LPG ಗ್ಯಾಸ್ ಸಿಲಿಂಡರ್ ಗ್ರಾಹಕರೇ ಗಮನಿಸಿ: ಈ ದಿನಾಂಕದೊಳಗೆ ಇ-ಕೆವೈಸಿ ಮಾಡಿಸದಿದ್ರೆ ಸಬ್ಸಿಡಿ ಗೋವಿಂದಾ.. ಗೋವಿಂದ
ಬೆಂಗಳೂರು, ಡಿಸೆಂಬರ್, 14: ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಸಬ್ಸಿಡಿಯನ್ನು ನೀಡಲಾಗುತ್ತದೆ. ಇನ್ಮುಂದೆ ಈ ಸಬ್ಸಿಡಿ ಮುಂದುವರೆಯಬೇಕೆಂದರೆ ನೀವು ಇ-ಕೆವೈಸಿ ಮಾಡಿರಲೇಬೇಕಾಗುತ್ತದೆ. ಇಲ್ಲದಿದ್ದರೆ ಸಬ್ಸಿಡಿ ಸಿಗದಂತಾಗುತ್ತದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಹಾಗಾದರೆ ಇ-ಕೆವೈಸಿ ಮಾಡಿಸಲು ಕೊನೆಯ ದಿನಾಂಕ ಯಾವಾಗ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನೀವು ನಿಮ್ಮ ಗ್ಯಾಸ್ ಏಜೆನ್ಸಿಗೆ ಹೋಗಬೇಕಾಗಿದೆ. ಅಲ್ಲಿ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ಮೂಲಕ ಇ-ಕೆವೈಸಿ ಮಾಡಲಾಗುತ್ತದೆ. ಇದಕ್ಕೆ ಡಿಸೆಂಬರ್ 31 ಕೊನೆಯ ದಿನವಾಗಿದೆ. ಈ ಇ-ಕೆವೈಸಿ ಕೆಲಸವನ್ನು ಗ್ಯಾಸ್ ಏಜೆನ್ಸಿ ಕಚೇರಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಮಾಡಬಹುದು. ಸರ್ಕಾರದ ಸೂಚನೆಯ ಮೇರೆಗೆ ಇದನ್ನು ನವೆಂಬರ್ 25 ರಂದು ಪ್ರಾರಂಭಿಸಲಾಗಿದ್ದು, ಇದು ಡಿಸೆಂಬರ್ 31 ರವರೆಗೆ ಮುಂದುವರಿಯಲಿದೆ. ನೀವು ಗ್ಯಾಸ್ ಸಬ್ಸಿಡಿ ತೆಗೆದುಕೊಳ್ಳಬೇಕಾದರೆ, ಡಿಸೆಂಬರ್ 31ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳಬೇಕಾಗುತ್ತದೆ.

ಇ-ಕೆವೈಸಿ ಮಾಡಿಸಿಕೊಂಡವರೆಷ್ಟು ಮಂದಿ?
ಸಚಿವಾಲಯದ ಸೂಚನೆಗಳಿಗೆ ಅನುಸಾರವಾಗಿ ಗ್ರಾಹಕರ ಇ-ಕೆವೈಸಿ ಕೆಲಸ ನಡೆಯುತ್ತಿದೆ. ತಮ್ಮ ಏಜೆನ್ಸಿಗೆ ಸಂಬಂಧಿಸಿದ 15,500 ಗ್ರಾಹಕರಲ್ಲಿ, ಕೇವಲ 500 ಮಂದಿ ಮಾತ್ರ ಇಲ್ಲಿಯವರೆಗೆ ಇ-ಕೆವೈಸಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಭಾರತ ಸರ್ಕಾರದ ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ನಿರ್ದೇಶನದ ಪ್ರಕಾರ, ಸಬ್ಸಿಡಿ ಅನಿಲ ದರದಲ್ಲಿ ಸಬ್ಸಿಡಿ ಪಡೆಯುವ ಗ್ರಾಹಕರಿಗೆ ಇ-ಕೆವೈಸಿ ಕಡ್ಡಾಯ ಮಾಡಲಾಗಿದೆ.
ಬಿಪಿಎಲ್ ಕುಟುಂಬಳಿಗೆ ಸಿಗುವ LPG ಸಿಲಿಂಡರ್ ಬೆಲೆ
ಬಿಪಿಎಲ್ ಕಾರ್ಡುದಾರರಿಗೆ ಆಗಾಗಾ ಸರ್ಕಾರ ಗುಡ್‌ನ್ಯೂಸ್ ಕೊಡುತ್ತಲೇ ಬಂದಿದೆ. ಹಾಗೆಯೇ ಉಜ್ವಲ ಯೋಜನೆಯಡಿ ಎಲ್.ಪಿ.ಜಿ. ಸಿಲಿಂಡರ್ ದರ ನೆರೆಯ ದೇಶಗಳಿಗಿಂತ ಕಡಿಮೆ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅದರಲ್ಲೂ ಬಿಪಿಎಲ್ ಕುಟುಂಬಗಳಿಗೆ ನೀಡುತ್ತಿರುವ ಅಡುಗೆ ಅನಿಲ ಸಿಲಿಂಡರ್ ದರ ನೆರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರಿ ಕಡಿಮೆಯಿದೆ ಎಂದು ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಈ ಬಗ್ಗೆ ಮಾತನಾಡಿದ್ದು, ಪಾಕಿಸ್ತಾನದಲ್ಲಿ ಪ್ರತಿ ಸಿಲಿಂಡರ್ ದರ 1,059 ರೂಪಾಯಿ, ಶ್ರೀಲಂಕಾದಲ್ಲಿ 1033 ರೂಪಾಯಿ, ನೇಪಾಳದಲ್ಲಿ 1,198 ರೂಪಾಯಿ ಇದ್ದು, ಇನ್ನು ನಮ್ಮ ಭಾರತದಲ್ಲಿ ಉಜ್ವಲ ಯೋಜನೆ ಅಡಿಯಲ್ಲಿ 14.2 ಕೆಜಿ ಸಿಲಿಂಡರ್ ಅನ್ನು ಕೇವಲ 603 ರೂಪಾಯಿಗೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications