Maharashtra CM Wife: ನಿಮ್ಮ ಸೇವೆ, ಜವಾಬ್ದಾರಿ ನಿಭಾಯಿಸುತ್ತೇನೆ ಎಂದ ಮಹಾರಾಷ್ಟ್ರ ಸಿ.ಎಂ ಪತ್ನಿ ಅಮೃತಾ ಫಡ್ನವಿಸ್
ಮಹಾರಾಷ್ಟ್ರದಲ್ಲಿ ಗುರುವಾರದಿಂದ ನೂತನ ಮಹಾಯುತಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ದೇವೇಂದ್ರ ಫಡ್ನವಿಸ್ ಅವರು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರು ಮಹಾರಾಷ್ಟ್ರದ ಜನರ ಸೇವೆಗೆ ನಾನು ಸಿದ್ಧ ಎಂದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮೂಲಕ ಅಮೃತಾ ಅವರು ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿ ಇದ್ದಾರೆ. ಇವರು ರೀಲ್ಸ್ ಮಾಡುವುದನ್ನು ವಿರೋಧ ಪಕ್ಷಗಳು ಟೀಕೆ ಮಾಡಿದ್ದೂ ಇದೆ. ಆದರೆ, ಆ ಟೀಕೆಗಳ ಬಗ್ಗೆ ಅಮೃತಾ ಅವರು ತಲೆ ಕೆಡಿಸಿಕೊಂಡಿಲ್ಲ. ಇದೀಗ ರಾಜ್ಯದಲ್ಲಿ ಮಹಾಯುತಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಬಿಜೆಪಿ ನಾಯಕ ಹಾಗೂ ಅಮೃತಾ ಅವರ ಪತಿ ದೇವೇಂದ್ರ ಫಡ್ನವಿಸ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕಳೆದ 12 ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಾಕ್ಕೆ ಬ್ರೇಕ್ ಬಿದ್ದಿದ್ದು. ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ಗುರುವಾರದಿಂದ ಅಧಿಕಾರಕ್ಕೆ ಬಂದಿದೆ. ಶುಕ್ರವಾರದ ಮಹಾಯುತಿ ಸರ್ಕಾರದ ಮೊದಲ ದಿನದ ಕೆಲಸಗಳು ನಡೆದಿವೆ. ಈ ನಡುವೆ ಮಹಾರಾಷ್ಟ್ರ ಸಿ.ಎಂ ಅವರ ಪತ್ನಿ ಅಮೃತಾ ಅವರು ನಾನು ಮಹಾರಾಷ್ಟ್ರ ಜನರ ಸೇವೆಗೆ ಸಿದ್ಧ ಎಂದಿದ್ದಾರೆ!

ಮಹಾರಾಷ್ಟ್ರದ ಜನರೆಲ್ಲರಿಗೂ ಧನ್ಯವಾದಗಳು. ನಿಮ್ಮ ಅಣ್ಣ ಹಾಗೂ ಅತ್ತಿಗೆಯ (ದೇವೇಂದ್ರ ಫಡ್ನವಿಸ್ ಹಾಗೂ ಅಮೃತಾ ಫಡ್ನವಿಸ್) ಮೇಲೆ ಇರಿಸಿರುವ ಪ್ರೀತಿಗೆ ಶರಣು. ನಾನು ನಿಮ್ಮ ಅತ್ತಿಗೆ ಪಾತ್ರವನ್ನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಿರ್ವಹಿಸುತ್ತೇನೆ. ನಿಮ್ಮ ಸೇವೆ ಮಾಡುವುದರಲ್ಲಿ ಹಾಗೂ ಒಳ್ಳೆಯ ಬದಲಾವಣೆಯನ್ನು ತರುವಲ್ಲಿ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಮೂರನೇ ಬಾರಿಗೆ ದೇವೇಂದ್ರ ಫಡ್ನವಿಸ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಮೊದಲ ಅವಧಿಯಲ್ಲಿ ಐದು ವರ್ಷ ಅವರು ಮುಖ್ಯಮಂತ್ರಿಯಾಗಿದ್ದರು. ಆದರೆ, ಎರಡನೇ ಅವಧಿಯಲ್ಲಿ ಕೇವಲ ಮೂರು ದಿನ ಮಾತ್ರ ಅವರು ಮುಖ್ಯಮಂತ್ರಿಯಾಗಿದ್ದರು. ಇದೀಗ ಮೂರನೇ ಅವಧಿಗೆ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ಅವರು ಯಾವ ರೀತಿ ಆಡಳಿತ ನಡೆಸಲಿದ್ದಾರೆ ಎನ್ನುವ ಕುತೂಹಲ ಮಹಾರಾಷ್ಟ್ರದಲ್ಲಿ ಹೆಚ್ಚಾಗಿದೆ.

ಒಂದಾಗಿ ಸಾಗುತ್ತೇವೆ: ಇನ್ನು ಗುರವಾರ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದೇವೇಂದ್ರ ಫಡ್ನವಿಸ್ ಅವರು ನಾವು ಮಹಾರಾಷ್ಟ್ರದಲ್ಲಿ ಒಂದಾಗಿ ಸಾಗಲಿದ್ದೇವೆ ಎಂದು ಹೇಳಿದ್ದಾರೆ. ಅಂದರೆ ಮಹಾರಾಷ್ಟ್ರದಲ್ಲಿ ಇದೀಗ ಮಹಾಯುತಿ ಮೈತ್ರಿ ಸರ್ಕಾರವು ಅಧಿಕಾರದಲ್ಲಿ ಇದ್ದು, ದೇವೇಂದ್ರ ಫಡ್ನವಿಸ್ ಅವರು ಮುಖ್ಯಮಂತ್ರಿಯಾಗಿದ್ದರೆ. ಅಜಿತ್ ಪವಾರ್ ಹಾಗೂ ಏಕನಾಥ್ ಶಿಂಧೆ ಅವರು ಉಪ ಮುಖ್ಯಮಂತ್ರಿಯಾಗಿದ್ದಾರೆ. ಎಲ್ಲರೂ ಒಂದಾಗಿ ಸಾಗಲಿದ್ದೇವೆ.
ರಾಜಕೀಯದ ರಚನೆ ಈ ರೀತಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಎಂದು ಇದೆ. ಆದರೆ, ನಾವು ಯಾವುದೇ ನಿರ್ಧಾರವನ್ನಾದರೂ ಸೇರಿಯೇ ತೆಗೆದುಕೊಳ್ಳಲಿದ್ದೇವೆ. ಒಂದಾಗಿ ಸಾಗಿ ಮಹಾರಾಷ್ಟ್ರದಲ್ಲಿ ಉತ್ತಮ ಆಡಳಿತ ನೀಡಲಿದ್ದೇವೆ ಎಂದು ಅವರು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಮಹಾ ಹೈಡ್ರಾಮಾದ ನಂತರ ಸರ್ಕಾರ ರಚನೆಯಾಗಿದೆ. ಈ ಬಾರಿ ಎಲ್ಲಾ ಪಕ್ಷದಲ್ಲೂ ಹೆಚ್ಚು ಶಾಸಕರಿದ್ದು, ಮಹಾಯುತಿ ಸರ್ಕಾರವನ್ನು ದೇವೇಂದ್ರ ಫಡ್ನವಿಸ್ ಅವರು ಯಾವ ರೀತಿ ಮುನ್ನಡೆಸಲಿದ್ದಾರೆ ಎನ್ನುವ ಕುತೂಹಲವಿದೆ.












Click it and Unblock the Notifications