• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫೆ.27ಕ್ಕೆ ಮಹಾಘಟಬಂಧನ್ ನಾಯಕರ ಸಭೆ, ಮೋದಿ ಕಟ್ಟಿಹಾಕಲು ತಂತ್ರ

|

ದೆಹಲಿಯಲ್ಲಿ ರಣಕಹಳೆ ಮೊಳಗಿಸಲಿರುವ ಮಮತಾ ಬ್ಯಾನರ್ಜಿನವದೆಹಲಿ, ಫೆಬ್ರವರಿ 22: ಮೋದಿ ವಿರುದ್ಧ ಒಟ್ಟಾಗಿರುವ ಮಹಾಘಟಬಂಧನ್ ನಾಯಕರು ಫೆಬ್ರವರಿ 27ಕ್ಕೆ ಸಭೆ ಸೇರಲಿದ್ದು, ಚುನಾವಣಾ ರಣತಂತ್ರ ರೂಪಿಸಲೆಂದು ಸೇರಲಾಗುತ್ತಿರುವ ಈ ಸಭೆ ಸಾಕಷ್ಟು ಕುತೂಹಲ ಕೆರಳಿಸಿದೆ.

ರಾಜ್ಯಗಳಲ್ಲಿ ಚುನಾವಣಾ ಪೂರ್ವ ಮೈತ್ರಿ, ಪ್ರಚಾರ ತಂತ್ರ, ಚುನಾವಣಾ ಪ್ರಣಾಳಿಕೆ ಹೀಗೆ ಹಲವು ಪ್ರಮುಖ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಸಾಮಾನ್ಯ ಅಂಶಗಳ ಚರ್ಚೆ ಈ ಸಭೆಯ ಮುಖ್ಯ ಉದ್ದೇಶವಾಗಿದೆ.

ದೆಹಲಿಯಲ್ಲಿ ರಣಕಹಳೆ ಮೊಳಗಿಸಲಿರುವ ಮಮತಾ ಬ್ಯಾನರ್ಜಿ

ಕಾಂಗ್ರೆಸ್ ಸೇರಿದಂತೆ ಆರು ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಫೆ.13ರಂದು ಲೋಕಸಭಾ ಸಮರದ ರಣತಂತ್ರ ರಚನೆ ಬಗ್ಗೆ ತೀರ್ಮಾನ ಕೈಗೊಂಡಿದ್ದರು, ಅದರಂದೆ ಈ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಗಳು ಮತ್ತು ಅದರ ಮುಖಂಡರು ಭಾಗವಹಿಸುವ ನಿರೀಕ್ಷೆ ಇದೆ.

ಮಹಾಘಟಬಂಧನ್‌ನಲ್ಲಿ ಇನ್ನೂ ಕೆಲವು ಪಕ್ಷಗಳು ತಮ್ಮ ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಜೊತೆಗಿನ ಮೈತ್ರಿಯ ಬಗ್ಗೆ ಸ್ಪಷ್ಟ ನಿರ್ಧಾರ ತಳೆದಿಲ್ಲ ಈ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವ ಸಾಧ್ಯತೆ ಇದೆ.

9 ಪ್ರಧಾನಿ ಅಭ್ಯರ್ಥಿಗಳ ಮಹಾಘಟಬಂಧನ ದುರಾಸೆಯ ಪ್ರತಿರೂಪ: ಶಾ ಕಿಡಿ!

ಕಾಂಗ್ರೆಸ್‌ನ ರಾಹುಲ್ ಗಾಂಧಿ, ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್, ಟಿಡಿಪಿ ಪರಮೋಚ್ಚ ನಾಯಕ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ನ್ಯಾಷನಲ್ ಕಾನ್ಫೆರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ, ಯಶವಂತ ಸಿನ್ಹಾ, ಜೆಡಿಎಸ್‌ನ ದೇವೇಗೌಡ, ಮಾಯಾವತಿ, ಅಖಿಲೇಶ್ ಯಾದವ್, ಬಿಹಾರದಿಂದ ಯಾದವ್, ಮತ್ತಿತರ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

English summary
Mahagatabandhan leaders organizing meeting on February 27th to discuss about key things about Lok Sabha elections 2019. election manifesto, coalition in states, campaigning and other things will be discussed in the meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X