• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Today's Update: ಮಹಾರಾಷ್ಟ್ರದಲ್ಲಿ 3752 ಕೇಸ್, ತಮಿಳುನಾಡಿನಲ್ಲಿ 2141 ಸೋಂಕು

|

ದೆಹಲಿ, ಜೂನ್ 15: ದೇಶದ ಕೊರೊನಾ ಹಾಟ್‌ಸ್ಪಾಟ್‌ ರಾಜ್ಯ ಮಹಾರಾಷ್ಟ್ರದಲ್ಲಿಂದು 3752 ಜನರಿಗೆ ಮಹಾಮಾರಿ ಕೊರೊನಾ ವೈರಸ್ ವಕ್ಕರಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,20,504ಕ್ಕೆ ಏರಿದೆ.

   ಚೀನಿ‌ ಆ್ಯಪ್ ಗಳನ್ನು ಬಳಸಬಾರದೆಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದ ಗುಪ್ತಚರ ಇಲಾಖೆ | Oneindia Kannada

   100 ಜನರು ಇಂದು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈವರೆಗೂ ಮಹಾರಾಷ್ಟ್ರದಲ್ಲಿ ಮೃತಪಟ್ಟವರ ಸಂಖ್ಯೆ 5,751. ಮಹಾರಾಷ್ಟ್ರದ ಧಾರವಿ ಸ್ಲಂ ಪ್ರದೇಶದಲ್ಲಿಂದು 28 ಹೊಸ ಕೇಸ್ ದಾಖಲಾಗಿದ್ದು, ಒಟ್ಟು 2134 ಜನರಿಗೆ ಸೋಂಕು ತಗುಲಿದೆ.

   Breaking: ಭಾರತದಲ್ಲಿ ಒಂದೇ ದಿನ 12,881 ಕೊರೊನಾ ಕೇಸ್, 334 ಮಂದಿ ಸಾವು

   ತಮಿಳುನಾಡಿನಲ್ಲಿಂದು 2141 ಮಂದಿಗೆ ಕೊವಿಡ್ ಸೋಂಕು ಅಂಟಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 52,334ಕ್ಕೆ ಜಿಗಿದಿದೆ. ಈವರೆಗೂ 625 ಜನರು ತಮಿಳುನಾಡಿನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

   ಕರ್ನಾಟಕದಲ್ಲಿ ಇಂದು 210 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ತಗುಲಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7944ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ 12 ಮಂದಿ ಸಾವನ್ನಪ್ಪಿದ್ದು, ಈವರೆಗೂ 114 ಜನರು ಪ್ರಾಣ ಕಳೆದುಕೊಂಡಿದ್ದಾರೆ.

   ಗುಜರಾತ್‌ನಲ್ಲಿಂದು 510 ಮಂದಿಗೆ ಕೊವಿಡ್ ಸೋಂಕು ದೃಢವಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 25,660ಕ್ಕೆ ಜಿಗಿದಿದೆ. ಒಟ್ಟು 1592 ಜನರು ಸಾವನ್ನಪ್ಪಿದ್ದಾರೆ.

   ಪಶ್ಚಿಮ ಬಂಗಾಳದಲ್ಲಿಂದು 435 ಜನರಿಗೆ ಕೊರೊನಾ ವೈರಸ್ ವಕ್ಕರಿಸಿದೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12,735ಕ್ಕೆ ಏರಿಕೆಯಾಗಿದೆ. 5,216 ಕೇಸ್‌ಗಳು ರಾಜ್ಯದಲ್ಲಿ ಸಕ್ರಿಯವಾಗಿದೆ.

   ಕೇರಳದಲ್ಲಿಂದು 97 ಜನರಿಗೆ ಕೊರೊನಾ ವೈರಸ್ ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2794 ತಲುಪಿದೆ. ಈ ಪೈಕಿ 1358 ಪ್ರಕರಣಗಳು ಆಕ್ಟಿವ್ ಆಗಿದೆ.

   ರಾಜಸ್ಥಾನದಲ್ಲಿ ಇಂದು 315 ಮಂದಿಗೆ ಮಹಾಮಾರಿ ಕೊರೊನಾ ತಗುಲಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 13,857ಕ್ಕೆ ಏರಿದೆ. ಸದ್ಯ, ರಾಜ್ಯದಲ್ಲಿ 2,785 ಕೇಸ್‌ಗಳು ಮಾತ್ರ ಸಕ್ರಿಯವಾಗಿದೆ.

   ಗೋವಾದಲ್ಲಿಂದು 47 ಜನರಿಗೆ ಕೊರೊನಾ ವೈರಸ್ ಖಚಿತವಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 705 ಏರಿದೆ. 596 ಕೇಸ್‌ಗಳು ಸಕ್ರಿಯವಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

   English summary
   Maharashtra records highest single-day spike with 3752 new COVID19 cases today. and Tamil Nadu reports 2141 new COVID19 positive cases today.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X