MP Election 2023: ಪ್ರಿಯಾಂಕಾ ಗಾಂಧಿ ವಾದ್ರಾಗೆ ಖಾಲಿ ಹೂಗುಚ್ಛ ನೀಡಿ ಸ್ವಾಗತ: ವಿಡಿಯೋ ವೈರಲ್
ಇಂದೋರ್ ನವೆಂಬರ್ 7: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಖಾಲಿ ಹೂಗುಚ್ಛ ನೀಡಿ ಸ್ವಾಗತಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂದೋರ್‌ನ ಚುನಾವಣಾ ಸಭೆಯ ವೇದಿಕೆಯಲ್ಲಿ ಈ ಘಟನೆ ನಡೆದಿದೆ.
ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸ್ವಾಗತಿಸುವಾಗ ಸ್ಥಳೀಯ ಪಕ್ಷದ ನಾಯಕರೊಬ್ಬರು ಅವರಿಗೆ ಖಾಲಿ ಪುಷ್ಪಗುಚ್ಛವನ್ನು ನೀಡಿದರು. ಇದನ್ನು ನೋಡಿದ ಪ್ರಿಯಾಂಕಾ ಅವರಿಗೆ ಮುಗುಳ್ನಗೆಯನ್ನು ತಡೆಯಲು ಸಾಧ್ಯವಾಗಲಿಲ್ಲ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಇಂದೋರ್-5 ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ್ದ ಪ್ರಿಯಾಂಕಾ ಅವರನ್ನು ವೇದಿಕೆಯಲ್ಲಿ ಸ್ವಾಗತಿಸುತ್ತಿದ್ದಾಗ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ಖಾಲಿ ಹೂಗುಚ್ಛವನ್ನು ನೀಡಿದರು. ಈ ಹೂಗುಚ್ಛದಲ್ಲಿ ಕೇವಲ ಎಲೆಗಳು ಮಾತ್ರ ಇದ್ದವು. ಇದರಲ್ಲಿ ಒಂದೇ ಒಂದು ಹೂವು ಕೂಡ ಇರಲಿಲ್ಲ. ಬೊಕ್ಕೆ ಸಂಪೂರ್ಣ ಖಾಲಿಯಾಗಿತ್ತು.
गुलदस्ता घोटाला 😜
— राकेश त्रिपाठी Rakesh Tripathi (@rakeshbjpup) November 6, 2023
गुलदस्ते से गुल गायब हो गया.. दस्ता पकड़ा दिया 😂😂
मध्यप्रदेश के इंदौर में प्रियंका वाड्रा की रैली में एक कांग्रेसी गुलदस्ता देने पहुंचा लेकिन कांग्रेसी खेल हो गया।#MPElections2023 pic.twitter.com/y7Qmyldp94
ಪ್ರಿಯಾಂಕಾ ಖಾಲಿ ಬೊಕ್ಕೆಯನ್ನು ನೋಡಿದಾಗ ಅದರಲ್ಲಿ ಯಾವುದೇ ಹೂವುಗಳಿಲ್ಲ ಎಂದು ಕಾಂಗ್ರೆಸ್ ನಾಯಕನಿಗೆ ನಗುತ್ತಾ ಹೇಳಿದರು. ಇದರಿಂದ ಕಾಂಗ್ರೆಸ್ ನಾಯಕರು ಮುಜುಗರಕ್ಕೊಳಗಾಗಿ ಅಲ್ಲಿಂದ ತೆರಳಿದರು.
ಬಳಿಕ ಚುನಾವಣಾ ರ್‍ಯಾಲಿಯಲ್ಲಿ ತನ್ನ ಭಾಷಣದಲ್ಲಿ ಪ್ರಿಯಾಂಕಾ ಗಾಂಧಿ ಈ ಆಸಕ್ತಿದಾಯಕ ಘಟನೆಯನ್ನು ಸ್ವತಃ ಪ್ರಸ್ತಾಪಿಸಿದ್ದಲ್ಲದೆ, ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಖಾಲಿ ಪುಷ್ಪಗುಚ್ಛಕ್ಕೆ ಹೋಲಿಕೆ ಮಾಡಿದರು.
ಬಿಜೆಪಿಯನ್ನು ಲೇವಡಿ ಮಾಡಿದ ಪ್ರಿಯಾಂಕಾ
ನಾನು ವೇದಿಕೆ ಮೇಲೆ ಬರುವಾಗಲೇ ಯಾರೋ ನನಗೆ ಹೂಗುಚ್ಛ ಕೊಟ್ಟಿದ್ದನ್ನು ನೀವು ನೋಡಿರಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಗುತ್ತಾ ಹೇಳಿದರು. ಆ ಬೊಕ್ಕೆಯಲ್ಲಿ ಹೂವುಗಳಿರಲಿಲ್ಲ ಮತ್ತು ಅದು ಖಾಲಿಯಾಗಿತ್ತು. ಅವರು (ಬಿಜೆಪಿ ನಾಯಕರು) ಇದೇ ರೀತಿಯ ಧರ್ಮ, ಜಾತಿ, ಘೋಷಣೆಗಳನ್ನು ಮಾಡಿ ಚುನಾವಣೆ ಬಂದಾಗ ನಿಮಗೆ (ಮತದಾರರಿಗೆ) ಮತ್ತೆ ಮತ್ತೆ ನೀಡುತ್ತಿದ್ದಾರೆ ಎಂದ ಪ್ರಿಯಾಂಕಾ ಗಾಂಧಿ, ಚುನಾವಣೆಯ ನಂತರ ಈ ಪುಷ್ಪಗುಚ್ಛವನ್ನು ನೋಡಿದಾಗ ಅಲ್ಲಿ ಏನೂ ಇರುವುದಿಲ್ಲ ಎಂಬುದು ನಿಮಗೆ ಅರ್ಥವಾಗುತ್ತದೆ. ಅದರಲ್ಲಿ ಹೂವುಗಳು ಇರುವುದಿಲ್ಲ. ಅದು ಖಾಲಿಯಾಗಿರುತ್ತದೆ.
ಜಾತಿ ಗಣತಿ ವಿಚಾರದಲ್ಲಿ ಬಿಜೆಪಿ ಮೌನ
ಜಾತಿ ಗಣತಿ ವಿಚಾರದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿಜೆಪಿಯನ್ನು 'ಖಾಲಿ ಬೊಕ್ಕೆ' ಎಂಬ ಪದವನ್ನು ಬಳಸಿದರು. "ಪ್ರಧಾನಿ ನರೇಂದ್ರ ಮೋದಿಯವರು ವಿಶೇಷವಾಗಿ ಇತರ ಹಿಂದುಳಿದ ವರ್ಗಗಳನ್ನು (ಒಬಿಸಿ) ಮುನ್ನಡೆಸಲು ಬಯಸುತ್ತಾರೆ ಎಂದು ನೀವು ಇದನ್ನು ಕೇಳಿರಬೇಕು ಎಂದು ಅವರು ಹೇಳಿದರು. ಈ ವಿಷಯ ಖಾಲಿ ಹೂಗುಚ್ಛದಂತಿದೆ, ಏಕೆಂದರೆ ದೇಶದಲ್ಲಿ ಜಾತಿ ಗಣತಿ ಆಗಬೇಕು ಎಂದು ಹೇಳಿದಾಗ ಈ ಜನರು (ಬಿಜೆಪಿ) ಮೌನವಾಗಿರುತ್ತಾರೆ. ಆದರೆ ಆ ವರ್ಗದವರನ್ನು ಮುನ್ನಡೆಸಲು ಬಯಸುತ್ತಾರೆ'' ಎಂದು ಕಿಡಿ ಕಾರಿದರು.












Click it and Unblock the Notifications