Get Updates
Get notified of breaking news, exclusive insights, and must-see stories!

Maithili Thakur: ಕರ್ನಾಟಕದ ಸಾಗರ್ ಖಂಡ್ರೆ, ಪ್ರಿಯಾಂಕ ಜಾರಕಿಹೋಳಿ ಹಿಂದಿಕ್ಕಿದ ಮೈಥಿಲಿ ಠಾಕೂರ್ ಹಿನ್ನೆಲೆ ಹೇಗಿದೆ ಗೊತ್ತಾ?

Maithili Thakur: ಕರ್ನಾಟಕದಿಂದ ಕಳೆದ ಎಂಪಿ ಚುನಾವಣೆಯಲ್ಲಿ ಅತ್ಯಂತ ಕಿರಿಯರಿಬ್ಬರು ಗೆದ್ದು ಸಂಸದರಾಗಿ ಸಂಸತ್ತಿಗೆ ಎಂಟ್ರಿಕೊಟ್ಟಿದ್ದರು. ಇದೀಗ ಇವರಿಬ್ಬರಿಗಿಂತ ಚಿಕ್ಕ ವಯಸ್ಸಿನ ಮೈಥಿಲಿ ಠಾಕೂರ್ ಎಂಬ ಬಾಲಕಿ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುತಮಗಳಿಂದ ಗೆಲುವು ಸಾಧಿಸಿ ದೇಶದ ಗಮನ ಸೆಳೆದಿದ್ದಾರೆ. ಹಾಗಾದ್ರೆ, ಇವರ ಹಿನ್ನೆಲೆ ಏನು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ನೇತೃತ್ವದ ಎನ್​ಡಿಎ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಮೂಲಕ ಬಿಜೆಪಿ ಬಿಹಾರದ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅದರಲ್ಲೂ ವಿಶೇಷವಾಗಿ ಮೈಥಿಲಿ ಠಾಕೂರ್ ಎಂಬ 25 ವರ್ಷದ ಪಿಯುಸಿ ಪಾಸ್‌ ಆಗಿರುವ ಯುವತಿ ಬಿಹಾರದ ದರ್ಭಾಂಗ ಜಿಲ್ಲೆಯ ಅಲಿನಗರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ. ಈ ಮೂಲಕ ಅವರು ಭಾರತದಲ್ಲೇ ಅತ್ಯಂತ ಕಿರಿಯ ಶಾಸಕಿ ಎನಿಸಿಕೊಂಡಿದ್ದಾರೆ. ಹಾಗಾದ್ರೆ ಇವರು ಹಿನ್ನೆಲೆ ಏನು ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Maithili Thakur Becomes India s Youngest MLA After Victory in Bihar Election Know details

25 ವರ್ಷದ ಮೈಥಿಲಿ ಠಾಕೂರ್ ಅವರು ಬಿಹಾರದ ಮಧುಬನಿ ಜಿಲ್ಲೆಯ ಬೆನಿಪಟ್ಟಿಯಲ್ಲಿ ಸಂಗೀತಗಾರರ ಕುಟುಂಬದಲ್ಲಿ ಜನಿಸಿದವರಾಗಿದ್ದಾರೆ. ಅವರು ತಮ್ಮ ತಂದೆ ಮತ್ತು ಅಜ್ಜರಿಂದ ಶಾಸ್ತ್ರೀಯ ಮತ್ತು ಜಾನಪದ ಸಂಗೀತದಲ್ಲಿ ತರಬೇತಿ ಪಡೆದರು. ಬಳಿಕ ಪ್ರಸಿದ್ಧ ಜಾನಪದ ಗಾಯಕಿಯಾಗಿ ಹೊರಹೊಮ್ಮಿದ್ದಾರೆ. ಇದೀಗ ಬಿಹಾರದ ಪ್ರಸಿದ್ಧ ಜಾನಪದ ಗಾಯಕಿ 25 ವರ್ಷದ ಮೈಥಿಲಿ ಠಾಕೂರ್ ರಾಜಕಾರಣಿಯಾಗಿ ಗಮನ ಸೆಳೆದಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅಲಿನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ ಭಾರತದ ಅತ್ಯಂತ ಕಿರಿಯ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇವರು ರಿಯಾಲಿಟಿ ಶೋ ಒಂದರ ರನ್ನರ್ ಅಪ್ ಆಗಿದ್ದು, ಜೊತೆ ತಮ್ಮದೇ ಧ್ವನಿಗೆ ಅಪರಾ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಆದರೆ, ಇದೀಗ ಜಾನಪದ ಗಾಯಕಿ ಮೈಥಿಲಿ ಠಾಕೂರ್ ಚುನಾವಣಾ ಕಣಕ್ಕಿಳಿದು ಭರ್ಜರಿಯಾಗಿ ಗೆಲುವು ಸಾಧಿಸುವ ಮೂಲಕ ಶಾಸಕಿಯಾಗಿಯೂ ಆಯ್ಕೆಯಾಗಿದ್ದಾರೆ. ಪಿಯುಸಿ ಪಾಸ್‌ ಆಗಿರುವ ಇವರು ಅಲಿನಗರ ಕ್ಷೇತ್ರದಲ್ಲಿ 12,000 ಭರ್ಜರಿ ಬಹುಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.

ಮೈಥಿಲಿ ಠಾಕೂರ್ ಅವರು 2000ನೇ ಇಸವಿಯ ಜುಲೈ 25ರಂದು ಮಧುಬನಿಯಲ್ಲಿ ಜನಿಸಿದರು. ಬಳಿಕ ಅವರ ಕುಟುಂಬವು ದೆಹಲಿಯ ನಜಾಫ್‌ಗಢಕ್ಕೆ ಸ್ಥಳಾಂತರ ಆಯಿತು. ಅಲ್ಲಿ ಅವರ ತಂದೆ ಕೆಲಸ ಕಳೆದುಕೊಂಡ ಕಾರಣದಿಂದ ಅವರು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಸ್ವತಃ ಶಾಸ್ತ್ರೀಯ ಗಾಯಕರಾಗಿದ್ದ ಅವರ ತಂದೆ ತಮ್ಮ ಕುಟುಂಬವನ್ನು ನಡೆಸಲು ಸಂಗೀತ ಕ್ಷೇತ್ರವನ್ನು ಅವಲಂಬಿಸಿತು. ಆಗಲೇ ಅವರು ಮೈಥಿಲಿಯ ಮಾರ್ಗದರ್ಶಕ ಮತ್ತು ಶಿಕ್ಷಕರಾಗಿ ಅವರಿಗೆ ಸಂಗೀತ ಪಾಠ ಹೇಳಿಕೊಡುವಲ್ಲಿ ಯಶಸ್ವಿಯಾದರು.

ಬಳಿಕ ಮೈಥಿಲಿ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಜಾನಪದ ಸಂಗೀತ ಎರಡರಲ್ಲೂ ಹೆಸರು ಮಾಡಿದರು. ಬಳಿಕ ಸರಿಗ ಮಪ ಲಿಟಲ್ ಚಾಂಪ್ಸ್ ಮತ್ತು ಇಂಡಿಯನ್ ಐಡಲ್ ಜೂನಿಯರ್‌ನಂತಹ ಪ್ರಸಿದ್ಧ ರಿಯಾಲಿಟಿ ಶೋಗಳ ಮೂಲಕ ತಮ್ಮನ್ನ ತಾವು ಗುರುತಿಸಿಕೊಂಡರು. ಅಲ್ಲಂದ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡು ಬರುತ್ತಲಿದ್ದಾರೆ. ಈಗಲೂ ಸಹ ಅವರ ಸಂಗೀತ ಕಂಠಕ್ಕೆ ಅಭಿಮಾನಿ ಬಳಗವೇ ಇದೆ. ಹೀಗೆ ಸಂಗೀತದ ಮೂಲಕ ಗುರುತಿಸಿಕೊಂಡ ಅವರು ಇದೀಗ ರಾಜಕೀಯಕ್ಕೂ ಎಂಟ್ರಿ ಕೊಟ್ಟು ಗಮನ ಸೆಳೆದಿದ್ದಾರೆ.

ಇನ್ನೂ 2021ರಲ್ಲಿ ಮೈಥಿಲಿ ಅವರಿಗೆ ಸಂಗೀತ ನಾಟಕ ಅಕಾಡೆಮಿಯಿಂದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪ್ರಶಸ್ತಿ ದೊರೆಯಿತು. ಇದು ಭಾರತದ ಯುವ ಕಲಾವಿದರಿಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿ ಆಗಿದೆ. ಮೈಥಿಲಿ ಹಿಂದಿ ಮತ್ತು ಭೋಜ್‌ಪುರಿ ಪ್ರದರ್ಶನಗಳಿಗೆ ದೇಶಾದ್ಯಂತ ಹೆಸರುವಾಸಿಯಾದ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

ಇನ್ನೂ ಇಲ್ಲಿವಯರೆಗೂ ಬಿಜೆಪಿ ಗೆಲುವು ಕಾಣದ ದರ್ಭಾಂಗ ಜಿಲ್ಲೆಯ ಅಲಿನಗರ ವಿಧಾನಸಭಾ ಕ್ಷೇತ್ರದಲ್ಲಿ ಇದೀಗ 25 ವರ್ಷದ ಮೈಥಿಲಿ ಠಾಕೂರ್ ಭರ್ಜರಿಯಾಗಿ ಗೆದ್ದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ಮೂಲಕ ಭಾರತದ ಅಂತ್ಯತ ಕಿರಿಯ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನೂ ಮೈಥಿಲಿ ಠಾಕೂರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಹಬ್ಬಾಸ್‌ ಗಿರಿ ನೀಡಿ ಹೊಗಳಿದ್ದಾರೆ.

ಹೀಗೆ ಕಳೆದ ಎಂಪಿ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಿರಿಯಬ್ಬರು ಗೆದ್ದು ಸಂಸದರಾಗಿ ಆಯ್ಕೆಯಾಗಿದ್ದಾರೆ. 26 ವರ್ಷದ ಸಾಗರ್ ಈಶ್ವರ್ ಖಂಡ್ರೆ ಅವರು ಬೀದರ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ ಆಗಿದ್ದರು. ಅವರು ಈ ಮೂಲಕ ಕರ್ನಾಟಕದ ಅತ್ಯಂತ ಕಿರಿಯ ಸಂಸತ್ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರು. ಮತ್ತೊಂದೆಡೆ ಸತೀಶ್ ಜಾರಕಿಹೊಳಿ ಪುತ್ರಿ 26 ವರ್ಷದ ಪ್ರಿಯಾಂಕಾ ಜಾರಕಿಹೊಳಿ ಅವರು ಚಿಕ್ಕೋಡಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಸಂಸತ್‌ಗೆ ಎಂಟ್ರಿ ಕೊಟ್ಟಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+