ಮತ್ತೆ ವೋಲ್ವೋ ದುರಂತ: 7 ಶಾಲಾ ಮಕ್ಕಳ ಸಾವು
ಕೊಲ್ಹಾಪುರ,
ಡಿ.7- ಆಂಧ್ರದಲ್ಲಿ ಮೆಹಬೂಬ್ ನಗರ, ಹಾವೇರಿಯಲ್ಲಿ ವೋಲ್ವೋ ಬಸ್ ದುರಂತಗಳ ನಂತರ ಮತ್ತೊಂದು ದುರಂತ ಸಂಭವಿಸಿದೆ. ಮಿನಿ ಬಸ್ ಮತ್ತು ವೋಲ್ವೋ ಬಸ್ಸುಗಳ ಮಧ್ಯೆ ಶನಿವಾರ ಬೆಳಗಿನ ಜಾವ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 7 ಮಂದಿ ಮುಗ್ಧ ಶಾಲಾ ಮಕ್ಕಳು ಅಸುನೀಗಿದ್ದಾರೆ. ಅಪಘಾತದಲ್ಲಿ 10ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ. id="toptextpromo">ಮೃತರನ್ನು
ಕೊಲ್ಹಾಪುರ ಮೂಲದ ಅಕ್ಷಯ್ ಪಾಟೀಲ್, ವಲ್ಲಭ್ ಕಾಂಬ್ಲೆ, ಗಣೇಶ್ ಕುಮಾರ್, ಸೂರಜ್ ಪಾಟೀಲ್, ಆಕಾಶ್, ಪಂಕಜ್ ಕುಮಾರ್ ಮತ್ತು ಮಿನಿ ಬಸ್ ಚಾಲಕ ಪ್ರತಾಪ್ ಎಂದು ಗುರುತಿಸಲಾಗಿದೆ. ಕೊಲ್ಹಾಪುರದಿಂದ ಶಾಲಾ ಮಕ್ಕಳು ಪ್ರವಾಸಕ್ಕೆ ಹೊರಟಿದ್ದರು. id='are-slot-1' class='oiad oi-axt oiadv'> id='top-searched-articles'>ಮಹಾರಾಷ್ಟ್ರದ
ತುಳಜಾಪುರ ಬಳಿ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್ಸಿಗೆ ವೇಗವಾಗಿ ಬಂದ ವೋಲ್ವೋ ಬಸ್ ಅಪ್ಪಳಿಸಿ ಈ ದುರಂತ ಸಂಭವಿಸಿದೆ. ವೋಲ್ವೋ ಬಸ್ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣವೆನ್ನಲಾಗಿದೆ.











Click it and Unblock the Notifications