• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೂನ್ 2ರಿಂದ ಭಾರತ ಜರ್ಮನಿ ನಡುವೆ ತಡೆ ರಹಿತ ಲುಫ್ತಾನ್ಸಾ ವಿಮಾನ ಸಂಚಾರ

|

ನವದೆಹಲಿ, ಜೂನ್ 2: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಹಾವಳಿ ತಗ್ಗಿದ ಹಿನ್ನೆಲೆ ಜರ್ಮನಿ ಮತ್ತು ಭಾರತದ ನಡುವೆ ಲುಫ್ತಾನ್ಸಾ ವಿಮಾನಗಳ ತಡೆ ರಹಿತ ಸಂಚಾರ ಜೂನ್ 2ರಿಂದ ಪುನಾರಂಭಗೊಂಡಿದೆ.

ಜರ್ಮನಿ ಹಾಗೂ ಭಾರತದ ನಡುವೆ ಏರ್ ಬಬಲ್ ಅಡಿಯಲ್ಲಿ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ದೆಹಲಿ ಮತ್ತು ಫ್ರಾಂಕ್ ಫರ್ಟ್ ನಡುವೆ ವಾರದಲ್ಲಿ ನಾಲ್ಕು ಬಾರಿ 10 ವಿಮಾನಗಳು ಸಂಚರಿಸಲಿವೆ. ಮುಂಬೈಗೆ 3, ಬೆಂಗಳೂರು 3 ವಿಮಾನಗಳು ಸಂಚರಿಸಲಿವೆ. ಈ ನಡುವೆ ಗಲ್ಫ್ ರಾಷ್ಟ್ರಗಳಲ್ಲಿ ಸಿಬ್ಬಂದಿ ಬದಲಾವಣೆಗೆ ಅವಕಾಶ ನೀಡದ ಹಿನ್ನೆಲೆ ಪ್ರಯಾಣದ ಸಮಯದಲ್ಲಿ 3 ಗಂಟೆ ಕಡಿಮೆಯಾಗಿಲಿದೆ.

ಕೋವಿಡ್ 2ನೇ ಅಲೆಯ ಪರಿಣಾಮ: ಅಧಿಕಾರಿಗಳಿಗೆ ಕಡ್ಡಾಯ ರಜೆಗೆ ಇಂಡಿಗೋ ಸೂಚನೆಕೋವಿಡ್ 2ನೇ ಅಲೆಯ ಪರಿಣಾಮ: ಅಧಿಕಾರಿಗಳಿಗೆ ಕಡ್ಡಾಯ ರಜೆಗೆ ಇಂಡಿಗೋ ಸೂಚನೆ

ಕಳೆದ ತಿಂಗಳು ಜರ್ಮನಿಯಿಂದ ಭಾರತಕ್ಕೆ ಪ್ರಯಾಣಿಸುವ ಲುಫ್ತಾನ್ಸಾ ವಿಮಾನದ ಪೈಲಟ್ಸ್ ಮತ್ತು ಸಿಬ್ಬಂದಿ ಬದಲಾವಣೆಗಾಗಿ ದುಬೈನಲ್ಲಿ ನಿಲುಗಡೆಗೆ ಅನುಮತಿ ನೀಡುವುದಾಗಿ ಸಂಸ್ಥೆ ತಿಳಿಸಿತ್ತು. ಭಾರತದ ಪ್ರಯಾಣಿಕರಿಗೆ ಯುಎಇ ನಿರ್ಬಂಧದಿಂದಾಗಿ ದುಬೈ ಅನ್ನು ನಂತರ ಬಹ್ರೇನ್‌ಗೆ ಬದಲಾಯಿಸಲಾಯಿತು. ಮೊದಲ ಹಂತದಲ್ಲಿ ಫ್ರಾಂಕ್ ಫರ್ಟ್ ನಿಂದ ಗಲ್ಭ್ ವರೆಗೆ ವಿಮಾನಗಳು ಸಂಚರಿಸಲಿದ್ದು, 2ನೇ ಹಂತದಲ್ಲಿ ಗಲ್ಭ್ ನಿಂದ ದೆಹಲಿ, ಮುಂಬೈ, ಬೆಂಗಳೂರಿನತ್ತ ವಿಮಾನಗಳು ಸಂಚರಿಸುತ್ತಿದ್ದವು. ಮೂರನೇ ಹಂತದಲ್ಲಿ ಇದೇ ರೀತಿಯಾಗಿ ಜರ್ಮನಿಗೆ ವಿಮಾನಗಳು ಹಾರುತ್ತಿದ್ದವು.

ಸಿಬ್ಬಂದಿ ಬದಲಾವಣೆಗೆ ಯಾವುದೇ ನಿಲ್ದಾಣವಿಲ್ಲ:

ಭಾರತ ಮತ್ತು ಜರ್ಮನಿ ನಡುವೆ ಸಂಚರಿಸುವ ಲುಫ್ತಾನ್ಸಾ ವಿಮಾನಗಳು ಸಾಮಾನ್ಯವಾಗಿ ಕಾರ್ಯಾಚರಣೆ ನಡೆಸಲಿವೆ. ವಿಮಾನದ ಸಿಬ್ಬಂದಿ ಬದಲಾವಣೆಗೆ ಮಧ್ಯದಲ್ಲಿ ಯಾವುದೇ ನಿಲ್ದಾಣಗಳು ಇರುವುದಿಲ್ಲ. ಫ್ರಾಂಕ್ ಫರ್ಟ್ ನಿಂದ ಹೊರಟ ವಿಮಾನ ನೇರವಾಗಿ ಭಾರತದಲ್ಲಿ ನಿಗದಿಗೊಳಿಸಿರುವ ದೆಹಲಿ, ಮುಂಬೈ ಅಥವಾ ಬೆಂಗಳೂರು ನಗರದವರೆಗೂ ಸಂಚರಿಸಲಿದೆ. ಬಹ್ರೇನ್ ನಿಲ್ದಾಣದಲ್ಲಿ ವಿಮಾನಗಳ ನಿಲುಗಡೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಪ್ರಯಾಣದ ಅವಧಿ ಕಡಿತ:

ಗಲ್ಭ್ ರಾಷ್ಟ್ರದ ಬಹ್ರೇನ್ ನಿಲುಗಡೆಯನ್ನು ನಿರ್ಬಂಧಿಸಿರುವ ಹಿನ್ನೆಲೆ ಪ್ರಯಾಣದ ಅವಧಿ ಕಡಿತಗೊಂಡಿದೆ. ಫ್ರಾಂಕ್ ಫರ್ಟ್ ನಿಂದ ದೆಹಲಿ ಅಥವಾ ಮುಂಬೈಗೆ ಪ್ರಯಾಣಿಸಲು 9 ಗಂಟೆಗಳ ಬದಲಿಗೆ 7 ಗಂಟೆ ಸಾಕಾಗುತ್ತದೆ. ಫ್ರಾಂಕ್ ಫರ್ಟ್ ನಿಂದ ಬೆಂಗಳೂರಿಗೆ ಪ್ರಯಾಣಿಸುವದಕ್ಕೆ 13 ಗಂಟೆ ಬದಲಿಗೆ 11 ಗಂಟೆ ತೆಗೆದುಕೊಳ್ಳಲಾಗುತ್ತದೆ.

English summary
Lufthansa To Resume India-Germany Nonstop Flights From Today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X