Exit Poll 2024: ಮಹಾರಾಷ್ಟ್ರ ಎಕ್ಸಿಟ್‌ ಪೋಲ್ ಮೇಲೆ ಎಲ್ಲರ ಕಣ್ಣು

ಮುಂಬೈ, ನವೆಂಬರ್ 20: ಕೆಲವೇ ಹೊತ್ತಿನಲ್ಲಿ ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯದ ವಿಧಾನಸಭೆ ಚುನಾವಣೆ 2024ರ ಮತದಾನ ಮುಕ್ತಾಯವಾಗಲಿದೆ. ಸಂಜೆ 6 ಗಂಟೆಯ ಬಳಿಕ ವಿವಿಧ ವಾಹಿನಿಗಳು ನಡೆಸುವ ಚುನಾವಣೋತ್ತರ ಸಮೀಕ್ಷೆಗಳ ಮೇಲೆ ಎಲ್ಲರ ಗಮನವಿದೆ. ಮಹಾರಾಷ್ಟ್ರದ 288 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತ್ತು ಜಾರ್ಖಂಡ್ ರಾಜ್ಯದ 81 ಸೀಟುಗಳಿಗೆ ಎರಡು ಹಂತದಲ್ಲಿ ಮತದಾನ ನಡೆದಿತ್ತು. ಚುನಾವಣಾ ಫಲಿತಾಂಶ ನವೆಂಬರ್ 23ರ ಶನಿವಾರ ಪ್ರಕಟವಾಗಲಿದೆ.

2019ರ ವಿಧಾನಸಭೆ ಚುನಾವಣೆ ಮತದಾನದ ಬಳಿಕ ಪ್ರಕಟವಾದ ಮಹಾರಾಷ್ಟ್ರದ ಎಕ್ಸಿಟ್ ಪೋಲ್ ಸಮೀಕ್ಷೆ ನಿಖರ ಮಾಹಿತಿ ನೀಡಲು ವಿಫಲವಾಗಿತ್ತು. ಬಿಜೆಪಿ-ಶಿವಸೇನೆ ಮೈತ್ರಿಕೂಟ ಐತಿಹಾಸಿಕ ಜಯಸಾಧಿಸಲಿದೆ ಎಂದು ಹೇಳಿತ್ತು. ಆದರೆ ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟ ಅಧಿಕಾರ ಹಿಡಿಯಲಿದೆ ಎಂದು ನಿಖರವಾಗಿ ಅಂದಾಜಿಸಿತ್ತು.

Maharashtra Assembly Election 2024 Exit Polls Will They Get It Right This Time

ಮಹಾರಾಷ್ಟ್ರದಲ್ಲಿ ಸುಮಾರು 7 ಎಕ್ಸಿಟ್ ಪೋಲ್ ಫಲಿತಾಂಶಗಳು ಬಿಜೆಪಿ ನೇತೃತ್ವದ ಎನ್‌ಡಿಎ 207 ಸೀಟುಗಳಲ್ಲಿ ಜಯಗಳಿಸಲಿವೆ ಎಂದು ಹೇಳಿತ್ತು. ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟ 65 ಸೀಟು, ಉಳಿದ 16 ಸೀಟುಗಳಲ್ಲಿ ಇತರರು, ಪಕ್ಷೇತರರು ಜಯಗಳಿಸಲಿದ್ದಾರೆ ಎಂದು ಅಂದಾಜಿಸಿತ್ತು. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 145 ಸೀಟು.

ಸರ್ಕಾರ ರಚಿಸಿದ ಬಿಜೆಪಿ: ಎನ್‌ಡಿಎ 161 ಸೀಟುಗಳಲ್ಲಿ ಜಯಗಳಿಸಿತ್ತು. ಆದರೆ ಮೈತ್ರಿಕೂಟದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಒಮ್ಮತ ಮೂಡದ ಕಾರಣ ಬಿಜೆಪಿ-ಶಿವಸೇನೆ ಸರ್ಕಾರ ರಚಿಸಲು ವಿಫಲವಾಗಿತ್ತು. ಶಿವಸೇನೆ ಕಾಂಗ್ರೆಸ್, ಎನ್‌ಸಿಪಿ ಜೊತೆ ಕೈ ಜೋಡಿಸಿತು. ಅವರ ಒಟ್ಟಾರೆ ಬಲ 98 ಇತ್ತು. ಮಹಾವಿಕಾಸ್ ಅಘಾಡಿ ಸರ್ಕಾರ ರಚನೆಗೊಂಡಿತು.

ನ್ಯೂಸ್ 18-ಐಪಿಎಸ್‌ಒಎಸ್‌ ಸಮೀಕ್ಷೆ ಎನ್‌ಡಿಎಗೆ 243 ಸೀಟು, ಕಾಂಗ್ರೆಸ್‌-ಎನ್‌ಸಿಪಿ ಸೇರಿ 41 ಸೀಟು ಎಂದು ಅಂದಾಜಿಸಿತ್ತು. ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಫಲಿತಾಂಶಕ್ಕೆ ಹತ್ತಿರವಿತ್ತು. ಬಿಜೆಪಿ-ಶಿವಸೇನೆಗೆ 166 ಸೀಟು, 90 ಸೀಟು ಕಾಂಗ್ರೆಸ್‌-ಎನ್‌ಸಿಪಿಗೆ ಎಂದು ಹೇಳಿತ್ತು.

ಜಾರ್ಖಂಡ್‌ನಲ್ಲಿ ಮೂರು ಸಮೀಕ್ಷೆಗಳು ಜೆಎಂಎಂ-ಕಾಂಗ್ರೆಸ್ ಮತ್ತು ಆರ್‌ಜೆಡಿ ಮೈತ್ರಿಕೂಟಕ್ಕೆ 81ರ ಪೈಕಿ 41 ಸೀಟುಗಳು ಎಂದು ಹೇಳಿದ್ದವು. ಬಿಜೆಪಿ 29, ಎಜೆಎಸ್‌ಯುಪಿ 4, ಜೆವಿಎಂ 3 ಮತ್ತು ಪಕ್ಷೇತರರು ಇತರ 4 ಸೀಟುಗಳನ್ನು ಗೆಲ್ಲಲಿದ್ದಾರೆ ಎಂದು ಅಂದಾಜಿಸಿತ್ತು.

ಈ ಬಾರಿಯ ಚುನಾವಣೆಯಲ್ಲಿ ಜಾರ್ಖಂಡ್‌ನಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿದೆ. ಜೆವಿಎಂ 2020ರಲ್ಲಿ ಬಿಜೆಪಿ ಜೊತೆ ವಿಲೀನಗೊಂಡಿದೆ. ಆದ್ದರಿಂದ ಈ ಬಾರಿಯ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.

ಜೆಎಂಎಂ ನೇತೃತ್ವದ ಮೈತ್ರಿಕೂಟ 47 ಸೀಟುಗಳಲ್ಲಿ ಗೆದ್ದಿತ್ತು. ಬಿಜೆಪಿ 25, ಎಜೆಎಸ್‌ಯುಪಿ 2, ಜೆವಿಎಂ 3 ಸೀಟುಗಳಲ್ಲಿ ಗೆಲುವು ಸಾಧಿಸಿದ್ದವು. ಎಜೆಎಸ್‌ಯುಪಿ ಮತ್ತು ಜೆವಿಎಂ ಹೊರತುಪಡಿಸಿ ಬಹುಮತ ಪಡೆಯಲು ಬಿಜೆಪಿ ವಿಫಲವಾಯಿತು. ಹೇಮಂತ್ ಸೊರೇನ್ ನೇತೃತ್ವದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು.

ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾದ ಸಮೀಕ್ಷೆ ಚುನಾವಣಾ ಫಲಿತಾಂಶಕ್ಕೆ ಹತ್ತಿರವಾಗಿತ್ತು. ಬಿಜೆಪಿಗೆ 22 ಸೀಟು ಎಂದು ಅಂದಾಜಿಸಿತ್ತು. ಜೆಎಂಎಂ ಮೈತ್ರಿಕೂಟ 50 ಸೀಟುಗಳಲ್ಲಿ ಜಯಗಳಿಸಲಿದೆ ಎಂದು ಹೇಳಿತ್ತು. ಮೂರು ಸಮೀಕ್ಷೆಗಳು ಜೆಎಂಎಂ ಅಧಿಕಾರ ಪಡೆಯಲಿದೆ ಎಂದು ಅಂದಾಜಿಸಿದ್ದವು. ಈ ಬಾರಿ ಎರಡು ರಾಜ್ಯಗಳಲ್ಲಿ ಯಾವ ಪಕ್ಷ ಅಧಿಕಾರ ಹಿಡಿಯಲಿದೆ? ಎಂದು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+