• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂಡಮಾನ್: ಆ ಅಪಾಯಕಾರಿ ದ್ವೀಪಕ್ಕೆ ಹೋಗಿಯೂ ಬದುಕಿ ಬಂದಿದ್ದ ಏಕೈಕ ಮಹಿಳೆ

|

ನವದೆಹಲಿ, ಡಿಸೆಂಬರ್ 4: ಹೊರ ಜಗತ್ತಿನೊಂದಿಗೆ ನಂಟು ಹೊಂದದೆ ತಮ್ಮದೇ ಜಗತ್ತಿನಲ್ಲಿ ಬದುಕುವುದನ್ನೇ ಬಯಸುತ್ತಿರುವ ಅಂಡಮಾನ್‌ನ ಪುಟ್ಟ ಬುಡಕಟ್ಟು ಸಮುದಾಯ ಸೆಂಟಿನಲಿಸ್ ಕಳೆದ ಕೆಲವು ವಾರಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿದೆ.

ಬುಡಕಟ್ಟು ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಹೋಗಿ ಸೆಂಟಿನಲಿಸ್ ಬುಡಕಟ್ಟು ಜನರ ಬಾಣಕ್ಕೆ ಬಲಿಯಾದ ಜಾನ್ ಅಲೆನ್ ಚೌ ಘಟನೆ ಸೆಂಟಿನಲ್ ದ್ವೀಪದ ಕುರಿತ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

ನಿಷೇಧಿತ ದ್ವೀಪಕ್ಕೆ ಚೌನನ್ನು ಹೋಗಲು ಪ್ರೇರೇಪಿಸಿದ್ದು ಇಬ್ಬರು ಅಮೆರಿಕನ್ನರು

ಇಲ್ಲಿರುವುದು ಕೆಲವೇ ನೂರು ಸಂಖ್ಯೆಯ ಜನರ ಪುಟ್ಟ ಸಮುದಾಯ. ಆದರೆ, ಇವರು ಹೊರಗಿನ ಜನರು ತಮ್ಮ ನೆಲೆಗೆ ಬರುವುದನ್ನು ಸಹಿಸುವುದಿಲ್ಲ. ಹಾಗೆ ಹೋದವರೆಲ್ಲರೂ ಅವರ ವಿಷಪೂರಿತ ಬಾಣಗಳೇಟಿಗೆ ಬಲಿಯಾಗುತ್ತಾರೆ. ಹೀಗೆ ಸತ್ತವರ ಮೃತದೇಹವನ್ನು ತರಲು ಹೋಗುವುದೂ ಅಪಾಯಕಾರಿ ಸಾಹಸ.

ಅಳಿವಿನಂಚಿನಲ್ಲಿರುವ ಸಮುದಾಯವನ್ನು ರಕ್ಷಿಸಲು ಮತ್ತು ಅವರಿಂದ ಜನರು ಅಪಾಯಕ್ಕೆ ಒಳಗಾಗುವುದನ್ನು ತಪ್ಪಿಸಲು ಸೆಂಟಿನಲ್ ದ್ವೀಪದ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಆದರೆ, ಬಹಳ ವರ್ಷಗಳ ಹಿಂದೆಯೇ 13 ಜನರ ತಂಡವೊಂದು ಆ ದ್ವೀಪಕ್ಕೆ ತೆರಳಿ, ಹೊರಗಿನ 'ನಾಗರಿಕ ಸಮಾಜ'ದ ಪಾಲಿಗೆ ಕ್ರೂರಿಗಳು ಎನಿಸಿರುವ ಅದೇ ಬುಡಕಟ್ಟು ಸಮುದಾಯದ ಜನರೊಂದಿಗೆ ಬೆರೆತು, ಬದುಕಿ ಬಂದಿದ್ದರು ಎಂಬ ಅಚ್ಚರಿಯ ಸಂಗತಿ ಕೂಡ ಈಗ ಸದ್ದು ಮಾಡುತ್ತಿದೆ.

ಚೌ ಮೃತದೇಹದ ಹುಡುಕಾಟ ನಿಲ್ಲಿಸುವುದೇ ಒಳಿತು: ತಜ್ಞರ ಸಲಹೆ

ಈ 13 ಮಂದಿಯ ತಂಡದಲ್ಲಿ ಸೂಕ್ಷ್ಮಮತಿ ಮತ್ತು ಧೈರ್ಯಶಾಲಿ ಮಹಿಳೆಯೊಬ್ಬರಿದ್ದಿದ್ದೇ ಇಂತಹದ್ದೊಂದು ಸಾಹಸ ಯಶಸ್ವಿಯಾಗಲು ಕಾರಣ.

ಮಾನವಶಾಸ್ತ್ರಜ್ಞೆಯಾಗಿರುವ ಡಾ. ಮಧುಮಾಲಾ ಚಟ್ಟೋಪಾಧ್ಯಾಯ ತಮ್ಮ 1991ರಲ್ಲಿ ತಮ್ಮ ತಂಡದೊಂದಿಗೆ ಆ ಅಪಾಯಕಾರಿ ದ್ವೀಪಕ್ಕೆ ತೆರಳಿದ್ದರು. ಆಗ ಅವರಿಗೆ 27 ವರ್ಷ ವಯಸ್ಸು. ಮೊನ್ನೆ ಭಂಡತನದಿಂದ ಹೋಗಿ ಬುಡಕಟ್ಟು ಜನರ ಬಾಣಕ್ಕೆ ಜೀವತತ್ತ ಅಮೆರಿಕದ ಜಾನ್ ಚೌ ಆಗಿನ್ನೂ ಹುಟ್ಟಿಯೇ ಇರಲಿಲ್ಲ. 1994ರ ಬಳಿಕ ಈ ದ್ವೀಪಕ್ಕೆ ಪ್ರವೇಶ ನೀಡುವ ಅವಕಾಶವನ್ನು ಸರ್ಕಾರ ನಿಷೇಧಿಸಿತು.

ಈಗ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಜಂಟಿ ನಿರ್ದೇಶಕಿಯಾಗಿರುವ ಮಧುಮಾಲಾ, ತೀರಾ ಸಾಧಾರಣ ಬದುಕು ಸಾಗಿಸುತ್ತಿದ್ದಾರೆ. ಅವರ ಈ ಸರಳತೆಯೇ ಆಗಿನ ಸಾಹಸಕ್ಕೂ ಸ್ಫೂರ್ತಿಯಾಗಿತ್ತು.

27 ವರ್ಷದ ಹಿಂದಿನ ಘಟನೆಯನ್ನು ಅವರು ವಿವಿಧ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಅದರ ಸಾರ ಇಲ್ಲಿದೆ...

(ಚಿತ್ರಗಳ ಕೃಪೆ: ಮಧುಮಾಲಾ ಚಟ್ಟೋಪಾಧ್ಯಾಯ ಫೇಸ್‌ ಬುಕ್ ಖಾತೆ)

ಪೋರ್ಟ್ ಬ್ಲೇರ್‌ನಲ್ಲಿ ಕೆಲಸ ಕೇಳಿಕೊಂಡರು

ಪೋರ್ಟ್ ಬ್ಲೇರ್‌ನಲ್ಲಿ ಕೆಲಸ ಕೇಳಿಕೊಂಡರು

ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಫಿಸಿಕಲ್ ಆಂಥ್ರೊಪೊಲೊಜಿ ಪದವಿ ಪಡೆದ ಬಳಿಕ ಮಧುಮಾಲಾ ಅಮೆರಿಕನ್ ನ್ಯಾಷನಲ್ ಸ್ಟ್ಯಾಂಡರ್ಡ್ ಇನ್‌ಸ್ಟಿಟ್ಯೂಷನ್ (ಎಎನ್‌ಎಸ್‌ಐ) ಸಂಶೋಧನೆಗಾಗಿ ಅರ್ಜಿ ಸಲ್ಲಿಸಿದರು. ಬುಡಕಟ್ಟು ಸಮುದಾಯಗಳ ಬಗ್ಗೆ ಸಂಶೋಧನೆ ಮಾಡುವುದು ಅವರಿಗೆ ಅಪಾರ ಆಸಕ್ತಿ. ಉದ್ಯೋಗ ಸಂದರ್ಶನದ ವೇಳೆ ಪೋರ್ಟ್‌ ಬ್ಲೇರ್‌ನಲ್ಲಿ ಕೆಲಸ ನೀಡುವಂತೆ ಮಧುಮಾಲಾ ಕೇಳಿಕೊಂಡಾಗ, ಸಂದರ್ಶಕ ಡಾ. ಕುಮಾರ್ ಸುರೇಶ್ ಸಿಂಗ್, ಮಧುಮಾಲಾ ಅವರ ಪೋಷಕರಿಗೆ ಫೋನ್ ಕರೆ ಮಾಡಿ ಬಳಿಕ ಮಾತನಾಡಿದರಂತೆ.

ಬಾಲ್ಯದಿಂದಲೂ ಆಸಕ್ತಿ

ಪೋರ್ಟ್‌ ಬ್ಲೇರ್‌ನಲ್ಲಿ ಕೆಲಸ ಮಾಡಲು ಯಾರೂ ಇಷ್ಟಪಡುತ್ತಿರಲಿಲ್ಲ. ಅಲ್ಲಿ ಇರುವವರೂ ಹೊರಕ್ಕೆ ಬರುವ ಅವಕಾಶಕ್ಕಾಗಿ ಕಾಯುತ್ತಿದ್ದರು. 13 ವರ್ಷದವರಾಗಿದ್ದಾಗಲೇ ಮಧುಮಾಲಾ, ಕುಟುಂಬದ ವಾರ್ಷಿಕ ಪ್ರವಾಸಕ್ಕಾಗಿ ಅಂಡಮಾನ್ ನಿಕೋಬಾರ್ ದ್ವೀಪದ ಒಂಗೆ ಬುಡಕಟ್ಟು ಸಮುದಾಯವನ್ನು ನೋಡಲು ಕರೆದೊಯ್ಯುವಂತೆ ಪಟ್ಟು ಹಿಡಿದಿದ್ದರು. ಅವರ ಆಸಕ್ತಿಗಳಿಗೆ ಭಾರತೀಯ ರೈಲ್ವೆಯ ಲೆಕ್ಕಾಧಿಕಾರಿಯಾಗಿದ್ದ ತಂದೆ ನೀರೆರೆಯುತ್ತಿದ್ದರು. ಆದರೆ, ಬೇರೆ ಕಾರಣಗಳಿಂದ ಆ ಪ್ರವಾಸ ಸಾಧ್ಯವಾಗಿರಲಿಲ್ಲ. ಆದರೆ, ಗ್ರಂಥಾಲಯಗಳಲ್ಲಿ ಅಂಡಮಾನ್‌ ಬಗ್ಗೆ, ಮನುಷ್ಯ ಸಮುದಾಯಗಳ ಬಗ್ಗೆ ಓದುವಾಗಿ ಅವರಲ್ಲಿ ಮಾನಶಾಸ್ತ್ರದ ಅಧ್ಯಯನದ ಆಸಕ್ತಿ ಮೊಳಕೆಯೊಡೆಯಿತು.

ಅಂಡಮಾನಿನಲ್ಲಿ ಹತ್ಯೆಯಾದ ಅಮೆರಿಕನ್ನನ ಶವ ಸಿಗೋದೇ ಅನುಮಾನ!

ಆರು ವರ್ಷ ಅಧ್ಯಯನ

ಆರು ವರ್ಷ ಅಧ್ಯಯನ

1989ರಲ್ಲಿ ಉದ್ಯೋಗದ ಸಲುವಾಗಿ ಪೋರ್ಟ್ ಬ್ಲೇರ್‌ಗೆ ಕಾಲಿಟ್ಟ ಮಾಧುಮಾಲಾ, ಆರು ವರ್ಷ ಕಾಲ ಒಂಗೆ, ಕಾರ್ ನಿಕೋಬರೀಸ್ ಮತ್ತು ಜರಾವಾಗಳ ಬದುಕಿನ ಕುರಿತು ಅಧ್ಯಯನ ಮಾಡಿದರು. ವಿಶೇಷವೆಂದರೆ ಈ ಎಲ್ಲ ಸಮುದಾಯದವರೂ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದವು.

ಸೆಂಟಿನಲಿಸ್ ಸಾಹಸ ಯಾತ್ರೆ

ಬಡುಕಟ್ಟು ಜನರೊಂದಿಗೆ ಸ್ನೇಹ ಸಂಪರ್ಕ ಸಾಧಿಸುವ ಪ್ರಯತ್ನದ ಭಾಗವಾಗಿ ಉತ್ತರ ಸೆಂಟಿನಲ್ ದ್ವೀಪಕ್ಕೆ ತೆರಳಲು ಅಂಡಮಾನ್ ಆಡಳಿತ ಯೋಜನೆ ರೂಪಿಸಿತು. ಅಪಾಯಕಾರಿ ಸಾಹಸ ಪ್ರಯಾಣದಲ್ಲಿ ತಂಡದೊಳಗೆ ಇಬ್ಬರು ಮಾನವಶಾಸ್ತ್ರಜ್ಞರು ಇರಬೇಕಿತ್ತು. ಆಕೆ ಮಹಿಳೆ ಎಂಬ ಕಾರಣಕ್ಕೆ ಆರಂಭದಲ್ಲಿ ಅಧಿಕಾರಿಗಳು ಅವರ ಹೆಸರನ್ನು ತಿರಸ್ಕರಿಸಲು ಪ್ರಯತ್ನಿಸಿದರು. ಕೊನೆಗೆ ಬುಡಕಟ್ಟು ಜನರ ದಾಳಿಗೆ ತುತ್ತಾಗಿ ಸಮಸ್ಯೆಗಳಾದರೆ, ಸಾವು ಕೂಡ ಸಂಭವಿಸಿದರೂ ಅವರ ಪೋಷಕರು ಸರ್ಕಾರದಿಂದ ಏನನ್ನೂ ಪರಿಹಾರವಾಗಿ ಪಡೆಯುವಂತಿಲ್ಲ ಎಂಬ ಒಪ್ಪಂದದ ಮೇರೆಗೆ ಹಡಗು ಹತ್ತಲು ಅವಕಾಶ ನೀಡಲಾಯಿತು.

ಅಂಡಮಾನಿನಲ್ಲಿ ಕೊಲೆಯಾದ ಅಮೆರಿಕದವನ ಡೈರಿಯಲ್ಲಿತ್ತು ಸಾವಿನ ಸೂಚನೆ!

ಎದುರಾದರು ಬುಡಕಟ್ಟು ಜನರು

ಎದುರಾದರು ಬುಡಕಟ್ಟು ಜನರು

1991ರ ಜನವರಿ 4ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ತಂಡ ದ್ವೀಪದ ತೀರದ ಸಮೀಪ ತಲುಪಿತ್ತು. ಹೊಗೆ ಕಾಣಿಸುತ್ತಿದ್ದ ದಿಕ್ಕಿನೆಡೆಗೆ ಸಾಗಿದರು. ತುಸು ದೂರ ಹೋಗುತ್ತಿದ್ದಂತೆಯೇ ಹಠಾತ್ತಾಗಿ ಬುಡಕಟ್ಟು ಜನರ ಗುಂಪು ಎದುರಾಯಿತು. ಅವರಲ್ಲಿ ಹೆಚ್ಚಿನವರು ಪುರುಷರು. ನಾಲ್ವರ ಬಳಿ ಆಯುಧಗಳಿದ್ದವು. ತಂಡದ ಸದಸ್ಯರು ತಮ್ಮ ಬಳಿ ಇದ್ದ ತೆಂಗಿನಕಾಯಿಗಳನ್ನು ನೀರಿಗೆ ಹಾಕಿದರು. ಅಚ್ಚರಿಯೆಂದರೆ, ಸೆಂಟಿನಲಿಸ್ ಜನರು ಕೂಡಲೇ ಅವುಗಳನ್ನು ಪಡೆದುಕೊಳ್ಳಲು ಧಾವಿಸಿದರು. ಕೊನೆಗೆ ಇದ್ದ ಎಳನೀರೆಲ್ಲವೂ ಖಾಲಿಯಾಯಿತು. ಹಡಗನ್ನು ಸಮೀಪದಲ್ಲಿ ಲಂಗರು ಹಾಕಿ ನೆಲಕ್ಕಿಳಿದರು.

ಬಾಣ ಬಿಡುವುದನ್ನು ತಪ್ಪಿಸಿದಳು

ಅವರತ್ತ ಹೊರಡಲು ಅಣಿಯಾಗುತ್ತಿದ್ದಂತೆಯೇ 'ನಾರಿಯಾಲಿ ಜಬಾ ಜಬಾ' (ಇನ್ನಷ್ಟು ಎಳನೀರು) ಎಂದು ಕೂಗಿದರು. ಒಬ್ಬ ಯುವಕ ಹಡಗಿನತ್ತ ಓಡಿಬಂದ. ಉಳಿದವರೂ ಅವರ ಹಿಂದೆ ಬಂದರು. ಬೀಚ್‌ನ ಒಂದು ಬದಿಯಲ್ಲಿ ಮತ್ತೊಬ್ಬ ಯುವಕ ಅವರತ್ತ ಬಿಲ್ಲನ್ನು ಹದೆಗೇರಿಸಿ ಬಾಣ ನೆಡಲು ಸಿದ್ಧನಾಗುತ್ತಿದ್ದ. ಕೂಡಲೆ ಅಲ್ಲಿದ್ದ ಮಹಿಳೆಯೊಬ್ಬರು ಆತನನ್ನು ತಳ್ಳಿದಳು. ಬಾಣ ನೀರಿನೊಳಗೆ ಬಿತ್ತು. ಅವರನ್ನು ರಕ್ಷಿಸಬೇಕೆಂಬ ಉದ್ದೇಶ ಆಕೆಯಲ್ಲಿ ಇತ್ತು ಎನಿಸುತ್ತದೆ. ತಂಡದವರೆಲ್ಲರೂ ನೀರಿಗಿಳಿದರು. ಅಲ್ಲಿ ಬಿದ್ದಿದ್ದ ಕೆಲವು ಎಳನೀರನ್ನು ತೆಗೆದುಕೊಂಡು ಖುದ್ದಾಗಿ ಸೆಂಟಿನಲಿಗಳ ಕೈಗೆ ನೀಡಿದರು.

ಅಂಡಮಾನ್‌ನಲ್ಲಿ ಅಮೆರಿಕ ಪ್ರವಾಸಿಗನ ಹತ್ಯೆ: ನಿಗೂಢವಾಗುತ್ತಿರುವ ಪ್ರಕರಣ

ಸೆಂಟಿನಲಿಗಳೂ ಮಾನವರೇ

ಸೆಂಟಿನಲಿಗಳೂ ಮಾನವರೇ

ಮಾನವಶಾಸ್ತ್ರಜ್ಞೆಯಾಗಿರುವ ಮಧುಮಾಲಾ, ಅಂಡಮಾನ್‌ನಲ್ಲಿ ಸಂಶೋಧನೆ ನಡೆಸಲು ಬಯಸಿದ್ದರು. ಆದರೆ, ಆಕೆಗೆ ಏನಾದರೂ ಆದರೆ ಎನ್ನುವುದು ಅವರ ತಾಯಿಯ ಭಯ. ಆಗುವ ಅನಾಹುತಗಳಿಗೆ ಭಾರತೀಯ ಮಾನವಶಾಸ್ತ್ರ ಅಧ್ಯಯನ ವಿಭಾಗ ಯಾವುದೇ ಹೊಣೆ ಹೊತ್ತುಕೊಳ್ಳುತ್ತಿರಲಿಲ್ಲ. ಹಾಗೆಂದು ಭಯಗೊಂಡರೆ ತಿಳಿದುಕೊಳ್ಳುವುದು ಸಾಧ್ಯವಿಲ್ಲ.

ಸೆಂಟಿನಲಿಗಳೂ ಮಾನವರೇ. ತಮಗೆ ಯಾರು ಅಪಾಯ ಮಾಡುತ್ತಾರೆ ಎನ್ನುವುದು ಅವರಿಗೆ ಅರ್ಥವಾಗುತ್ತದೆ. ಫೆಬ್ರುವರಿ 21ರಂದು ಮತ್ತೊಮ್ಮೆ ಈ ತಂಡ ಅಲ್ಲಿಗೆ ತೆರಳಿದಾಗ ಅವರನ್ನು ಗುರುತಿಸಿ ಬಾಣಗಳನ್ನು ಕೆಳಗಿಟ್ಟರು. ಎಳನೀರು ತೆಗೆದುಕೊಳ್ಳಲು ಹಡಗು ಹತ್ತಲು ಓಡಿ ಬಂದರು. ಎಳನೀರಿನ ಜೊತೆ ಸುರಕ್ಷತೆಗಾಗಿ ಇರಿಸಿಕೊಂಡಿದ್ದ ರೈಫಲ್‌ಅನ್ನೂ ಹೊತ್ತೊಯ್ಯಲು ಮುಂದಾದರು. ಅದಕ್ಕೆ ಪೊಲೀಸರು ಬಿಡಲಿಲ್ಲ.

ಮೂಲತಃ ಕ್ರೂರಿಗಳಲ್ಲ

ಸೆಂಟಿನಲಿಗಳು ಹೊರಗಿನ ಜನರನ್ನು ಕಂಡರೆ ಉದ್ರಿಕ್ತರಾಗುವುದಿಲ್ಲ. ಅವರು ತಮ್ಮ ಪ್ರದೇಶ ಮತ್ತು ಮಹಿಳೆಯರನ್ನ ರಕ್ಷಿಸಲು ಮೊದಲು ದಾಳಿಗೆ ಮುಂದಾಗುತ್ತಾರೆ. ಅಂಡಮಾನ್ ಇತಿಹಾಸದಲ್ಲಿ ನಾವಿಕರು ಅಲ್ಲಿಗೆ ನುಗ್ಗಿ ಅವರನ್ನು ಅಪಹರಿಸಿ ಗುಲಾಮರನ್ನಾಗಿಸಿಕೊಂಡ ಉದಾಹರಣೆಗಳಿವೆ. ಸೆಂಟಿನಲಿಗಳು ಬಹಳ ಗಟ್ಟಿಮುಟ್ಟು. ಅವರ ದೇಹಾಕಾರವನ್ನು ನೋಡಿ ಪಠಾಣ್ ಜರಾವಾಗಳು ಎಂದು ಕರೆಯುತ್ತಾರೆ. ಅವರ ಜೀವನೋಪಾಯ ತಂತ್ರಗಳಿಗಾಗಿ ಹೊರಗಿನವರು ಬಂದು ಕಲಿಸಿಕೊಡುವ ಅಗತ್ಯವಿಲ್ಲ.

ಅವರೇ ಹೆಚ್ಚು ನಾಗರಿಕರು

ಸೆಂಟಿನಲಿಗಳಿಗೆ ಆಧುನಿಕ ತಂತ್ರಜ್ಞಾನಗಳ ಪರಿಚಯ ಇಲ್ಲದೆ ಇರಬಹುದು. ಹಾಗೆಂದು ಅವರು ಅನಾಗರಿಕರಲ್ಲ. ನಮಗಿಂತಲೂ ಹೆಚ್ಚು ಚೆನ್ನಾಗಿ ಪ್ರಕೃತಿಯನ್ನು ಅರ್ಥಮಾಡಿಕೊಳ್ಳಬಲ್ಲರು. ಸುನಾಮಿ ಬರುವುದು ಅವರಿಗೆ ಮೊದಲೇ ತಿಳಿದಿತ್ತು. ಹೀಗಾಗಿ ಎತ್ತರದ ಪ್ರದೇಶಗಳಿಗೆ ತೆರಳಿ ಬಚಾವಾಗಿದ್ದರು.

'ನಾಗರಿಕ' ಎಂದು ಕರೆಯುವ ಜನರು ಮಾಡದ ಪ್ರಕೃತಿ ಪೂಜೆ, ಆರಾಧನೆಯನ್ನು ಅವರು ಮಾಡುತ್ತಾರೆ. ಅವರಿಗೆ ಯಾವುದಾದರೂ ಧರ್ಮವನ್ನು ಬೋಧಿಸಲು ಬಂದರೆ ತಮ್ಮ ಅಸ್ತಿತ್ವದ ಹೋರಾಟಕ್ಕೆ ಮುಂದಾಗುತ್ತಾರೆ. ಅಂಡಮಾನ್‌ನ ಮೂಲ ನಿವಾಸಿಗಳೊಂದಿಗೆ ಹೇಗೆ ವರ್ತಿಸಬಾರದು ಎಂಬುದನ್ನು ಬ್ರಿಟಿಷರ ಪ್ರಯೋಗಗಳು ನಮಗೆ ಕಲಿಸಿವೆ ಎನ್ನುತ್ತಾರೆ ಮಧುಮಾಲಾ.

ಮೃತದೇಹ ಹುಡುಕುವುದು ಬೇಡ

ಮೃತದೇಹ ಹುಡುಕುವುದು ಬೇಡ

ಅಲೆನ್ ಚೌ ಬಲವಂತವಾಗಿ ಅವರ ಪ್ರದೇಶಕ್ಕೆ ಪ್ರವೇಶಿಸಿದ್ದರು ಎನ್ನುವುದು ಸ್ಪಷ್ಟ. ಅದನ್ನು ಅವರು ಬಲವಾಗಿ ಕಾಯುತ್ತಾರೆ. ಅವರ ಮೃತದೇಹ ತರುವ ಪ್ರಯತ್ನ ಅಪಾಯಕಾರಿ. ದ್ವೀಪ ಪ್ರವೇಶಿಸಲು ಅಧಿಕಾರಿಗಳು ಪ್ರಯತ್ನಿಸಿದಷ್ಟೂ ಸಾವು ನೋವುಗಳು ಹೆಚ್ಚುತ್ತವೆ. ಸೆಂಟಿನಲಿಗಳು ದಾಳಿ ಮಾಡುತ್ತಾರೆ. ಇವರು ಸೆಂಟಿನಲಿಗಳನ್ನೂ ಕೊಲ್ಲುತ್ತಾರೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ.

English summary
In the history, Anthropologist Madhumala Chattopadhyay was the first and last woman from modern society who visited Sentinelese Island in 1991 and safely returned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X