• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ಯಾಮ್ ಸರನ್ ನೇಗಿ, ವಯಸ್ಸು 97, ಸ್ವತಂತ್ರ ಭಾರತದ ಮೊಟ್ಟಮೊದಲ ಮತದಾರ

By Srinath
|

(ಮಂಡಿ) ಹಿಮಾಚಲ ಪ್ರದೇಶ, ಮಾರ್ಚ್ 26- ಹಿಮಾಚಲ ಪ್ರದೇಶದ ಹಿರಿಯರೊಬ್ಬರು ಸ್ವಾತಂತ್ರ್ಯಾನಂತರದ ಭಾರತದಲ್ಲಿ ಹಿರಿಮೆಯೊಂದನ್ನು ಸಾಧಿಸಿದ್ದಾರೆ. ಪ್ರಸ್ತುತ 97 ವರ್ಷ ವಯಸ್ಸಿನ ಶ್ಯಾಮ್ ಶರಣ್ ನೇಗಿ ಅವರು ಸ್ವತಂತ್ರ ಭಾರತದ ಮೊಟ್ಟಮೊದಲ ಮತದಾರರಾಗಿದ್ದಾರೆ. ಜತೆಗೆ, ಅಂದಿನಿಂದಲೂ ಪ್ರತಿ ಚುನಾವಣೆಯಲ್ಲೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸುತ್ತಾ ಬಂದಿದ್ದಾರೆ.

ಅಷ್ಟೇ ಅಲ್ಲ, ಈ ಬಾರಿಯೂ ಮತಗಟ್ಟೆಯತ್ತ ತೆರಳುವ ದೃಢ ನಿರ್ಧಾರ ಮಾಡಿರುವ ಎಸ್ಎಸ್ ನೇಗಿ ಅವರು 'ನನ್ನ ಹಾಗೆ ಈ ಪವಿತ್ರ ಮತ್ತು ಜವಾಬ್ದಾರಿಯುತ ಹಕ್ಕನ್ನು ಎಲ್ಲರೂ ಅದರಲ್ಲೂ ಇಂದಿನ ಯುವಕರು ತಪ್ಪದೆ ಚಲಾಯಿಸಬೇಕು' ಎಂದೂ ಕಿವಿಮಾತು ಹೇಳಿದ್ದಾರೆ. ಲೋಕಸಭೆಯೇ ಅಂತಲ್ಲ, ಅದು ವಿಧಾನಸಭೆಯಾದರೂ ಆಗಿರಬಹುದು ಅಥವಾ ಗ್ರಾಮ ಪಂಚಾಯಿತಿಯೇ ಆಗಿರಬಹುದು ಎಲ್ಲ ಚುನಾವಣೆಗಳಲ್ಲೂ ಮತ ಚಲಾಯಿಸುವುದನ್ನು ತಮ್ಮ ಧರ್ಮವೆಂಬಂತೆ ಪರಿಪಾಲಿಸಿಕೊಂಡು ಬಂದಿದ್ದಾರೆ.

ಮತದಾನದ ಹಕ್ಕನ್ನು ಚಲಾಯಿಸಿ, ಪ್ರಾಮಾಣಿಕ ನಾಯಕನ ಕೈಗೆ ಸರಕಾರದ ಚುಕ್ಕಾಣಿ ನೀಡುವಂತಾಗಬೇಕು. ಮುಂದೆ, ಭಷ್ಟಾಚಾರವನ್ನು ಕೊನೆಗಾಣಿಸುವುದು ಮತ್ತು ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸುವುದು ಆ ಪ್ರಾಮಾಣಿಕ ನಾಯಕನ ಆದ್ಯ ಕರ್ತವ್ಯವಾಗಬೇಕು ಎಂದು ಎಸ್ಎಸ್ ನೇಗಿ ಆಶಿಸಿದ್ದಾರೆ. ಅಂದಹಾಗೆ ಮೇ 7ರಂದು ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ.

ಹಿಮಾಚಲದ ಸೇಬು ತೋಟಗಳ ಮಧ್ಯೆಯಿರುವ ಕಿಣ್ಣಾರ್ ಜಿಲ್ಲೆಯ ಮಂಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾಲ್ಪ ಗ್ರಾಮದ ನಿವಾಸಿ ಎಸ್ಎಸ್ ನೇಗಿ. ಪತ್ನಿ ಜತೆಗೆ ನಾಲ್ವರು ಪುತ್ರರು ಮತ್ತು ಐವರು ಪುತ್ರಿಯರು ಇದ್ದಾರೆ. ಹಾಗೆಯೇ, ಮೊಮ್ಮಕ್ಕಳು ಅನೇಕ ಮರಿಮೊಮ್ಮಕ್ಕಳು ಸಹ ಇದ್ದಾರೆ. ಶಿಮ್ಲಾದಿಂದ 250 ಕಿಮೀ ದೂರದಲ್ಲಿರುವ ಗ್ರಾಮದಲ್ಲಿ ನೆಲೆಸಿರುವ ಹಿರಿಯಜ್ಜ ಮತ್ತು ಚುನಾವಣಾ ಆಯೋಗದ ಹೆಗ್ಗುರುತಾದ ಎಸ್ಎಸ್ ನೇಗಿ ಅವರನ್ನು ನೋಡಿಕೊಂಡು ಬರಲು ಮೊನ್ನೆ ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿತ್ತು.

1975ರಲ್ಲಿ ಸರಕಾರಿ ಶಾಲಾ ಶಿಕ್ಷಕರಾಗಿ ಸೇವೆಯಿಂದ ನಿವೃತ್ತರಾದ ಎಸ್ಎಸ್ ನೇಗಿ 1951ರ ಅಕ್ಟೋಬರಿನಲ್ಲಿ ದೇಶದ ಮೊದಲ ಲೋಕಸಭಾ ಸಮರದಲ್ಲಿ ಮತ ಚಲಾಯಿಸಿದ್ದರು. ಅಂದಿನಿಂದ ಇದುವರೆಗೆ ಪ್ರತಿ ಬಾರಿಯೂ ಮತ ಚಲಾಯಿಸುತ್ತಾ ಬಂದಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ತಮ್ಮ ಮನೆಯಿಂದ 1 ಕಿಮೀ ದೂರದಲ್ಲಿ ಮತಗಟ್ಟೆಯಿದ್ದು ಎಸ್ಎಸ್ ನೇಗಿ ಈ ಇಳಿವಯಸ್ಸಿನಲ್ಲೂ ಅಲ್ಲಿಯವರೆಗೆ ನಡೆದುಬಂದು ಮತ ಹಾಕುತ್ತಾರೆ. ಅವರಿಗಿಂತ 10 ವರ್ಷ ಕಿರಿಯ ವಯಸ್ಸಿನ ಅವರ ಪತ್ನಿ ಹೀರಾ ಮಣಿ ನೇಗಿಯ ಕೈಹಿಡಿದು ನಡೆಸುತ್ತಾರೆ. ವಯೋಸಹಜವಾಗಿ ಎಸ್ಎಸ್ ನೇಗಿಗೆ ಕಣ್ಣು- ಕಿವಿ ಮಂದವಾಗಿದೆ.

'ಮೊದಲ ಚುನಾವಣೆಯಲ್ಲಿ ನಾನು ಜವಾಹರಲಾಲ ನೆಹರೂ ಅವರಿಗೆ ಮತ ಹಾಕಿದ್ದೆ. ಆದರೆ ಆ ನಂತರ ಉತ್ತಮ ಆಡಳಿತದ ಭರವಸೆ ನೀಡಿದ್ದ ಪಕ್ಷದ ನಾಯಕರುಗಳಿಗೆ ಮತ ಹಾಕುತ್ತಾ ಬಂದಿದ್ದೇನೆ' ಎನ್ನುವ ನೇಗಿ ದೇಶದ ರಾಜಕೀಯ ಅಧೋಗತಿಯತ್ತ ಸಾಗಿದೆ ಎಂಬ ವಿಷಾದವಿದೆ.

2010ರಲ್ಲಿ ಆಯೋಗವು ತನ್ನ ವಜ್ರ ಮಹೋತ್ಸವದ ಅಂಗವಾಗಿ ಗ್ರಾಮಕ್ಕೆ ಭೇಟಿ ಮಾಡಿ, ಎಸ್ಎಸ್ ನೇಗಿ ಅವರನ್ನು ಸನ್ಮಾನಿಸಿತ್ತು. 2007, 2009, 2012ರಲ್ಲಿ ನಡೆದ ಚುನಾವಣೆಗಳಲ್ಲಿ ಶ್ಯಾಮ್ ಶರಣ್ ನೇಗಿ ಮತ ಚಲಾಯಿಸುತ್ತಿರುವುದನ್ನು ಆಯೋಗವು ಹೆಮ್ಮೆಯಿಂದ ವಿಡಿಯೋ ಚಿತ್ರೀಕರಣದಲ್ಲಿ ದಾಖಲಿಸಿದೆ. (ಚಿತ್ರ ಕೃಪೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lok Sabha polls 2014: Shyam Saran Negi 97 from Kalpa village is part of the Mandi Lok Sabha constituency in Himachal Pradesh has voted in all elections since Independence. Negi has memories of the first Lok Sabha election. "At that time I voted for Jawaharlal Nehru. But later I voted for (another) party which promised better governance." He didn't reveal the name of the other party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more