ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವಾಗ ಬೇಕಾದರೂ ಸಬ್ಸಿಡಿ ಸಿಲಿಂಡರ್ ಪಡೆಯಿರಿ

|
Google Oneindia Kannada News

ನವದೆಹಲಿ, ಆ.28 : ತಿಂಗಳಿಗೆ ಒಂದು ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ಪೂರೈಸುವ ನಿರ್ಬಂಧವನ್ನು ಕೇಂದ್ರ ಸರ್ಕಾರ ಬುಧವಾರ ತೆರವುಗೊಳಿಸಿದೆ. ಇದರಿಂದಾಗಿ ತಿಂಗಳಿಗೆ ಕೇವಲ ಒಂದು ಸಿಲಿಂಡರ್ ಎನ್ನುವ ನಿರ್ಬಂಧವಿಲ್ಲದೇ, ವರ್ಷದಲ್ಲಿ ಯಾವಾಗ ಬೇಕಾದರೂ 12 ಸಬ್ಸಿಡಿ ಸಿಲಿಂಡರ್‌ಗಳನ್ನು ಗ್ರಾಹಕರು ಪಡೆಯಬಹುದಾಗಿದೆ.

ಬುಧವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಸಚಿವ ಸಂಪುಟ ಸಭೆಯ ಬಳಿಕ ಈ ಕುರಿತು ಮಾಹಿತಿ ನೀಡಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್, ತಿಂಗಳಿಗೆ ಕೇವಲ ಒಂದು ಸಿಲಿಂಡರ್ ಎನ್ನುವ ನಿರ್ಬಂಧವಿಲ್ಲದೇ, ವರ್ಷದಲ್ಲಿ ಯಾವಾಗ ಬೇಕಾದರೂ 12 ಸಬ್ಸಿಡಿ ಸಿಲಿಂಡರ್‌ಗಳನ್ನು ಗ್ರಾಹಕರಿಗೆ ಪೂರೈಸಲು ಒಪ್ಪಿಗೆ ನೀಡಲಾಗಿದೆ ಎಂದರು.

LPG consumers

ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ 14.2 ಕೆ.ಜಿ ತೂಕದ ಸಬ್ಸಿಡಿಸಹಿತ ಎಲ್‌ಪಿಜಿ ಸಿಲಿಂಡರ್‌ಗಳ ಕೋಟಾವನ್ನು 9ರಿಂದ 12ಕ್ಕೆ ಹೆಚ್ಚಿಸಿ, ತಿಂಗಳಿಗೆ ಒಂದು ಸಿಲಿಂಡರ್ ಅನ್ನು ನೀಡುವ ತೀರ್ಮಾನವನ್ನು ಕಳೆದ ಫೆಬ್ರವರಿಯಲ್ಲಿ ತೆಗೆದುಕೊಂಡಿತ್ತು. ಈ ನಿರ್ಧಾರ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. [ಕರ್ನಾಟಕದಲ್ಲಿ ಸಿಲಿಂಡರ್ ಬೆಲೆ ಇಳಿಕೆ]

ಈ ತೀರ್ಮಾನದ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಎನ್‌ಡಿಎ ಸರ್ಕಾರ, ಕೆಲವು ಸಲ ಗ್ರಾಹಕರಿಗೆ ಒಂದು ಸಿಲಿಂಡರ್ ಸಹ ಬೇಕಾಗುವುದಿಲ್ಲ. ಹಬ್ಬದ ಸಮಯದಲ್ಲಿ ಹೆಚ್ಚಿನ ಸಿಲಿಂಡರ್‌ಗಳು ಬೇಕಾಗುತ್ತದೆ. ತಿಂಗಳಿಗೆ ಒಂದು ಸಿಲಿಂಡರ್ ಪಡೆಯದೇ ಹೋದರೆ, ಅದನ್ನು ಮುಂದಿನ ದಿನಗಳಲ್ಲಿ ಪಡೆಯಲು ಜನರಿಗೆ ಆಗುತ್ತಿರಲಿಲ್ಲ. ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಎಲ್ಲ ಗ್ರಾಹಕರ ಕುಟುಂಬಗಳೂ ಏಕ ರೂಪದಲ್ಲಿ ಇರುವುದಿಲ್ಲ. ಕೆಲವರಿಗೆ ತಿಂಗಳಿಗೆ ಒಂದು ಸಿಲಿಂಡರ್ ಸಾಕಾಗಬಹುದು. ಇನ್ನೂ ಕೆಲವರಿಗೆ ಮತ್ತೊಂದು ಸಿಲಿಂಡರ್‌ನ ಅಗತ್ಯವಿರುತ್ತದೆ. ಸರ್ಕಾರ ಸಿಲಿಂಡರ್ ಮಿತಿ ನಿರ್ಬಂಧವನ್ನು ಸಡಿಲಿಸಬೇಕು ಎಂದು ಜನರು ಒತ್ತಾಯಿಸಿದ್ದರು. ಸದ್ಯ ಸರ್ಕಾರ ಇದಕ್ಕೆ ಅಸ್ತು ಎಂದಿದೆ.

English summary
In a relief to consumers, the central govt lifted the restriction of supply of only one subsidised cooking gas LPG cylinder to a household in a month, saying consumers can avail their quota of 12 bottles at anytime of the year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X