ನಾಶವಾಗುತ್ತದೆಂಬ ನಂಬಿಕೆಯಿದೆ. ವಿಶೇಷವಾಗಿ ಎಳ್ಳೆಣ್ಣೆಯ ದೀಪವನ್ನು ಉರಿಸುವುದು, ಸೂರ್ಯ ನಮಸ್ಕಾರ ಇವುಗಳಿಂದ ಆಯುಷ್ಯ ಆರೋಗ್ಯವೃದ್ಧಿಯಾಗುವುದು. ಹಲವರು ಅಂದು 'ಆದಿತ್ಯ ಹೃದಯ' ಸ್ತೋತ್ರದ ಪಾರಾಯಣ ಮಾಡುತ್ತಾರೆ.

ತಮಿಳುನಾಡಿನಲ್ಲಿ ಪೊಂಗಲ್

ತಮಿಳುನಾಡಿನಲ್ಲಿ ಪೊಂಗಲ್

ತಮಿಳುನಾಡಿನಲ್ಲಿ ಸುಗ್ಗಿ ಹಬ್ಬವನ್ನು "ಪೊಂಗಲ್" ಎಂದು ಕರೆಯಲಾಗುತ್ತದೆ. ಇದು ನಾಲ್ಕು ದಿನಗಳ ಹಬ್ಬ - ಈ ನಾಲ್ಕು ದಿನಗಳು ಮತ್ತು ಆ ದಿನಗಳಲ್ಲಿನ ಆಚರಣೆಗಳು ಹೀಗಿವೆ:
ಭೋಗಿ: ಹೊಸ ಬಟ್ಟೆಗಳು
ಪೊಂಗಲ್: ಸಮೃದ್ಧಿಯ ಸಂಕೇತವಾಗಿ ಹಾಲು-ಬೆಲ್ಲಗಳನ್ನು ಪಾತ್ರೆಯಲ್ಲಿ ಕುದಿಸಿ ಉಕ್ಕಿಸಲಾಗುತ್ತದೆ
ಮಾಟ್ಟು ಪೊಂಗಲ್: ಗೋಪೂಜೆ
ಕೆಲವು ಕಡೆಗಳಲ್ಲಿ "ಜಲ್ಲಿಕಟ್ಟು" ಎಂಬ ಗೂಳಿಯನ್ನು ಪಳಗಿಸುವ ಆಟ ನಡೆಯುತ್ತದೆ
*ಕಾಣುಮ್ ಪೊಂಗಲ್

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+