ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡಿಮೆ ದರದ ಔಷಧ-ಸಲಕರಣೆ, ಶ್ರೀ ಸಾಮಾನ್ಯರ ಬದುಕಿಗೆ ಸರಕಾರದ ನಿಯಮ

|
Google Oneindia Kannada News

ವದೆಹಲಿ, ಅಕ್ಟೋಬರ್ 26: ದೇಶದ ಜನಸಾಮಾನ್ಯರಿಗೆ ಆರೋಗ್ಯ ಸವಲತ್ತುಗಳು ಕೈಗೆಟುಕುವ ದರದಲ್ಲಿ ಸಿಗುವಂತೆ ಮಾಡುವಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಕೆಲವು ದಿಟ್ಟ ನಿರ್ಧಾರಗಳನ್ನು ಕೈಗೊಂಡಿದೆ. ಕೈಗೆಟುಕುವ, ಗುಣಮಟ್ಟದ ಆರೋಗ್ಯ ಸೇವೆ ಎಲ್ಲರಿಗೂ ದೊರೆಯಬೇಕು ಎಂದು ತೆಗೆದುಕೊಂಡ ಉತ್ತಮ ಕ್ರಮಗಳನ್ನು ತೆಗೆದುಕೊಂಡಿದೆ.

ಬೆಲೆ ನಿಯಂತ್ರಣ ಅಡಿಯಲ್ಲಿ ಔಷಧಗಳು

ಕ್ಯಾನ್ಸರ್, ಹೆಪಟೈಟಿಸ್ ಸಿ, ಮೈಗ್ರೇನ್ ಮತ್ತು ಮಧುಮೇಹ ಸೇರಿದಂತೆ 92 ಔಷಧಗಳ ಬೆಲೆ ಮೇಲೆ ನಿಯಂತ್ರಕ ಎನ್ ಪಿಪಿಎಯಿಂದ ಮಿತಿ ವಿಧಿಸಿದೆ. ಪಟ್ಟಿಯಲ್ಲಿನ 72 ಔಷಧಗಳ ಬೆಲೆ ನಿಗದಿಗೊಳಿಸಲಾಗಿದ್ದು, 9 ಔಷಧಗಳ ಬೆಲೆ ಪರಿಷ್ಕರಣೆ ಮಾಡಲಾಗಿದೆ ಹಾಗೂ 11 ಔಷಧಗಳ ಚಿಲ್ಲರೆ ದರದಲ್ಲೂ ನ್ಯಾಷನಲ್ ಫಾರ್ಮಾಸ್ಯುಟಿಕಲ್ ಪ್ರೈಸಿಂಗ್ ಅಥಾರಿಟಿ (ಎನ್ ಪಿಪಿಎ) ಪರಿಷ್ಕರಣೆ ಮಾಡಲಾಗಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿಪ್ರಧಾನ ಮಂತ್ರಿ ಆವಾಸ್ ಯೋಜನೆ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ

ಎನ್ ಪಿಪಿಎಯಿಂದ 92 ಔಷಧಗಳ ಬೆಲೆ ನಿಗದಿ, ಪರಿಷ್ಕರಣೆ, ಮಿತಿ ವಿಧಿಸಲಾಗಿದೆ. ಇದು ಚಿಲ್ಲರೆ ಮಾರಾಟ ದರಕ್ಕೂ ಅನ್ವಯಿಸುತ್ತದೆ. ಔಷಧ (ಬೆಲೆ ನಿಯಂತ್ರಣ) ಆದೇಶ 2013ರ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಔಷಧ (ಬೆಲೆ ನಿಯಂತ್ರಣ) ಆದೇಶ 2013ರ ಅಡಿ ಷೆಡ್ಯೂಲ್ ಒಂದರಲ್ಲಿ ಎನ್ ಪಿಪಿಎಯಿಂದ ಅಗತ್ಯ ಔಷಧಗಳಿಗೆ ಬೆಲೆ ಮಿತಿ ವಿಧಿಸಲಾಗಿದೆ. ಯಾವ ಔಷಧ ಬೆಲೆ ನಿಯಂತ್ರಣ ಅಡಿಯಲ್ಲಿ ಬರುವುದಿಲ್ಲವೋ ಅವುಗಳಲ್ಲಿ ಉತ್ಪಾದಕರು ವಾರ್ಷಿಕ ಗರಿಷ್ಠ 10% ಬೆಲೆ ಏರಿಕೆ ಮಾಡಬಹುದಾಗಿದೆ.

Low cost medicines & devices bring new lease of life

ಜನೌಷಧಿ ಪರಿಯೋಜನೆ:

5-3-2018ರಿಂದ ಪ್ರಧಾನ ಮಂತ್ರಿ ಭಾರತೀಯ ಜನೌಷಧ ಪರಿಯೋಜನೆ (ಪಿಎಂಬಿಜೆಪಿ) ಅಡಿಯಲ್ಲಿ ದೇಶದ 33 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ 3214 ಪ್ರಧಾನ ಮಂತ್ರಿ ಭಾರತೀಯ ಜನೌಷಧ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದೆ. ಗುಣಮಟ್ಟದ ಜೆನೆರಿಕ್ ಔಷಧಗಳು ಕೈಗೆಟುಕುವ ದರದಲ್ಲಿ ಎಲ್ಲರಿಗೂ ದೊರೆಯಬೇಕು ಎಂಬುದು ಯೋಜನೆಯ ಉದ್ದೇಶ. ಪಶ್ಚಿಮ ಬಂಗಾಲ, ಗುಜರಾತ್, ಕೇರಲ, ಮಹಾರಾಷ್ಟ್ರ ಸೇರಿ ವಿವಿಧೆಡೆ 3214 ಕೇಂದ್ರಗಳಿವೆ.

ಪಿಎಂಬಿಜೆಪಿ ಅಡಿಯಲ್ಲಿ ಏಳುನೂರಕ್ಕೂ ಹೆಚ್ಚು ಔಷಧಿಗಳು ಹಾಗೂ ನೂರಾ ಐವತ್ನಾಲ್ಕು ಶಸ್ತ್ರಚಿಕಿತ್ಸೆ ಮತ್ತು ಆ ವೇಳೆ ಸ್ವೀಕರಿಸುವಂಥ ಔಷಧಗಳು ಒಳಗೊಂಡಿವೆ. ಮುಖ್ಯವಾಗಿ ಮಧುಮೇಹ ನಿಯಂತ್ರಕ, ಹೃದಯ ಸಂಬಂಧಿ ಕಾಯಿಲೆಗಳ ಔಷಧ, ಕ್ಯಾನ್ಸರ್ ನಿರೋಧಕ ಔಷಧ, ಕರುಳಿಗೆ ಸಂಬಂಧಿಸಿದ ಕಾಯಿಲೆಗೆ ಔಷಧ ಮುಂತಾದ 666 ಔಷಧ ಹಾಗೂ 81 ಔಷಧಗಳು ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದವು ಪಿಎಂಬಿಜೆಪಿ ಅಡಿ ದೊರೆಯುತ್ತವೆ.

ಸ್ಟೆಂಟ್ಸ್ ಮೇಲೆ ದರ ಮಿತಿ:

ಕೇಂದ್ರ ಸರಕಾರ ಫೆಬ್ರವರಿ 13, 2017ರಂದು ಅಧಿಸೂಚನೆ ಹೊರಡಿಸಿತು. ಅದರ ಪ್ರಕಾರ ಬೇರ್ ಮೆಟಲ್ ಸ್ಟೆಂಟ್ ಗೆ (ಬಿಎಂಎಸ್) 7260 ರುಪಾಯಿ ಹಾಗೂ ಡ್ರಗ್ ಎಲ್ಯುಟಿಂಗ್ ಸ್ಟೆಂಟ್ ಗೆ (ಡಿಇಎಸ್) (ಅದರಲ್ಲಿ ಬಿವಿಎಸ್ ಹಾಗೂ ಬಯೋಡಿಗ್ರೇಡಬಲ್ ಸ್ಟೆಂಟ್ ಒಳಗೊಂಡು) 29,600 ರುಪಾಯಿ ಮಿತಿ ವಿಧಿಸಲಾಯಿತು.

ಕುಸಿಯುತ್ತಿರುವ ಆಹಾರ ಪದಾರ್ಥಗಳ ಬೆಲೆಯೆಂಬ ಎರಡು ಅಲುಗಿನ ಕತ್ತಿಕುಸಿಯುತ್ತಿರುವ ಆಹಾರ ಪದಾರ್ಥಗಳ ಬೆಲೆಯೆಂಬ ಎರಡು ಅಲುಗಿನ ಕತ್ತಿ

ಸಗಟು ದರ ಸೂಚ್ಯಂಕವನ್ನು ಗಣನೆಗೆ ತೆಗೆದುಕೊಂಡ ನಂತರ ಬಿಎಂಎಸ್ ಗೆ 7400 ರುಪಾಯಿ ಹಾಗೂ ಡಿಇಎಸ್ ಗೆ 30180 ಎಂದು 1/4/2017ರಿಂದ ದರ ನಿಗದಿ ಮಾಡಲಾಯಿತು. 2017-18ರ ವಾರ್ಷಿಕ ವರದಿ ಪ್ರಕಾರ 102 ಉತ್ಪಾದಕರು ಹಾಗೂ ಆಮದು ಮಾಡಿಕೊಳ್ಳುತ್ತಿದ್ದವರು ಅಧಿಸೂಚನೆಗೂ ಮುನ್ನ ಮಾರುತ್ತಿದ್ದ ಸರಾಸರಿ ಗರಿಷ್ಠ ಬೆಲೆ ಬಿಎಂಎಸ್ ಗೆ ರು. 45,100 ಹಾಗೂ ಡಿಇ ಎಸ್ ಗೆ ರು. 121400.

ಹಾಗೆ ಲೆಕ್ಕ ಹಾಕಿ ನೋಡಿದರೆ ಬೆಲೆ ಇಳಿಕೆ ಬಿಎಂಎಸ್ ಗೆ ಶೇಕಡಾ 85ರಷ್ಟು ಮತ್ತು ಡಿಇಎಸ್ ಗೆ ಶೇಕಡಾ 74ರಷ್ಟು ಆಗಿದೆ. ಈ ರೀತಿ ಬೆಲೆ ಇಳಿಕೆಯಿಂದ ಸಾರ್ವಜನಿಕರಿಗೆ ವಾರ್ಷಿಕವಾಗಿ 4450 ಕೋಟಿ ರುಪಾಯಿ ಉಳಿತಾಯ ಆಗಿದೆ.

ಮೊಣಕಾಲು ಬದಲಾವಣೆ:

ಭಾರತದಲ್ಲಿ ವಾರ್ಷಿಕ ಒಂದರಿಂದ ಒಂದೂವರೆ ಲಕ್ಷ ಮೊಣಕಾಲು ಬದಲಾವಣೆ ಶಸ್ತ್ರಚಿಕಿತ್ಸೆ ಆಗುತ್ತದೆ. ಅದನ್ನು ಆಧಾರವಾಗಿಟ್ಟುಕೊಂಡು ಹೇಳುವುದಾದರೆ ಜನ ಸಾಮಾನ್ಯರಿಗೆ 1500 ಕೋಟಿಗೂ ಹೆಚ್ಚು ಉಳಿತಾಯ ಆಗುತ್ತಿದೆ. ಅನೈತಿಕವಾಗಿ ಲಾಭ ಮಾಡುವುದನ್ನು ತಡೆಯುವುದು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗುಣಮಟ್ಟದ ಹಾಗೂ ಕೈಗೆಟುಕುವ ಆರೋಗ್ಯ ಸೇವೆ ಸಿಗುವಂತೆ ಮಾಡುವುದು ಈ ನಡೆಯ ಹಿಂದಿನ ಉದ್ದೇಶ.

ಮೊಣಕಾಲು ಬದಲಾವಣೆ ಬಗೆಗಳು ಈ ಹಿಂದೆ ಇದ್ದ ಸರಾಸರಿ ಗರಿಷ್ಠ ಮೊತ್ತ (ರುಪಾಯಿಗಳಲ್ಲಿ) ಸರಾಸರಿ ಇಳಿಕೆ ಆಗಿರುವ ದರ ಹೊಸದಾಗಿ ಬೆಲೆ ನಿಗದಿ ಮತ್ತು ಗರಿಷ್ಠ ಮಾರಾಟ ಬೆಲೆ* (ರುಪಾಯಿ)
ಕೊಬಾಲ್ಟ್ ಕ್ರೋಮಿಯಂ (ಸಾಮಾನ್ಯವಾಗಿ ಬಳಕೆ ಮಾಡುವುದು) 158324 ಶೇ 65 54,720
ಶೇಷ ಲೋಹಗಳು ಟೈಟಾನಿಯಂ ಮತ್ತು ಆಕ್ಸಿಡೈಜ್ಡ್ ಝಿರ್ಕೋನಿಯಂ 249251 ಶೇ 69 76,600
ಹೈ ಫ್ಲೆಕ್ಸಿಬಿಲಿಟಿ ಇಂಪ್ಲಾಂಟ್ 181728 ಶೇ 69 56,490
ಪುನಃ ಬದಲಾವಣೆ 276869 ಶೇ 59 1,13,950
ಕ್ಯಾನ್ಸರ್ ಮತ್ತು ಟ್ಯೂಮರ್ ಗೆ ವಿಶೇಷ ಬದಲಾವಣೆ ಕಂಪನಿ ನಿಗದಿ ಪಡಿಸಿದ ದರ; ಎನ್ ಪಿಪಿ ನಿಗದಿಪಡಿಸಿರುವುದು113950

English summary
The Narendra Modi government has taken bold steps to offer affordable healthcare to common people of the country. The Modi government has walked the talk of 'Affordable, Quality Healthcare for All'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X