ಪ್ರೀತಿಸಿದಾಕೆಯ ಮೇಲೆ ಅತ್ಯಾಚಾರ ಮಾಡಿ, ಸಜೀವವಾಗಿ ದಹಿಸಿದ ಪ್ರೇಮಿ!

Posted By:
Subscribe to Oneindia Kannada

ಖಗಾರಿಯಾ (ಬಿಹಾರ) ಜೂನ್, 19: ಆಕೆಗೆ ಜೀವನ ಪರ್ಯಂತ ತನ್ನ ಹುಡುಗನೊಂದಿಗೆ ಬದುಕುಬೇಕನ್ನೋ ಉತ್ಕಟ ಬಯಕೆ. ಅದಕ್ಕೆಂದೇತನ್ನನ್ನು ತಾನು ನಂಬುವುದಕ್ಕಿಂತ ಹೆಚ್ಚು ಅವನನ್ನು ನಂಬಿದ್ದಳು. ಅವನು ಏನಂದರೂ ಆಕೆಯ ಬಾಯಲ್ಲಿ, 'ಇಲ್ಲ' ಎಂಬ ಪದ ಬಂದದ್ದೇ ಇಲ್ಲ.

ಆ ಹುಡುಗ ಮಾತ್ರ ಆಕೆಯ ನಿರ್ವಂಚನೆಯ ಪ್ರೀತಿಯನ್ನು, ನಿಷ್ಕಪಟ ಪ್ರೇಮವನ್ನು ನೋಡುತ್ತಿದ್ದುದು ಕಾಮದ ಕಣ್ಣಿನಲ್ಲೇ. ಹಲವು ತಿಂಗಳಿನಿಂದ ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ಲೈಂಗಿಕ ಸಂಬಂಧವನ್ನೂ ಬೆಳೆಸಿದ್ದಾಯ್ತು. ಎಲ್ಲ ಮುಗಿದ ಮೇಲೆ ಆಕೆಯ್ನು ಮದುವೆಯಾಗುವುದಕ್ಕೆ ಮಾತ್ರ ಹುಡುಗ ಒಲ್ಲೆ ಎನ್ನುತ್ತಾನೆ!

ಅಪ್ರಾಪ್ತೆಯ ಅತ್ಯಾಚಾರ ಮಾಡಿ, ರೈಲಿನಿಂದ ಎಸೆದ ಪಾಪಿಗಳು

Lover arrested for raping and burning his girlfriend alive in Bihar

ಕೊನೆಗೊಂದು ದಿನ ಹುಡುಗ, 'ಮುಖ್ಯ ವಿಚಾರ ಮಾತನಾಡಬೇಕು' ಎಂದು ಆಕೆಯನ್ನು ತನ್ನ ಮನೆಗೆ ಬರುವುದಕ್ಕೆ ಹೇಳಿ ಕೊಟ್ಟ ಉಡುಗೊರೆ ಏನು ಗೊತ್ತಾ? ಅತ್ಯಾಚಾರ ಮತ್ತು ಸಾವು!

ಈ ಘಟನೆಗೆ ಸಾಕ್ಷಿಯಾಗಿದ್ದು ಬಿಹಾರದ ಖಗಾರಿಯ ಜಿಲ್ಲೆಯ ಪರ್ಬಟ್ಟ ಎಂಬ ಹಳ್ಳಿ. ಭವಾನಿ ಶಂಕರ್ ಎಂಬ ಯುವಕ ತನ್ನ ಪ್ರಿಯತಮೆಯನ್ನು ಮನೆಗೆ ಕರೆಸಿಕೊಂಡು, ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.

ನಂತರ ಆಕೆಗೆ ಕಳ್ಳಿ ಎಂಬ ಪಟ್ಟ ಕಟ್ಟಿ ತನ್ನ ಮನೆಯಿಂದ ಆಚೆ ನೂಕಿದ್ದಾನೆ. ಅವಮಾನದಿಂದ ತನ್ನ ಮನೆಗೆ ತೆರಳಿದ್ದ ಆಕೆಯ ಮನೆಗೆ, ಮರುದಿನವೇ ಭವಾನಿ ಶಂಕರ್ ತೆರಳಿ ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು, ಸುಟ್ಟಿದ್ದಾನೆ.

ಮಾರಣಾಂತಿಕ ಸುಟ್ಟ ಗಾಯಗಳಿಂದ ಆಸ್ಪತ್ರೆ ಸೇರಿದ್ದ ಆಕೆ ತನ್ನ ಸಾವಿಗೆ ಭವಾನಿ ಶಂಕರ್ ಕಾರಣ ಎಂದು ಪೊಲೀಸರಿಗೆ ಹೇಳಿ ಸಾವನ್ನಪ್ಪಿದ್ದಾಳೆ.
ಸದ್ಯಕ್ಕೆ ಭವಾನಿ ಶಂಕರ್ ನನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bhawani Shankar, a resident of Temtha village in Parnbatta, Khagaria has arrested by Police, who is accused of raping and murdering his own girlfriend. He raped her in his house and burnt alive.
Please Wait while comments are loading...