Get Updates
Get notified of breaking news, exclusive insights, and must-see stories!

Middle Class : ಮೇಡಂ, ಸ್ವಲ್ಪ ಮಧ್ಯಮ ವರ್ಗದವರನ್ನೂ ನೋಡಿ ಪ್ಲೀಸ್‌ ಟ್ವೀಟ್: ನಿರ್ಮಲಾ ಸೀತಾರಾಮನ್ ಹೇಳಿದ್ದೇನು

ದೇಶದಲ್ಲಿ ಬೆಲೆ ಏರಿಕೆ ಮಿತಿ ಮೀರಿದೆ. ಅಗತ್ಯ ಹಾಗೂ ಸಣ್ಣ ಸಣ್ಣ ವಸ್ತುಗಳ ಮೇಲೆಯೂ ಕೇಂದ್ರ ಸರ್ಕಾರ ಟ್ಯಾಕ್ಸ್‌ ಹಾಕುತ್ತಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದವರಿಗೆ ಜೀವನ ಸಾಗಿಸಲು ಕಷ್ಟವಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಲ್ಲೇ ಇದೆ. ಇದೀಗ ಈ ಬಗ್ಗೆ ನೆಟ್ಟಿಗರೊಬ್ಬರು ನಿರ್ಮಲಾ ಸೀತಾರಾಮನ್ ಅವರಿಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪ್ರಶ್ನೆ ಮಾಡಿದ್ದು, ಮೇಡಂ ಪ್ಲೀಸ್‌ ಸ್ವಲ್ಪ ಮಧ್ಯಮ ವರ್ಗದವರನ್ನೂ ನೋಡಿ ಎಂದಿದ್ದಾರೆ. ಇದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಹ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆ. ನೆಟ್ಟಿಗರ ಟ್ವೀಟ್‌ಗೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ...

ನಿರ್ಮಲಾ ಸೀತಾರಾಮನ್ ಅವರು ಟ್ಯಾಕ್ಸ್‌ ಚರ್ಚೆ ಹಾಗೂ ಟ್ಯಾಕ್ಸ್‌ ವಿವರಣೆಯ ವಿಚಾರದಲ್ಲಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಕೆಲವೊಮ್ಮೆ ಅವರ ಹೇಳಿಕೆ, ಮಾತುಗಳು ಭಾರೀ ಟ್ರೋಲ್ ಆಗಿದ್ದೂ ಸಹ ಇದೆ. ಆದರೆ, ಇದೀಗ ನಿರ್ಮಲಾ ಸೀತಾರಾಮನ್‌ ಅವರು ಹೇಳಿರುವ ಮಾತು ಮಧ್ಯಮ ವರ್ಗದವರಲ್ಲಿ ಹೊಸ ನಿರೀಕ್ಷೆಯನ್ನು ಹಾಗೂ ತೆರಿಗೆ ಭಾರ ಇಳಿಕೆಯಾಗುವ ಆಸೆ ಹುಟ್ಟಿಕೊಂಡಿದೆ.

Madam please look at middle class too Tweet What Nirmala Sitharaman said

ಕಳೆದ ಕೆಲವು ವರ್ಷಗಳಿಂದ ಮಧ್ಯಮ ವರ್ಗದವರಿಗೆ ತೆರಿಗೆ ಭಾರ ಹೆಚ್ಚಾಗ್ತಿದೆ. ಆದಾಯಕ್ಕೂ ಆಗುವ ಖರ್ಚಿಗೂ ಒಂದಕ್ಕೊಂದು ಸಂಬಂಧವಿಲ್ಲ. ದುಡಿಯುವುದಕ್ಕಿಂತ ಖರ್ಚಾಗುವುದೇ ಜಾಸ್ತಿ ಎನ್ನುವ ದುಃಖವನ್ನು ಮಧ್ಯಮ ವರ್ಗದವರು ತೋಡಿಕೊಳ್ಳುತ್ತಲ್ಲೇ ಇದ್ದಾರೆ. ದೇಶದ ಮಧ್ಯಮ ವರ್ಗದವರ ಪರವಾಗಿ ವ್ಯಕ್ತಿಯೊಬ್ಬರು ನಿರ್ಮಲಾ ಸೀತಾರಾಮನ್ ಅವರನ್ನು ನಯವಾಗಿ ಪ್ರಶ್ನೆ ಮಾಡಿದ್ದಾರೆ.

ತುಷಾರ್ ಶರ್ಮಾ ಎನ್ನುವವರು ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಪೋಸ್ಟ್‌ ವಿವರ ಈ ರೀತಿ ಇದೆ. ನಿರ್ಮಲಾ ಸೀತಾರಾಮನ್ ಮೇಡಂ, ದೇಶಕ್ಕೆ ನೀವು ನೀಡುತ್ತಿರುವ ಕೊಡುಗೆ ಹಾಗೂ ನಿಮ್ಮ ಪ್ರಯತ್ನವನ್ನು ನಾವು ಪ್ರಶಂಸಿಸುತ್ತೇವೆ. ನೀವು ಸದಾ ನಮ್ಮ ಮೆಚ್ಚುಗೆಯನ್ನು ಹೊಂದಿದ್ದೀರಿ. ಆದರೆ, ಮಧ್ಯಮ ವರ್ಗದವರಿಗೂ ಒಂದಿಷ್ಟು ಪರಿಹಾರ ನೀಡುವ ಬಗ್ಗೆ ಯೋಚಿಸಿ. ಇದು ನನ್ನ ವಿನಮ್ರ ವಿನಂತಿಯಾಗಿದೆ. ಭಾರತವು ಎದುರಿಸುತ್ತಿರುವ ಅಪಾರ ಸವಾಲುಗಳನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಆದರೆ, ಇದು ಕೇವಲ ನನ್ನ ಸವಿನಯ ಮನವಿಯಾಗಿದೆ ಎಂದಿದ್ದಾರೆ.

ನಿರ್ಮಲಾ ಸೀತಾರಾಮನ್‌ ಟ್ವೀಟ್: ಈ ಟ್ವೀಟ್‌ಗೆ ನಿರ್ಮಲಾ ಅವರು ಸಹ ಅಷ್ಟೇ ತಾಳ್ಮೆಯಿಂದಲೇ ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಮಾತು ಮತ್ತು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು. ನೀವು ಹೇಳಿರುವ (ಎತ್ತಿರುವ) ಸಮಸ್ಯೆಗಳನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಜನರಿಗೆ ಸ್ಪಂದಿಸುವ ಸರ್ಕಾರವಾಗಿದೆ.

ಜನರ ಧ್ವನಿಯನ್ನು ಕೇಳಿ, ಪರಿಹಾರ ನೀಡುತ್ತಿದ್ದೇವೆ. ಈಗಿಮ ಪರಿಸ್ಥಿತಿ ಅರ್ಥ ಮಾಡಿಕೊಂಡಿದ್ದಕ್ಕೆ ನಿಮಗೆ ಮತ್ತೊಮ್ಮೆ ಧನ್ಯವಾದ. ನೀವು ಕೊಟ್ಟಿರುವ ಮಾಹಿತಿಯು ಅತ್ಯಂತ ಅತ್ಯಮೂಲ್ಯವಾಗಿದೆ ಎಂದು ಹೇಳಿದ್ದಾರೆ.

ಈ ಮೂಲಕ ಮಧ್ಯಮ ವರ್ಗದವರ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅರಿವಿದ್ದು. ಮುಂದಿನ ದಿನಗಳಲ್ಲಿ ಮಧ್ಯಮ ವರ್ಗದವರಿಗೆ ರಿಲೀಫ್‌ ಸಿಗಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+