ಈ ಕಾರಣಕ್ಕೆ ದಕ್ಷಿಣ ಭಾರತದೊಂದಿಗೆ ಕೈಜೋಡಿಸಿದ ಮಹಾರಾಷ್ಟ್ರ!
ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆಯ ವಿರುದ್ಧ ಬೃಹತ್ ಅಭಿಯಾನ ಶುರುವಾಗಿದೆ. ಭಾಷೆಯಾಗಿ ನಾವು ಹಿಂದಿಯನ್ನು ಗೌರವಿಸುತ್ತೇವೆ. ಆದರೆ, ನಮ್ಮ ಮೇಲೆ ಹೇರಿಕೆ ಮಾಡಬೇಡಿ. ಕರ್ನಾಟಕ ಸೇರಿದಂತೆ ಆಯಾ ರಾಜ್ಯಗಳ ಭಾಷೆಯನ್ನು ಬಳಸಬೇಕು ಎಂದು ದಕ್ಷಿಣ ಭಾರತೀಯರು ಒತ್ತಾಯಿಸುತ್ತಿದ್ದಾರೆ. ಇದೀಗ ಹಿಂದಿ ಹೇರಿಕೆ ವಿರುದ್ಧದ ಅಭಿಯಾನದಲ್ಲಿ ಮಹಾರಾಷ್ಟ್ರ ಸಹ ಕೈಜೋಡಿಸಿದೆ. ಈ ಮೂಲಕ ಹಿಂದಿ ವಿರುದ್ಧ ಅಭಿಯಾನಕ್ಕೆ ಇನ್ನಷ್ಟು ಬಲ ಬಂದಂತೆ ಆಗಿದೆ. ಇನ್ನು ಪಂಜಾಬ್ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಿಂದಿ ಹೇರಿಕೆಯ ವಿರುದ್ಧ ಜನ ತಿರುಗಿ ಬಿದಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಆಗುತ್ತಿರುವುದನ್ನು ವಿರೋಧಿಸಲಾಗುತ್ತಿದ್ದು. ಈ ವಿಚಾರದಲ್ಲಿ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳು ಒಂದಾಗಿವೆ. ಆಂಧ್ರಪ್ರದೇಶ ಸರ್ಕಾರವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾರಣದಿಂದ ಈ ಅಭಿಯಾನದಲ್ಲಿ ಹಿಂದಿದೆಯಾದರೂ, ಅಲ್ಲಿನ ಜನ ಸಹ ಹಿಂದಿ ಹೇರಿಕೆಯ ವಿರುದ್ಧವಾಗಿದ್ದಾರೆ. ಇದೀಗ ದಕ್ಷಿಣ ಭಾರತದ ರಾಜ್ಯಗಳು ಮಾತ್ರವಲ್ಲದೇ ಉತ್ತರ ಭಾರತದ ಕೆಲವು ರಾಜ್ಯಗಳು ಹಾಗೂ ಮಹಾರಾಷ್ಟ್ರ ಸಹ ಹಿಂದಿ ಹೇರಿಕೆ ವಿರುದ್ಧದ ತಮ್ಮ ಅಸಮಾಧಾನವನ್ನು ಹೊರ ಹಾಕಿವೆ. ಈ ಮೂಲಕ ಹಿಂದಿ ಹೇರಿಕೆಯ ವಿರುದ್ಧದ ಅಭಿಯಾನಕ್ಕೆ ದಕ್ಷಿಣ ಭಾರತದ ರಾಜ್ಯಗಳು ವೇದಿಕೆ ಕಲ್ಪಿಸಿದಂತಾಗಿದೆ.

ಮಹಾರಾಷ್ಟ್ರದಲ್ಲೂ ಹಿಂದಿ ಹೇರಿಕೆ ವಿರುದ್ಧ ಅಭಿಯಾನ!
ಇನ್ನು ಮಹಾರಾಷ್ಟ್ರದಲ್ಲೂ ಹಿಂದಿ ಹೇರಿಕೆಯ ವಿರುದ್ಧದ ಅಭಿಯಾನ ಶುರುವಾಗಿದೆ. ಇಲ್ಲಿನ ರೈಲ್ವೆ ನಿಲ್ದಾಣದ ಸಿಬ್ಬಂದಿ ಹಾಗೂ ಟೆಲಿಕಾಂ ಕಂಪನಿಯ ಸಿಬ್ಬಂದಿ ಹಿಂದಿಯಲ್ಲಿ ಮಾತನಾಡಿದ್ದು. ಇದಕ್ಕೆ ಮರಾಠಿಗರು ವಿರೋಧ ವ್ಯಕ್ತಪಡಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದಲ್ಲಿ ಮರಾಠಿ ಮೊದಲು ಎಂದು ಮರಾಠಿಗರು ಹೇಳುತ್ತಿದ್ದಾರೆ.
ಹೌದು ಇಷ್ಟು ದಿನ ದಕ್ಷಿಣ ಭಾರತಕ್ಕೆ ಸೀಮಿತವಾಗಿದ್ದ ಹಿಂದಿ ಹೇರಿಕೆ ವಿರೋಧಿ ಅಭಿಯಾನವು ಭಾರತದ ವಿವಿಧ ರಾಜ್ಯಗಳಲ್ಲೂ ಶುರುವಾಗಿದೆ. ಮರಾಠಿ ಭಾಷೆಯಲ್ಲಿ ಸೇವೆ ಕೊಡಿ ಹಿಂದಿಯಲ್ಲಿ ಮಾತನಾಡಬೇಡಿ ಎಂದು ಇಲ್ಲಿನ ಜನ ಪ್ರಶ್ನೆ ಮಾಡುವುದಕ್ಕೆ ಶುರು ಮಾಡಿಕೊಂಡಿದ್ದಾರೆ. ಜನ ಪ್ರಶ್ನೆ ಮಾಡುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜನ ಈ ರಾಜ್ಯದಲ್ಲಿ ಮರಾಠಿ ಭಾಷೆ ಬಳಸದೆ ಇರುವವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಮುಖ್ಯವಾಗಿ ಹಿಂದಿಯಲ್ಲಿ ಮಾತನಾಡುವ ಸರ್ಕಾರಿ ನೌಕರರನ್ನು ಪ್ರಶ್ನೆ ಮಾಡುತ್ತಿದ್ದಾರೆ.
ನಾವು ಹೇಳಿದ್ದೂ ಇದೇ ಅಲ್ಲವೇ ?
ಮಹಾರಾಷ್ಟ್ರದಲ್ಲಿ ಮರಾಠಿ ಮಾತನಾಡಬೇಕು. ಮಹಾರಾಷ್ಟ್ರದಲ್ಲಿ ಮರಾಠಿಯೇ ಪ್ರಥಮ ಭಾಷೆ ಅಂತ ಅಲ್ಲಿನ ಜನ ಹೇಳುತ್ತಿದ್ದಾರೆ. ಇನ್ನು ಈ ವೈರಲ್ ವಿಡಿಯೋಗೆ ರಿಯಾಕ್ಟ್ ಮಾಡಿರುವ ಕನ್ನಡಿಗರು ಇಷ್ಟು ದಿನಗಳ ಕಾಲ ನಾವು ಹೇಳಿದ್ದೂ ಅದೇ ಅಲ್ಲವೇ. ನಾವು ಹೇಳಿದಾಗ ನೀವು ಉತ್ತರ ಭಾರತೀಯರು ವಿರೋಧ ಮಾಡುತ್ತಿದ್ದಿರಿ. ಈಗ ಜ್ಞಾನೋದಯವಾಗಿದೆ ಅಂತ ಕನ್ನಡಿಗರು ಹೇಳುತ್ತಿದ್ದಾರೆ.












Click it and Unblock the Notifications