ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ: ಬೆಂಕಿ ಚೆಂಡು ಎಸೆತ ಆಚರಣೆ ವೇಳೆ 30 ಮಂದಿಗೆ ಗಾಯ

|
Google Oneindia Kannada News

ಭೋಪಾಲ್, ಅ. 27: ಮಧ್ಯಪ್ರದೇಶದ ಇಂದೋರ್‌ನ ದೇಪಾಲ್‌ಪುರದ ಗೌತಮಪುರ ಗ್ರಾಮದಲ್ಲಿ ಬುಧವಾರ ಸಾಂಪ್ರದಾಯಿಕ ಬೆಂಕಿ ಚೆಂಡು (ಹಿಂಗೋಟ್ ವಾರ್) ಉತ್ಸವವನ್ನು ಆಚರಿಸುವಾಗ ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜೊತೆಗೆ ಇತರ 23 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಕಿ ಚೆಂಡು ಆಚರಣೆಯು ಶತಮಾನಗಳ ಹಿಂದಿನ ಸಂಪ್ರದಾಯವಾಗಿದ್ದು, ಇದನ್ನು ಪ್ರತಿ ವರ್ಷ ದೀಪಾವಳಿಯ ಎರಡನೇ ದಿನದಂದು ಆಚರಿಸಲಾಗುತ್ತದೆ. ಈ ಬಾರಿ ದೀಪಗಳ ಹಬ್ಬದ ಮೂರನೇ ದಿನದಂದು ಹಳೆಯ ಸಂಪ್ರದಾಯವನ್ನು ಅನುಸರಿಸಲಾಗಿದೆ.

ಭಕ್ತಿ ಭಾವದಿಂದ ದೀಪಾವಳಿ ಆಚರಿಸಿದ ಮುಸ್ಲಿಂ ಕುಟುಂಬಭಕ್ತಿ ಭಾವದಿಂದ ದೀಪಾವಳಿ ಆಚರಿಸಿದ ಮುಸ್ಲಿಂ ಕುಟುಂಬ

ಇಂದೋರ್ ಜಿಲ್ಲಾ ಕೇಂದ್ರದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಗೌತಮಪುರ ಗ್ರಾಮದಲ್ಲಿ ಈ ಆಚರಣೆ ನಡೆಯುತ್ತದೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಿಂದ ಈ ಸಂಪ್ರದಾಯವನ್ನು ಆಚರಿಸಿರಲಿಲ್ಲ.

Madhya Pradesh: 30 Injured In Traditional Hingot War

"ಹಿಂಗೋಟ್ ಯುದ್ಧದ ಉತ್ಸವವನ್ನು ಆಯೋಜಿಸಲು ಜಿಲ್ಲಾಡಳಿತದಿಂದ ಪೊಲೀಸ್ ಪಡೆ, ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ. ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿದೆ. ಉತ್ಸವವನ್ನು ನೋಡಲು ಸುಮಾರು ಸಾವಿರಾರು ಜನರು ಅಲ್ಲಿಗೆ ಭೇಟಿ ನೀಡುತ್ತಾರೆ, ಇದಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ವೀಕ್ಷಕರ ಸುರಕ್ಷತೆಗಾಗಿ ಎಲ್ಲಾ ಕಡೆಯಿಂದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ" ಎಂದು ದೇಪಾಲ್‌ಪುರ ಎಸ್‌ಡಿಎಂ ರವಿ ಕುಮಾರ್ ಹೇಳಿದ್ದರು.

ಹಿಂಗೋಟ್ ಒಂದು ಹಣ್ಣಾಗಿದ್ದು, ಅದನ್ನು ಕಿತ್ತು ಒಣಗಿಸಿ, ನಂತರ ಅದರಲ್ಲಿ ಗನ್‌ಪೌಡರ್ ತುಂಬಿಸಿ ಮರಕ್ಕೆ ಕಟ್ಟಲಾಗುತ್ತದೆ. ನಂತರ ಉತ್ಸವದ ಸಂಪ್ರದಾಯದ ಅಂಗವಾಗಿ ಅದನ್ನು ಬಳಸಲಾಗುತ್ತದೆ.

Madhya Pradesh: 30 Injured In Traditional Hingot War

ಬುಧವಾರ ಸಂಜೆ ತುರ್ರಾ ಮತ್ತು ಕಲ್ಗಿ ಎಂಬ ಎರಡು ಗುಂಪುಗಳ 150 ಜನರು ಬೆಂಕಿ ಚೆಂಡು ಎಸೆತ ಉತ್ಸವದಲ್ಲಿ ಭಾಗವಹಿಸಿದ್ದರು. ಅವರು ಪರಸ್ಪರ ಹಿಂಗೋಟ್ ಅನ್ನು ಎಸೆದಾಡಿದ್ದಾರೆ. ಇದರಲ್ಲಿ ಏಳು ಜನರಿಗೆ ಗಂಭೀರ ಗಾಯಗಳಾಗಿವೆ, 23 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

English summary
30 people wounded in celebrating the traditional Hingot war fest in Gautampura village in Madhya Pradesh. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X