ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ನ.25ರಂದು ಮಹಾ ಸರ್ಕಾರ ಭವಿಷ್ಯ ಬಗ್ಗೆ ಸುಪ್ರೀಂ ತೀರ್ಪು

|
Google Oneindia Kannada News

ನವದೆಹಲಿ, ನವೆಂಬರ್ 24: ಮಹಾರಾಷ್ಟ್ರ ರಾಜಕೀಯದಲ್ಲಿ ಶನಿವಾರದಂದು ಉಂಟಾದ ಕ್ಷಿಪ್ರ ಬೆಳವಣಿಗೆಯಲ್ಲಿ ಅಧಿಕಾರ ದುರ್ಬಳಕೆಯಾಗಿದೆ. ರಾಷ್ಟ್ರಪತಿ ಆಳ್ವಿಕೆ ಹಿಂಪಡೆದಿದ್ದು ಹೇಗೆ? ಸರ್ಕಾರ ರಚನೆಗೆ ರಾಜ್ಯಪಾಲರು ಅನುಮತಿ ನೀಡಿದ್ದು ಹೇಗೆ? ಎಂಬುದರ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಮುಗಿದಿದ್ದು ನ.25ರಂದು ವಿಚಾರಣೆ ನಡೆದು ಅಂತಿಮ ತೀರ್ಪು ಬರಲಿದೆ. ಇದರ ಅಪ್ಡೇಟ್ಸ್ ಇಲ್ಲಿದೆ

ಬಿಜೆಪಿಯ ದೇವೇಂದ್ರ ಫಡ್ನವೀಸ್ ಹಾಗೂ ಎನ್ಸಿಪಿಯ ಅಜಿತ್ ಪವಾರ್ ಕ್ರಮವಾಗಿ ಸಿಎಂ, ಡಿಸಿಎಂ ಆಗಿದ್ದಾರೆ. ತರಾತುರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹಿಂಪಡೆದಿದ್ದು ಹೇಗೆ? ಸರ್ಕಾರ ರಚನೆಗೆ ರಾಜ್ಯಪಾಲರು ಅನುಮತಿ ನೀಡಿದ್ದು ಹೇಗೆ?

ಮಹಾರಾಷ್ಟ್ರದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಹೇಗೆ?ಮಹಾರಾಷ್ಟ್ರದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಹೇಗೆ?

ದೇವೇಂದ್ರ ಫಡ್ನವೀಸ್ ಗೆ ಬಹುಮತ ಸಾಬೀತು ಪಡಿಸಲು ಎಷ್ಟು ಕಾಲಾವಧಿ ನೀಡಬೇಕು ಎಂಬುದನ್ನು ತಕ್ಷಣವೇ ನಿರ್ಣಯಿಸುವಂತೆ ಕಾಂಗ್ರೆಸ್- ಎನ್ಸಿಪಿ, ಶಿವಸೇನಾ ಪರ ವಕೀಲ ಕಪಿಲ್ ಸಿಬಾಲ್ ವಾದಿಸಿದ್ದಾರೆ.

Maha crisis: SC verdict updates on Sena-NCP-Congress petition

ನ್ಯಾ. ಎನ್ ವಿ ರಮಣ, ಜಸ್ಟೀಸ್ ಅಶೋಕ್ ಭೂಷಣ್ ಹಾಗೂ ಜಸ್ಟೀಸ್ ಸಂಜೀವ್ ಖನ್ನಾ ಅವರು ಭಾನುವಾರದಂದು ಶಿವಸೇನಾ-ಕಾಂಗ್ರೆಸ್- ಎನ್ಸಿಪಿ ಸದಸ್ಯರು ಸಲ್ಲಿಸಿರುವ ವಿಚಾರಣೆ ನಡೆಸುತ್ತಿದ್ದಾರೆ. ದೇವೇಂದ್ರ ಫಡ್ನವೀಸ್ ಅವರಿಗೆ 24 ಗಂಟೆಯೊಳಗೆ ಬಹುಮತ ಸಾಬೀತುಪಡಿಸಲು ಸೂಚಿಸುತ್ತಾರೆಯೇ? ಉತ್ತರ ಸಿಗಲಿದೆ.

Newest FirstOldest First
12:32 PM, 24 Nov

ದೇವೇಂದ್ರ ಫಡ್ನವೀಸ್ ಬಹುಮತ ಸಾಬೀತು ಬಗ್ಗೆ ನಾಳೆ ತೀರ್ಮಾನ, ನವೆಂಬರ್ 25ರಂದು 10:30ಕ್ಕೆ ವಿಚಾರಣೆ ನಡೆಸಿ ತೀರ್ಪು ಪ್ರಕಟ
12:30 PM, 24 Nov

ಮಹಾರಾಷ್ಟ್ರದಲ್ಲಿ ತುರ್ತಾಗಿ ಸರ್ಕಾರ ರಚನೆಗೆ ಅವಕಾಶ ಮಾಡಲು ಕೊಟ್ಟ ರಾಜ್ಯಪಾಲರ ಕ್ರಮ ಅಸಂವಿಧಾನಿಕವೇ? ಉತ್ತರಿಸಲು ಬಿಜೆಪಿಗೆ ಸೂಚನೆ
12:29 PM, 24 Nov

ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ತಾತ್ಕಾಲಿಕ ರಿಲೀಫ್, ತಕ್ಷಣವೇ ಬಹುಮತಪಡಿಸುವ ಅಗತ್ಯವಿಲ್ಲ: ಸುಪ್ರೀಂಕೋರ್ಟ್, ಬಿಜೆಪಿಗೆ ನೋಟಿಸ್, ನಾಳೆ ಉತ್ತರಿಸಲು ಸೂಚಿಸಿದ ಸುಪ್ರೀಂ, ಶಿವಸೇನಾ- ಕಾಂಗ್ರೆಸ್ -ಎನ್ಸಿಪಿ ರಿಟ್ ಅರ್ಜಿ ವಿಚಾರಣೆ ಮುಂದೂಡಿಕೆ
12:27 PM, 24 Nov

ರಾಷ್ಟ್ರಪತಿ ಆಳ್ವಿಕೆ ಹಿಂಪಡೆದಿದ್ದರ ಬಗ್ಗೆ ಪ್ರಶ್ನೆ

ರಾಷ್ಟ್ರಪತಿ ಆಳ್ವಿಕೆ ಹಿಂಪಡೆದಿದ್ದದ್ದು ಇಲ್ಲಿ ಪ್ರಶ್ನೆಯಲ್ಲ ಎಂದ ಜಸ್ಟೀಸ್ ರಮಣ. ಬಹುಮತ ಹೊಂದಿರುವ ಬಗ್ಗೆ ರಾಜ್ಯಪಾಲರಿಗೆ ಬಿಜೆಪಿ ಪತ್ರ ನೀಡಿದೆಯೇ? ಎಂದು ಪ್ರಶ್ನಿಸಿದ ಜಸ್ಟೀಸ್ ಭೂಷಣ್.
12:25 PM, 24 Nov

ಭಾನುವಾರದಂದು ತುರ್ತು ವಿಚಾರಣೆ ಅನಗತ್ಯ: ರೋಹ್ಟಗಿ

ನಾನು ಬಿಜೆಪಿ ಶಾಸಕರು ಹಾಗೂ ಕೆಲವು ಪಕ್ಷೇತರರ ಪರವಾಗಿ ವಾದ ಮಂಡಿಸಲು ಇಲ್ಲಿ ಬಂದಿದ್ದೇನೆ. ಸರ್ಕಾರ ರಚನೆಯಾದ ಬಳಿಕ ತುರ್ತಾಗಿ ವಿಚಾರಣೆ ನಡೆಸುವ ಅಗತ್ಯವಿರಲಿಲ್ಲ. ನಾನು ರಾಜಸ್ಥಾನದಿಂದ ತುರ್ತಾಗಿ ನವದೆಹೆಲಿಗೆ ಬಂದಿದ್ದೇನೆ. ರಾಜಕೀಯ ಪಕ್ಷಗಳಿಗೆ ಹೈಕೋರ್ಟಿನಲ್ಲಿ ಅರ್ಜಿ ಹಾಕುವ ಬದಲು ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ನಡೆಯುವಂತೆ ಮಾಡಿದ ಎನ್ಸಿಪಿ, ಕಾಂಗ್ರೆಸ್, ಶಿವಸೇನಾ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ.
12:22 PM, 24 Nov

ಯಾರ ಪರ ಯಾರು ವಾದ? ಮಾಡುತ್ತಿದ್ದಾರೆ ಎಂದು ಜಸ್ಟೀಸ್ ಭೂಷಣ್ ಪ್ರಶ್ನೆ ರಾಜಕೀಯ ಪಕ್ಷಗಳು ಸಂವಿಧಾನದ ಪರಿಚ್ಛೇದ 32ರ ಅನ್ವಯ ರಿಟ್ ಪಿಟೀಷನ್ ಸಲ್ಲಿಸಲು ಯಾವುದೇ ಮೂಲಭೂತ ಹಕ್ಕು ಹೊಂದಿಲ್ಲ. ನನಗೆ ನಿನ್ನೆ ಸಂಜೆ ಪಿಟೀಷನ್ ಪ್ರತಿ ಕೈ ಸೇರಿತು. ನಾನು ರಾಜ್ಯಪಾಲರ ನಿರ್ದೇಶನದಂತೆ ಕೋರ್ಟಿಗೆ ಬಂದಿಲ್ಲ. ನನ್ನ ಹೆಸರಿನಲ್ಲಿ ಪ್ರತಿ ಇತ್ತು. ಹೀಗಾಗಿ ಕೋರ್ಟಿನಲ್ಲಿದ್ದೇನೆ ಎಂದು ಸ್ಪಷ್ಟಪಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ.
12:17 PM, 24 Nov

ದೇವೇಂದ್ರ ಫಡ್ನವೀಸ್ ಅವರಿಗೆ ಸಂಖ್ಯಾಬಲವಿದ್ದರೆ ತುರ್ತಾಗಿ ಬಹುಮತ ಸಾಬೀತುಪಡಿಸಲಿ ನವೆಂಬರ್ 30ರ ತನಕ ಕಾಯುವುದೇಕೆ? 1998ರಲ್ಲಿ ಉತ್ತರಪ್ರದೇಶ ಹಾಗೂ 2018ರಲ್ಲಿ ಕರ್ನಾಟಕದಲ್ಲಿ ವಿಶ್ವಾಸಮತ ಯಾಚನೆ ಕುರಿತಂತೆ ಸುಪ್ರೀಂ ನೀಡಿದ ನಿರ್ದೇಶನವನ್ನು ಉಲ್ಲೇಖಿಸಿದ ಕಾಂಗ್ರೆಸ್-ಶಿವಸೇನಾ- ಎನ್ಸಿಪಿ ವಕೀಲ ಅಭಿಷೇಕ್ ಮನು ಸಿಂಘ್ವಿ
Advertisement
12:07 PM, 24 Nov

ಅಜಿತ್ ಪವಾರ್ ಅವರು ಶಾಸಕಾಂಗ ಪಕ್ಷದ ನಾಯಕರಲ್ಲ, ಡಿಸಿಎಂ ಆಗಿ ಪ್ರಮಾಣ ವಚನ ಹೇಗೆ ಸ್ವೀಕರಿಸಿದರು. ಎನ್ಸಿಪಿಯಿಂದ ಅಧಿಕೃತವಾಗಿ ಬಿಜೆಪಿಗೆ ಬೆಂಬಲ ನೀಡುವ ಪತ್ರ ನೀಡಿಲ್ಲ ಎಂದು ಮನು ಸಿಂಘ್ವಿ ವಾದ
12:05 PM, 24 Nov

24 ಗಂಟೆಯಲ್ಲೇ ದೇವೇಂದ್ರ ಫಡ್ನವೀಸ್ ಗೆ ಬಹುಮತ ಸಾಬೀತುಪಡಿಸಲು ಸೂಚಿಸುವಂತೆ ಶಿವಸೇನಾ- ಎನ್ಸಿಪಿ-ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಾಲ್ ಹಾಗೂ ಅಭಿಶೇಕ್ ಸಿಂಘ್ವಿ ಮನವಿ
11:58 AM, 24 Nov

288 ಸದಸ್ಯ ಬಲದ ವಿಧಾನಸಭೆಯಲ್ಲಿ 145 ಶಾಸಕರ ಬಲ ಬೇಕಿದ್ದು, ಮೊದಲಿಗೆ ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ನೀಡಲಾಗಿತ್ತು. ಬಿಜೆಪಿ ಸಂಖ್ಯಾಬಲ ಇರುವ ಪತ್ರವನ್ನು ಅಂದು ನೀಡಿಲ್ಲ, ಶನಿವಾರದಂದು ನೀಡಿಲ್ಲ, ಆದರೂ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಿದ್ದು ಹೇಗೆ? ಎಂದು ಕಪಿಲ್ ಸಿಬಾಲ್ ವಾದಿಸಿದ್ದಾರೆ.
11:56 AM, 24 Nov

ಕುದುರೆ ವ್ಯಾಪಾರ ತಡೆಯಲು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೊಳಿಸಬೇಕು ಹಾಗೂ ಅಕ್ರಮಗಳನ್ನು ತಡೆಯಲು 24 ಗಂಟೆಯೊಳಗೆ ವಿಶ್ವಾಸ ಮತಕ್ಕೆ ತಿಳಿಸಬೇಕು ಎಂದು ಮನವಿ ಮಾಡಿವೆ.
11:56 AM, 24 Nov

ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಅವರು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರಿಗೆ ಸರ್ಕಾರ ರಚಿಸಲು ಆಹ್ವಾನ ನೀಡಬೇಕು. ಅವರಿಗೆ 144ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ, ಇಂದೇ ಬಹುಮತ ಸಾಬೀತು ಪಡಿಸಲು ಸಾಧ್ಯ. ದೇವೇಂದ್ರ ಫಡ್ನವೀಸ್ ಗೆ ಬಹುಮತವಿದ್ದರೆ ಇಂದೇ ಸಾಬೀತುಪಡಿಸಲಿ ಎಂದು ಕಾಂಗ್ರೆಸ್ ವಕೀಲ ಕಪಿಲ್ ಸಿಬಾಲ್ ವಾದ.
Advertisement
11:56 AM, 24 Nov

ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ರಾಜ್ಯಪಾಲರು ನೇಮಿಸಿರುವುದನ್ನು ಪ್ರಶ್ನಿಸಿ ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿವೆ. ರಾಜ್ಯಪಾಲರು ಪಕ್ಷಪಾತಿಯಾಗಿ ವರ್ತಿಸಿದ್ದಾರೆ ಹಾಗೂ ಬಿಜೆಪಿ ಅಧಿಕಾರ ಕಬಳಿಸಲು ದಾಳದಂತೆ ನಡೆದುಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

English summary
Maha crisis: Supreme Court verdict updates on Sena-NCP-Congress petition.Amidst Maharashtra drama, SC hearing it is over to a floor test and anti-defection law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X