ಕಾರಿನಲ್ಲಿ ಕಾಲು ನೆಕ್ಕುವಂತೆ ಮಧ್ಯಪ್ರದೇಶದ ವ್ಯಕ್ತಿಗೆ ಥಳಿತ: ವಿಡಿಯೋ ವೈರಲ್‌

ಭೋಪಾಲ್‌, ಜುಲೈ 8: ಮಧ್ಯಪ್ರದೇಶದಲ್ಲಿ ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆಯ ಘಟನೆಯ ಬಳಿಕ ಗ್ವಾಲಿಯರ್‌ನಲ್ಲಿ ಚಲಿಸುವ ವಾಹನದಲ್ಲಿ ಬಲವಂತವಾಗಿ ವ್ಯಕ್ತಿಯೊಬ್ಬ ಇನ್ನೊಬ್ಬ ವ್ಯಕ್ತಿಯ ಕಾಲುಗಳನ್ನು ನೆಕ್ಕುತ್ತಿರುವುದನ್ನು ತೋರಿಸುವ ವೀಡಿಯೊ ಇದೀಗ ವೈರಲ್‌ ಆಗಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲ್ಲೆಗೊಳಗಾದ ವ್ಯಕ್ತಿ ಮತ್ತು ಆರೋಪಿಗಳು ಗ್ವಾಲಿಯರ್ ಜಿಲ್ಲೆಯ ದಾಬ್ರಾ ಪಟ್ಟಣದ ನಿವಾಸಿಗಳು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Madhya Pradesh man beaten to lick feet in car: Video goes viral

ವೈರಲ್ ಆದ ವೀಡಿಯೋದಲ್ಲಿ ವ್ಯಕ್ತಿಗೆ ಇನ್ನೊಬ್ಬ ವ್ಯಕ್ತಿಯು ಹಲವಾರು ಬಾರಿ ಕಪಾಳಮೋಕ್ಷ ಮಾಡುವುದನ್ನು ತೋರಿಸಿದೆ. ಆತ ಚಲಿಸುವ ವಾಹನದಲ್ಲಿ "ಗೋಲು ಗುರ್ಜರ್ ಬಾಪ್ ಹೈ" (ಗೋಲು ಗುರ್ಜರ್ ತಂದೆ) ಎಂದು ಹೇಳುವಂತೆ ಒತ್ತಾಯಿಸುತ್ತಿರುವುದು ಕಂಡು ಬಂದಿದೆ.

ಹಲ್ಲೆಗೊಳಗಾದ ವ್ಯಕ್ತಿನನ್ನು ಬಲವಂತವಾಗಿ ಕಾರಿನಲ್ಲಿದ್ದ ಮತ್ತೊಬ್ಬ ವ್ಯಕ್ತಿಯು ಅವನ ಪಾದಗಳನ್ನು ನೆಕ್ಕುವುದನ್ನು ಕಂಡು ಬಂದಿದೆ. ಆರೋಪಿಯು ಸದರಿ ವ್ಯಕ್ತಿಯ ಮುಖದ ಮೇಲೆ ಪದೇ ಪದೇ ಥಳಿಸುವುದು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನು ಸಹ ಕಂಡು ಬಂದಿದೆ. ಮತ್ತೊಂದು ವೀಡಿಯೊ ಕ್ಲಿಪ್‌ನಲ್ಲಿ ಆರೋಪಿಯು ಬಾದಿತನ ಮುಖದ ಮೇಲೆ ಪಾದರಕ್ಷೆಯಿಂದ ಹಲವಾರು ಬಾರಿ ಹೊಡೆಯುವುದನ್ನು ಕಾಣಬಹುದು.

Madhya Pradesh man beaten to lick feet in car: Video goes viral

ಘಟನೆ ಕುರಿತು ಮಾತನಾಡಿದ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ದಬ್ರಾ ಉಪವಿಭಾಗೀಯ ಪೊಲೀಸ್ ಅಧಿಕಾರಿ (SDOP) ವಿವೇಕ್ ಕುಮಾರ್ ಶರ್ಮಾ ಅವರು, "ಶುಕ್ರವಾರ ಸಂಜೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ವೈರಲ್ ಆಗಿದ್ದು ಅದು ವ್ಯಕ್ತಿಯೊಬ್ಬನನ್ನು ವಾಹನದಲ್ಲಿ ಥಳಿಸುತ್ತಿರುವುದು ಕಂಡು ಬಂದಿದೆ. ವೀಡಿಯೊ ಕ್ಲಿಪ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಹಲ್ಲೆಗೊಳಗಾದವನ ಕುಟುಂಬದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಅಪಹರಣ ಮತ್ತು ಥಳಿತಕ್ಕಾಗಿ ಭಾರತೀಯ ದಂಡ ಸಂಹಿತೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಶರ್ಮಾ ಹೇಳಿದ್ದಾರೆ.

ಈ ವಾರದ ಆರಂಭದಲ್ಲಿ, ರಾಜ್ಯದ ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ಯುವಕನ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡುವುದನ್ನು ವೀಡಿಯೊ ವೈರಲ್‌ ಆಗಿದ್ದು, ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆಯ ವಿಡಿಯೋ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಆರೋಪಿ ಪ್ರವೇಶ್ ಶುಕ್ಲಾನನ್ನು ಬಂಧಿಸಲಾಗಿದೆ.

ಜೂನ್ 30 ರಂದು ಶಿವಪುರಿ ಜಿಲ್ಲೆಯ ವರ್ಖಾಡಿ ಗ್ರಾಮದಲ್ಲಿ ಕೆಲವು ಹುಡುಗಿಯರಿಗೆ ಕಿರುಕುಳ ನೀಡಿ ಚಿತ್ರೀಕರಿಸಿದ್ದಾರೆ ಎಂಬ ಶಂಕೆಯ ಮೇಲೆ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಇಬ್ಬರು ದಲಿತ ವ್ಯಕ್ತಿಗಳನ್ನು ಮನಬಂದಂತೆ ಥಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+