ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧೀಜಿ ಕಲಿತ 164 ವರ್ಷ ಹಳೆ ಶಾಲೆ ಮ್ಯೂಸಿಯಂ ಆಗಿ ಪರಿವರ್ತನೆ

|
Google Oneindia Kannada News

ರಾಜ್‌ಕೋಟ್‌, ಮೇ 05 : ಮಹಾತ್ಮಾ ಗಾಂಧಿ ಅವರು ಕಲಿತ 164 ವರ್ಷ ಹಳೆಯ, ಇಲ್ಲಿನ ಆಲ್‌ ಫ್ರೆಡ್ ಹೈಸ್ಕೂಲನ್ನು ಸುಮಾರು 10 ಕೋಟಿ ರು. ವೆಚ್ಚದಲ್ಲಿ ಮ್ಯೂಸಿಯಂ ಆಗಿ ಪರಿವರ್ತಿಸಲು ಸಿದ್ಧತೆಗಳು ನಡೆದಿವೆ.

ಇದರಿಂದ ಸಧ್ಯಕ್ಕೆ ಈ ಶಾಲೆಯನ್ನು ಮುಚ್ಚಲಾಗಿದೆ. ಕಳೆದ ವರ್ಷ ರಾಜ್‌ಕೋಟ್‌ ಮುನಿಸಿಪಲ್‌ ಕಾರ್ಪೊರೇಶನ್, ಈ ಐತಿಹಾಸಿಕ ಮಹತ್ವದ ಶಾಲೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸುವುದಕ್ಕಾಗಿ ಶಾಲೆಯನ್ನು ಮಚ್ಚಲಾಗುವ ಪ್ರಸ್ತಾವವನ್ನು ಸರಕಾರಕ್ಕೆ ಸಲ್ಲಿಸಿತ್ತು.

Mahatma Gandhi studied Alfred high school convert it into a museum

ಸರಕಾರ ಆ ಪ್ರಸ್ತಾವವಕ್ಕೆ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಇದೀಗ ಶಾಲಾ ಕಟ್ಟಡವನ್ನು ಆರ್‌ಎಂಸಿಗೆ ಒಪ್ಪಿಸಲಾಗುತ್ತಿದೆ ಎದು ರಾಜ್‌ಕೋಟ್‌ ಮುನಿಸಿಪಲ್‌ ಕಮಿಷನರ್‌ ಬಿ ಎನ್‌ ಪಾಣಿ ತಿಳಿಸಿದ್ದಾರೆ.

1853ರ ಅಕ್ಟೋಬರ್‌ 17ರಂದು ಬ್ರಿಟಿಷ್‌ ಆಡಳಿತ ಸ್ಥಾಪಿಸಿದ್ದ ಈ ಶಾಲೆ ಸೌರಾಷ್ಟ್ರ ಪ್ರಾಂತ್ಯದಲ್ಲಿ ಇದು ಪ್ರಪ್ರಥಮ ಇಂಗ್ಲಿಷ್‌ ಮಾಧ್ಯಮ ಶಾಲೆ ಎನಿಸಿಕೊಂಡಿತ್ತು. ಮಹಾತ್ಮಾ ಗಾಂಧೀಜಿಯವರು 1887ರಲ್ಲಿ ಈ ಶಾಲೆಯಿಂದ ತೇರ್ಗಡೆಯಾಗಿ ಹೋಗಿದ್ದರು.

ಇದೀಗ ಶಾಲೆಯನ್ನು ಮ್ಯೂಸಿಯಂ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಶಾಲೆಯು ತನ್ನಲ್ಲಿ ಕಲಿಯುತ್ತಿರುವ ಎಲ್ಲ 125 ಮಂದಿ ವಿದ್ಯಾರ್ಥಿಗಳಿಗೆ ಸ್ಕೂಲ್‌ ಲೀವಿಂಗ್ ಸರ್ಟಿಫಿಕೇಟ್‌ ನೀಡಲು ಆರಂಭಿಸಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ರೇವಾ ಪಟೇಲ್‌ ತಿಳಿಸಿದ್ದಾರೆ.

English summary
The Alfred High School Rajkot,164-year-old institution where Mahatma Gandhi studied - has been shut down by the authorities to make way for a museum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X