Maha Kumbh Mela 2025: ಮಹಾಕುಂಭ ಮೇಳದಲ್ಲಿ ಹೊರಗಿನ ವಾಹನಗಳ ಪ್ರವೇಶ ನಿಷೇಧ
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ 12ನೇ ದಿನ. ವಿಶ್ವದಾದ್ಯಂತ ಭಕ್ತರು ಈ ಕುಂಭ ಮೇಳಕ್ಕೆ ಆಗಮಿಸುತ್ತಿದ್ದಾರೆ. ಇಲ್ಲಿಯವರೆಗೆ ಸುಮಾರು 10 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಇನ್ನೂ ವಾರಾಂತ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ಸಾಧ್ಯತೆ ಇದೆ. ಹೀಗಾಗಿ ಮಹಾಕುಂಭಮೇಳದಲ್ಲಿ ಹೊರಗಿನ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.
ಹೌದು... ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಮಹಾಕುಂಭವನ್ನು ವೀಕ್ಷಿಸಲಾಗುತ್ತಿದೆ. ಹೆಚ್ಚಿನ ಜನರು ಮಹಾಕುಂಭದ ಬಗ್ಗೆ ಮಾಹಿತಿ ಪಡೆಯಲು ಗೂಗಲ್‌ನಲ್ಲಿ ಹುಡುಕುತ್ತಿರುವುದು ಕಂಡುಬರುತ್ತಿದೆ. ಆಶ್ಚರ್ಯಕರ ಸಂಗತಿಯೆಂದರೆ ಪ್ರತಿದಿನ ಸ್ನಾನ ಮಾಡುವ ಭಕ್ತರ ಸಂಖ್ಯೆ ಕೂಡ ಹೆಚ್ಚುತ್ತಿದೆ. ನೀವು ಕೂಡ ಪ್ರಯಾಗ್‌ರಾಜ್ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಹೋಗಲು ಯೋಜಿಸುತ್ತಿದ್ದರೆ ಮೊದಲು ಕೆಲವು ಸಂಚಾರ ಮಾರ್ಗಸೂಚಿಗಳನ್ನು ತಿಳಿಯಲೇಬೇಕು. ಯಾಕೆಂದರೆ ಮಹಾಕುಂಭಮೇಳದಲ್ಲಿ ಹೊರಗಿನ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.

ಶುಕ್ರವಾರ ಮಹಾಕುಂಭದಲ್ಲಿ ಹೊರಗಿನ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲು ಆದೇಶ ಹೊರಡಿಸಲಾಗಿದೆ. ಈ ಸಂದರ್ಭದಲ್ಲಿ ನೀವು ಸಂಗಮವನ್ನು ತಲುಪಲು ಯೋಜಿಸಿದರೆ, ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಕುಂಭ ಮೇಳಕ್ಕೆ ಎಲ್ಲಿಯವರೆಗೂ ನಿಮ್ಮ ವಾಹನಗಳಲ್ಲಿ ತೆರಳಬಹುದು? ನಂತರ ಕುಂಭ ಮೇಳಕ್ಕೆ ಹೋಗುವುದು ಹೇಗೆ ಎಲ್ಲವನ್ನೂ ಈಗ ತಿಳಿಯೋಣ.
ಸಂಚಾರ ಪ್ರಭಾರಿ ಅಮಿತ್ ಕುಮಾರ್ ಅವರ ಪ್ರಕಾರ, ಶನಿವಾರ ಮತ್ತು ಭಾನುವಾರದ ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡು ಈ ಆದೇಶ ಹೊರಡಿಸಲಾಗಿದೆ. ಹೀಗಾಗಿ ಮಹಾಕುಂಭದಲ್ಲಿ ಸ್ನಾನ ಮಾಡಲು ಹೋಗುವ ಮೊದಲು, ಕೆಳಗಿನ ಸಂಚಾರ ಸಲಹೆಯನ್ನು ತಿಳಿದುಕೊಳ್ಳಿ.
ಕುಂಭ ಮೇಳಕ್ಕೆ ಯಾವ ಮಾರ್ಗಗಳ ಮೂಲಕ ಸಾಗಬಹುದು?
ಜೌನ್‌ಪುರದಿಂದ ಮಹಾಕುಂಭದಲ್ಲಿ ಸ್ನಾನ ಮಾಡಲು ಬರುವವರು ಸಹಸೋನ್ ಮೂಲಕ ಗರಾಪುರ ತಲುಪಬೇಕು. ಶುಗರ್ ಪಾರ್ಕಿಂಗ್ ಝುನ್ಸಿ ಮತ್ತು ಪುರೆಸುರ್‌ದಾಸ್ ಪಾರ್ಕಿಂಗ್ ಘರ್ ರಸ್ತೆಯಲ್ಲಿ ವಾಹನವನ್ನು ನಿಲ್ಲಿಸಲು ಸೌಲಭ್ಯವನ್ನು ಮಾಡಲಾಗಿದೆ. ಇದರೊಂದಿಗೆ ವಾರಣಾಸಿಯಿಂದ ಪ್ರಯಾಗರಾಜ್‌ಗೆ ಬರುತ್ತಿದ್ದರೆ ಶಿವಪುರ ಉಸ್ತಾಪುರ ಪಾರ್ಕಿಂಗ್, ಪಟೇಲ್ ಬಾಗ್, ಕನ್ಹಾ ಮೋಟಾರ್ಸ್ ಪಾರ್ಕಿಂಗ್‌ನಲ್ಲಿ ರೈಲ್ವೆ ಅಂಡರ್‌ಬ್ರಿಡ್ಜ್‌ನಿಂದ ವಾಹನವನ್ನು ನಿಲ್ಲಿಸಬಹುದು.
ಇನ್ನೂ ಮಹಾಕುಂಭಕ್ಕಾಗಿ ಮಿರ್ಜಾಪುರ ಮಾರ್ಗದಿಂದ ಹೋದರೆ ಸರಸ್ವತಿ ಹೈಟೆಕ್ ಪಾರ್ಕಿಂಗ್‌ಗೆ ಹೋಗಲು ಅನುಮತಿ ಸಿಗುತ್ತದೆ. ರೇವಾ ಮಾರ್ಗದಿಂದ ಬರುವ ಭಕ್ತರ ವಾಹನಗಳನ್ನು ನೈನಿ ಕೃಷಿ ಸಂಸ್ಥೆ ಮತ್ತು ನವ ಪ್ರಯಾಗ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಬೇಕಾಗುತ್ತದೆ. ಇದರಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಕಾನ್ಪುರದಿಂದ ಪ್ರಯಾಗ್‌ರಾಜ್‌ಗೆ ಬರುವ ವಾಹನಗಳು ಬೇಲಿ ಕಚ್ಚರ್ ಮತ್ತು ಬೇಲಾ ಕಚ್ಚರ್‌ನಲ್ಲಿ ವಾಹನಗಳಲ್ಲಿ ನಿಲುಗಡೆ ಮಾಡಬಹುದು.
ಪ್ರತಾಪ್‌ಗಢ ಮತ್ತು ಲಕ್ನೋದ ಭಕ್ತರು ತಮ್ಮ ವಾಹನಗಳನ್ನು ಬೇಲಿ ಕಚ್ಚರ್ ಮತ್ತು ಬೇಲಾ ಕಚ್ಚರ್‌ನಲ್ಲಿ ನಿಲ್ಲಿಸಬಹುದು. ಇಲ್ಲಿಂದ ಇ-ರಿಕ್ಷಾಗಳು ಮತ್ತು ಇತರ ಕಾರುಗಳಲ್ಲಿ ಸಂಗಮ್ ಘಾಟ್‌ಗೆ ಆರಾಮವಾಗಿ ಪ್ರಯಾಣಿಸಬಹುದು.
ಡಿಐಜಿ ಕುಂಭಮೇಳ ಪರಿಶೀಲನೆ
ಡಿಐಜಿ ವೈಭವ್ ಕೃಷ್ಣ ಗುರುವಾರ ಮೇಳ ನಡೆಯುವ ಪ್ರದೇಶವನ್ನು ಪರಿಶೀಲಿಸಿದರು. ಮೌನಿ ಅಮವಾಸ್ಯೆಯ ಕುರಿತು ಡಿಐಜಿ ವೈನವ್ ಕೃಷ್ಣ ಅವರು ಪೊಲೀಸ್ ಠಾಣೆಯ ಉಸ್ತುವಾರಿ ಮತ್ತು ಶಾಖಾ ಉಸ್ತುವಾರಿಗಳೊಂದಿಗೆ ಮಾತನಾಡಿದರು. ಈ ಸಮಯದಲ್ಲಿ ಘಾಟ್‌ಗಳನ್ನು ಸಹ ಪರಿಶೀಲಿಸಲಾಯಿತು. ಮೌನಿ ಅಮವಾಸ್ಯೆ ನಿಮಿತ್ತ ಕುಂಭ ಮೇಳಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಲಿದೆ. ಹೀಗಾಗಿ ಭಕ್ತರ ನಿರ್ವಹಣೆಗಾಗಿ ಹೆಚ್ಚು ವ್ಯವಸ್ಥೆಗಳನ್ನು ಮಾಡಲಾಗಿದೆ.












Click it and Unblock the Notifications