ಜನಸಂಖ್ಯೆಯ ಅನುಸಾರ ಡಿಲಿಮಿಟೇಶನ್ ದಕ್ಷಿಣ ರಾಜ್ಯಗಳಿಗೆ ಎಸಗುವ ಘೋರ ಅನ್ಯಾಯ: ಮಧು ವೈ.ಎನ್. ಬರಹ

ಜನಸಂಖ್ಯೆಯ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಮರುಹಂಚಿಕೆ (Delimitation) ಮಾಡುವುದು ದಕ್ಷಿಣದ ರಾಜ್ಯಗಳಿಗೆ ಎಸಗುವ ಘೋರ ಅನ್ಯಾಯ ಎಂದು ಕನ್ನಡದ ಪ್ರಮುಖ ತಂತ್ರಜ್ಞಾನ ಆಧಾರಿತ ಬರಹಗಾರ ಮಧು ವೈ.ಎನ್.ಅಭಿಪ್ರಾಯಪಟ್ಟಿದ್ದಾರೆ. ಅವರ ಫೇಸ್‌ಬುಕ್‌ ಬರಹ ಇಲ್ಲಿದೆ.

'ಜನಸಂಖ್ಯೆಯ ಅನುಸಾರ ಡಿಲಿಮಿಟೇಶನ್ ಮಾಡುವುದು ದಕ್ಷಿಣ ರಾಜ್ಯಗಳಿಗೆ ಎಸಗುವ ಘೋರ ಅನ್ಯಾಯ. ಬಿಜೆಪಿ ಸಂಸದರು ಅಭಿಮಾನಿಗಳು ಅಷ್ಟೇ ಯಾಕೆ ದೇಶದ ಸಮಗ್ರತೆ ಬಯಸುವ ಉತ್ತರ ಭಾರತದ ಸ್ನೇಹಿತರೂ ಸಹ ಇದನ್ನು ವಿರೋಧಿಸಬೇಕು. ಮುಸ್ಲಿಮರ ಮೇಲೆ ಮಕ್ಕಳ ಹೆರುವ ನಿಯಂತ್ರಣ ಹೇರಬೇಕು ಎಂದು ಕೂಗು ಹಾಕುತ್ತ ಬಂದ ಬಿಜೆಪಿ ಮಿತ್ರರು ಇದಕ್ಕೆ ಮಾತ್ರ ಬೆಪ್ಪರಂತೆ ಭಿನ್ನ ರಾಗ ಎಳೆಯುವುದು ವಂಚನೆ ಮನೋಭಾವ ಬಿತ್ತರಿಸುತ್ತಿದೆ'.

Delimitation

'ಆದರೆ ಕೇಂದ್ರ ಸರಕಾರ ಹೊಸ ಪರಿಹಾರವೊಂದನ್ನು ಸೂಚಿಸುತ್ತಿರುವಂತಿದೆ. ಪ್ರತಿ ರಾಜ್ಯದ ಈಗಿನ ಸಂಖ್ಯೆಯನ್ನು ಒಂದೂವರೆ ಪಟ್ಟು ಸಮನಾಗಿ ಏರಿಸುತ್ತೇವೆ ಎಂದು. ಇದನ್ನು ಮಾಡಬಹುದು. ಇದನ್ನೇ ಮಾಡಬೇಕು. ಆಡಳಿತಾನುಕೂಲಕ್ಕೆ ಕಾಲಕಾಲಕ್ಕೆ ಸೀಟು ಮರುಹಂಚಿಕೆ ಅಗತ್ಯವಿದ್ದಿರಬಹುದು. ಆದರೆ ಇದಕ್ಕೆ ಸಂವಿಧಾನ ಒಪ್ಪುತ್ತದೋ ಇಲ್ಲವೋ ಗೊತ್ತಿಲ್ಲ. ಸಂವಿಧಾನವನ್ನು ತಿದ್ದಿಯಾದರೂ ಸರಿ ದಕ್ಷಿಣ ರಾಜ್ಯಗಳ ದಕ್ಷತನ ಮತ್ತು ಹಿತಾಸಕ್ತಿ ಕಾಪಾಡಬೇಕು'.

'ಭಾರತದ ಬಹುಭಾಗ ಬಡತನ, ಮೂಢತನ ದೇಶವನ್ನು ಹಿಂದೆ ಎಳೆಯುವ ಈ ಭಾರ- ನಿಜಕ್ಕೂ ಹೆಚ್ಚೆಚ್ಚು ಮಕ್ಕಳು ಹೆರುವ ಈ ಕೆಲವು ಭೌಗೋಳಿಕ(ಹಿಂದಿ ಬೆಲ್ಟ್) ಮತ್ತು ಸಾಮಾಜಿಕ (ಮುಸ್ಲಿಂ ಮತ್ತು ಹಿಂದಿ ಬೆಲ್ಟಿನ ಹಿಂದೂ) ಭಾಗಗಳಿಗೆ ಸೀಮಿತವಾಗಿದ್ದು ಇದಕ್ಕೆ ಸರ್ಜರಿಯಾಗಬೇಕಿದೆ. ಸರಕಾರಗಳು ಇದರತ್ತ ಹೆಚ್ಚು ಗಮನ ಹರಿಸಬೇಕಿದೆ'.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+