• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೋಕಪಾಲರ ನೇಮಕ: ಕೇಂದ್ರದ ಶೋಧನಾ ಸಮಿತಿಯಲ್ಲಿ ಇಬ್ಬರು ಕನ್ನಡಿಗರು

|

ನವದೆಹಲಿ, ಸೆಪ್ಟೆಂಬರ್ 28: ಲೋಕಪಾಲದ ಅಧ್ಯಕ್ಷರು ಮತ್ತು ಸದಸ್ಯರ ಸ್ಥಾನಕ್ಕೆ ಅರ್ಹರ ಹೆಸರನ್ನು ಶಿಫಾರಸು ಮಾಡಲು ಕೇಂದ್ರ ಸರ್ಕಾರ ಕೊನೆಗೂ ಸಮಿತಿಯೊಂದನ್ನು ರಚಿಸಿದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ಲೋಕಪಾಲ್ ಹುದ್ದೆಗೆ ಅರ್ಹರನ್ನು ಶಿಫಾರಸು ಮಾಡುವ ಸಂಬಂಧ ರಚಿಸಿರುವ ಶೋಧನಾ ಮತ್ತು ಆಯ್ಕೆ ಸಮಿತಿಗೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಒಟ್ಟು ಎಂಟು ಸದಸ್ಯರ ಈ ಸಮಿತಿ ಕನ್ನಡಿಗರಾದ ಪ್ರಸಾರ ಭಾರತಿ ಅಧ್ಯಕ್ಷ ಎ. ಸೂರ್ಯಪ್ರಕಾಶ್ ಮತ್ತು ಇಸ್ರೋದ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಅವರನ್ನು ಒಳಗೊಂಡಿದೆ.

ಲೋಕಪಾಲ್ ಆಯ್ಕೆ ಸಮಿತಿಗೆ ಖರ್ಗೆ ಗೈರು, ಮೋದಿಗೆ ಪತ್ರ

ಎಸ್‌ಬಿಐ ಮಾಜಿ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ, ಗುಜರಾತ್‌ ಪೊಲೀಸ್ ಇಲಾಖೆ ಮಾಜಿ ಮುಖ್ಯಸ್ಥ ಶಬ್ಬೀರ್ ಹುಸೇನ್ ಎಸ್. ಖಾಂಡ್ವಾವಾಲಾ, ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುಖರಾಮ್ ಸಿಂಗ್ ಯಾದವ್, ರಣಜಿತ್ ಕುಮಾರ್ ಮತ್ತು ರಾಜಸ್ಥಾನ ಕೇಡರ್‌ನ ನಿವೃತ್ತ ಐಎಎಸ್ ಅಧಿಕಾರಿ ಲಲಿತ್ ಕೆ. ಪನ್ವಾರ್ ಈ ಸಮಿತಿಯಲ್ಲಿರುವ ಇತರೆ ಸದಸ್ಯರು.

ಲೋಕಪಾಲ ಕಾಯ್ದೆಯ ಮಾರ್ಗದರ್ಶಿ ಸೂತ್ರಕ್ಕೆ ಅನುಗುಣವಾಗಿ ಲೋಕಪಾಲ ಆಯ್ಕೆಯ ಪ್ರಕ್ರಿಯೆ ನಡೆಯಲಿದೆ ಎಂದು ಸಮಿತಿಯನ್ನು ರಚಿಸಿರುವ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಇಲಾಖೆಗಳ ಸಚಿವಾಲಯ ಹಾಗೂ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ತಿಳಿಸಿದೆ.

ಬಿಜೆಪಿ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಅಣ್ಣಾ ಹಜಾರೆ

ಲೋಕಪಾಲರ ನೇಮಕಾತಿ ವಿಚಾರದಲ್ಲಿ ಶೋಧನಾ ಸಮಿತಿ ನೇಮಕ ಪ್ರಮುಖ ಹೆಜ್ಜೆಯಾಗಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಲೋಕಪಾಲ ಆಯ್ಕೆ ಸಮಿತಿ ಸಭೆಗಳಿಗೆ ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬಹಿಷ್ಕಾರ ಮಾಡಿರುವ ನಡುವೆಯೂ ಸರ್ಕಾರ ಶೋಧನಾ ಸಮಿತಿ ರಚನೆಗೆ ನಿರ್ಧರಿಸಿದೆ.

ಲೋಕಪಾಲ ಕಾಯ್ದೆಯನ್ನು ಅಂಗೀಕರಿಸಿ ನಾಲ್ಕು ವರ್ಷಗಳಾದ ಬಳಿಕ ಶೋಧನಾ ಸಮಿತಿಯನ್ನು ರಚಿಸಲಾಗಿದೆ. ಲೋಕಪಾಲ ಆಯ್ಕೆ ಸಮಿತಿಗೆ ತಮ್ಮನ್ನು ಪೂರ್ಣ ಪ್ರಮಾಣದ ಸದಸ್ಯರನ್ನಾಗಿ ಮಾಡದ ಕಾರಣಕ್ಕೆ ಖರ್ಗೆ ಸಮಿತಿ ಸಭೆಗಳನ್ನು ಬಹಿಷ್ಕರಿಸಿದ್ದಾರೆ.

ಈ ವರ್ಷ ಆರು ಬಾರಿ ನಡೆದ ಸಭೆಗಳಿಗೆ ನೀಡಿದ್ದ ವಿಶೇಷ ಆಹ್ವಾನಗಳನ್ನೂ ಅವರು ತಿರಸ್ಕರಿಸಿದ್ದರು.

ಲೋಕಪಾಲ್ ವಿಳಂಬ: ಕೇಂದ್ರ ಸರ್ಕಾರ ಧೋರಣೆಗೆ ಸುಪ್ರೀಂ ಕಿಡಿ

ಎಂಟು ಸದಸ್ಯರ ಸಮಿತಿಯು ಲೋಕಪಾಲ ಮತ್ತು ಅದರ ಸದಸ್ಯರ ನೇಮಕಕ್ಕಾಗಿ ಸೂಕ್ತ ವ್ಯಕ್ತಿಗಳ ಹೆಸರನ್ನು ಶಿಫಾರಸು ಮಾಡಲಿದೆ.

English summary
Center has constituted an eight members search committee to recommend the chairperson and members of Lokpal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X