ಮಹಾರಾಷ್ಟ್ರದಲ್ಲಿ ಬಿಜೆಪಿ "ಮೈಕ್ರೋ ಪ್ಲಾನಿಂಗ್"ಗೆ ದಂಗಾದ ಕಾಂಗ್ರೆಸ್‌!

ಮಹಾರಾಷ್ಟ್ರದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಗೆ ಬಿಜೆಪಿ ವಿಭಿನ್ನ ಸೂತ್ರವನ್ನೇ ಅನುಸರಿಸುತ್ತಿದೆ. ಇದೀಗ ಮರಾಠರ ಸಮುದಾಯ ಬಿಜೆಪಿಯಿಂದ ತುಸು ಅಂತರ ಕಾಪಾಡಿಕೊಂಡಿದೆ. ಮೀಸಲಾತಿ ವಿಚಾರದಲ್ಲಿ ಮಹಾರಾಷ್ಟ್ರದಲ್ಲಿ ಮರಾಠರ ಸಮುದಾಯದಿಂದ ಭಾರೀ ಹೋರಾಟಗಳು ನಡೆದಿವೆ. ಇದೀಗ ಬಿಜೆಪಿಯು ಒಬಿಸಿ ಹಾಗೂ ಹಿಂದುಳಿದ ವರ್ಗಗಳ ಮತಬ್ಯಾಂಕ್‌ನ ಮೇಲೆ ಕಣ್ಣಿಟ್ಟಿದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಮರಾಠ ಸಮುದಾಯವು ಮೀಸಲಾತಿಗೆ ಆಗ್ರಹಿಸಿ ಈಚೆಗೆ ಮಹಾರಾಷ್ಟ್ರದಲ್ಲಿ ಬೃಹತ್‌ ಪ್ರತಿಭಟನೆಗಳನ್ನು ನಡೆದಿದ್ದವು. ಈ ಸಮುದಾಯದ ಹಲವು ನಾಯಕರು ಉಪವಾಸ ಸತ್ಯಾಗ್ರಹ ಸಹ ಮಾಡಿದ್ದರು. ಆದರೆ, ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದನೆ ಸಿಕ್ಕಿಲ್ಲ ಎನ್ನುವುದು ಮರಾಠ ಸಮುದಾಯದ ಆರೋಪವಾಗಿದೆ. ಆದರೆ, ಮರಾಠ ಸಮುದಾಯದ ಕೆಲವರು ಬಿಜೆಪಿಯ ಪರವಾಗಿಯೇ ಇದ್ದಾರೆ.

Maharashtra Election BJP s plan is a shock to Congress

ಮಹಾರಾಷ್ಟ್ರದಲ್ಲಿ ಒಟ್ಟು 288 ವಿಧಾನಸಭಾ ಕ್ಷೇತ್ರಗಳು ಇವೆ. ಇದೀಗ ಮಹಾರಾಷ್ಟ್ರದಲ್ಲಿ ಬಿಜೆಪಿಯು ಬರೋಬ್ಬರಿ 175 ವಿಧಾನಸಭಾ ಕ್ಷೇತ್ರಗಳಲ್ಲಿ ಒಬಿಸಿ ಹಾಗೂ ಹಿಂದುಳಿದ ಸಮುದಾಯಗಳನ್ನು ಗುರಿಯಾಗಿ ಇರಿಸಿಕೊಂಡು ಮೈಕ್ರೋ (ಸಣ್ಣ ಸಣ್ಣ ಗುಂಪು) ಒಬಿಸಿಗಳಲ್ಲಿ ಜಾಗೃತಿ ಹಾಗೂ ಬಿಜೆಪಿ ಪರವಾದ ಒಲವನ್ನು ಮೂಡಿಸುತ್ತಿದೆ. ಅಂದರೆ, ಬಿಜೆಪಿ ಪರವಾದ ಅಭಿಪ್ರಾಯವನ್ನು ಮೂಡಿಸಲಾಗುತ್ತಿದೆ.

ಇನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇದೆ. ಇದನ್ನು ಮಹಾಯುತಿ ಒಕ್ಕೂಟ ಎಂದು ಕರೆಯಲಾಗುತ್ತದೆ. ಈಚೆಗೆ ಮಹಾಯುತಿ ಸರ್ಕಾರವು ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಕೇಂದ್ರ ಒಬಿಸಿ ಪಟ್ಟಿಯಲ್ಲಿ ಏಳು ಹೊಸ ಒಬಿಸಿ ಜಾತಿಗಳನ್ನು ಸೇರಿಸುವುದು ಹಾಗೂ ಆದಾಯ ಮಿತಿಯನ್ನು 8 ಲಕ್ಷ ರೂಪಾಯಿಯಿಂದ 12 ಲಕ್ಷಕ್ಕೆ ಹೆಚ್ಚಳ ಮಾಡುವ ನಿರ್ಧಾರವನ್ನು ತೆಗೆದುಕೊಂಡಿತ್ತು.

Maharashtra Election BJP s plan is a shock to Congress

ಇನ್ನು ಮಹಾರಾಷ್ಟ್ರದಲ್ಲಿ ಒಬಿಸಿಯಲ್ಲಿ 341 ಜಾತಿಗಳು/ಉಪಜಾತಿಗಳನ್ನು ಒಳಗೊಂಡಿವೆ. ಇವುಗಳಲ್ಲಿ, ಮಾಲಿ, ಧಂಗರ್ ಮತ್ತು ವಂಜಾರಿಗಳು ಪ್ರಮುಖವಾಗಿವೆ. ಅಲ್ಲದೇ ಹೆಚ್ಚು ಜನಸಂಖ್ಯೆ ಇರುವ ಪ್ರಮುಖ ಸಮುದಾಯಗಳಲ್ಲಿ ಈ ಸಮುದಾಯಗಳೂ ಸೇರಿವೆ.

ಬಿಜೆಪಿ ಒಬಿಸಿ ಮಂಚ್ ಅಧ್ಯಕ್ಷ ಪ್ರಕಾಶ್ ಶೆಂಜೆ ಅವರು, ಜಾರಂಗೆ-ಪಾಟೀಲ ಸಮುದಾಯವು ಮರಾಠ ಮೀಸಲಾತಿಯನ್ನು ಒಬಿಸಿ ಕೋಟಾದಲ್ಲಿ ನೀಡುವಂತೆ ಮನವಿ ಮಾಡಿದ್ದವು. ಇದು ಒಬಿಸಿ ಸಮುದಾಯಗಳ ಒಳಗೆ ಅಸಮಾಧಾನಕ್ಕೂ ಕಾರಣವಾಗಿತ್ತು. ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಜಾತಿ ಹಾಗೂ ಮೀಸಲಾತಿ ವಿಚಾರವು ಪ್ರಮುಖ ವಿಷಯವಾಗಲಿದೆ ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ಕಳೆದ ಐದು ವರ್ಷದ ಅವಧಿಯಲ್ಲಿ ಎಲ್ಲಾ ಪಕ್ಷಗಳು ಅಧಿಕಾರ ನಡೆಸಿವೆ. ಇಲ್ಲಿ ಸರ್ಕಾರ ಬೀಳುವುದು, ಹೊಸ ಸರ್ಕಾರ ರಚನೆಯಾಗುವುದು ಕಾಮನ್‌ ಎನ್ನುವಂತೆ ಇದೆ. ದೇಶದ ವಿವಿಧ ರಾಜ್ಯಗಳಲ್ಲಿ ಒಂದು ರಾಜಕೀಯವಾದರೆ, ಮಹಾರಾಷ್ಟ್ರ ರಾಜಕೀಯವೇ ಒಂದು ಎನ್ನುವಂತಿದೆ.

ಇನ್ನು ವಂಚಿತ್ ಬಹುಜನ ಅಘಾಡಿ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಅವರು, ಮಹಾರಾಷ್ಟ್ರದಲ್ಲಿ ಮರಾಠರು ಮತ್ತು ಒಬಿಸಿಗಳ ನಡುವಿನ ಧ್ರುವೀಕರಣವು ಅಪಾಯಕಾರಿ ಮಟ್ಟವನ್ನು ತಲುಪಿದೆ ಎಂದು ಹೇಳಿದ್ದಾರೆ. ಅಲ್ಲದೇ ಇದು ಮಹಾರಾಷ್ಟ್ರದ ಸಾಮಾಜಿಕ ರಚನೆಯ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಮಹಾರಾಷ್ಟ್ರ ರಾಜಕೀಯವು ಮರಾಠರು ಹಾಗೂ ಒಬಿಸಿಗಳ ಮೇಲೆ ಅವಲಂಬಿತವಾಗಿದೆ ಎನ್ನುವ ಅಭಿಪ್ರಾಯ ಮೂಡಲು ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿಯ ಈ ಮೈಕ್ರೋ ಪ್ಲಾನಿಂಗ್ ಕಾಂಗ್ರೆಸ್‌ ಮೈತ್ರಿ ಪಕ್ಷಗಳ ನಿದ್ದೆಗೆಡಿಸಿವೆ.

ಮರಾಠ ಸಮುದಾಯ ನಿರ್ಣಾಯಕ

ಮಹಾರಾಷ್ಟ್ರ ರಾಜಕೀಯದಲ್ಲಿ ಮರಾಠ ಸಮುದಾಯವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. 2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ 288 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ 160ಕ್ಕೂ ಹೆಚ್ಚು ಮರಾಠ ಸಮುದಾಯದ ಶಾಸಕರು ಗೆದಿದ್ದಾರೆ. ಇನ್ನು 2024 ರ ಲೋಕಸಭೆ ಚುನಾವಣೆಯಲ್ಲಿ 48 ಸಂಸದರಲ್ಲಿ ಮರಾಠ ಸಮುದಾಯಕ್ಕೆ ಸೇರಿದವರು 30 ಪ್ಲಸ್ ಇದ್ದಾರೆ. ರಾಜ್ಯ ರಾಜಕೀಯದಲ್ಲಿ ಮರಾಠರ ಪ್ರಾಬಲ್ಯವು ತೋರಿಸುತ್ತದೆ. ಈ ಬಾರಿಯೂ ಮರಾಠ ಸಮುದಾಯವು ನಿರ್ಣಾಯಕವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+