ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂತನ ಸಂಸತ್ ಭವನದಲ್ಲೇ ಚಳಿಗಾಲ ಅಧಿವೇಶನ: ಓಂ ಬಿರ್ಲಾ

|
Google Oneindia Kannada News

ನವದೆಹಲಿ, ಜೂನ್ 19: ಸಂಸತ್ತಿನ ಹೊಸ ಕಟ್ಟಡದಲ್ಲಿ ಚಳಿಗಾಲದ ಅಧಿವೇಶನವನ್ನು ಪ್ರಾರಂಭಿಸುವುದು ನಮ್ಮ ಪ್ರಯತ್ನವಾಗಿದೆ. ನೂತನ ಕಟ್ಟಡವು ಸ್ವಾವಲಂಬಿ ಭಾರತದ ಚಿತ್ರವನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ ಓಂ ಬಿರ್ಲಾ, ಸಂಸತ್ ಭವನದ ಉತ್ಪಾದಕತೆ ಹೆಚ್ಚಾಗಲಿದೆ ಎಂದರು. "ಎಲ್ಲರ ಸಹಕಾರದಿಂದ ಸದನದ ಉತ್ಪಾದಕತೆ ಹೆಚ್ಚಿದೆ, ತಡರಾತ್ರಿಯವರೆಗೆ ಕಲಾಪ ನಡೆಸಲಾಗುತ್ತದೆ ಎಂದು ಹೇಳಿದರು.

 ಹೊಸ ಸಂಸತ್ ಭವನಕ್ಕೆ ಮೂರು ಸುರಂಗ ಮಾರ್ಗ; ಸಂಪರ್ಕ ಕಲ್ಪಿಸುವುದೆಲ್ಲಿಗೆ? ಹೊಸ ಸಂಸತ್ ಭವನಕ್ಕೆ ಮೂರು ಸುರಂಗ ಮಾರ್ಗ; ಸಂಪರ್ಕ ಕಲ್ಪಿಸುವುದೆಲ್ಲಿಗೆ?

"ತಾಂತ್ರಿಕ ಮತ್ತು ಭದ್ರತಾ ದೃಷ್ಟಿಕೋನದಿಂದ ಈ ಹೊಸ ಕಟ್ಟಡವು ಹಳೆಯ ಸಂಸತ್ತಿನ ಕಟ್ಟಡಕ್ಕಿಂತ ಬಹಳ ಮುಂದಿದೆ. ಆದರೆ ಸಂಸತ್ತಿನ ಹಳೆಯ ಕಟ್ಟಡವು ಅದರ ಭಾಗವಾಗಿ ಉಳಿಯುತ್ತದೆ," ಎಂದರು.

Lok Sabha Winter session likely at new Parliament building says Speaker Om Birla

ಸುಗಮ ಕಲಾಪ ನಡೆಸುವುದಕ್ಕೆ ಓಂ ಬಿರ್ಲಾ ಮನವಿ: ಚಳಿಗಾಲ ಅಧಿವೇಶನಕ್ಕೆ ಸಂಬಂಧಿಸಿದಂತೆ ಎಲ್ಲಾ ಪಕ್ಷಗಳು ತಮ್ಮ ತಮ್ಮ ನಾಯಕರೊಂದಿಗೆ ಚರ್ಚೆ ನಡೆಸಬೇಕು ಎಂದು ಓಂ ಬಿರ್ಲಾ ಹೇಳಿದ್ದಾರೆ. ಅಲ್ಲದೇ "ಕಾಲಕಾಲಕ್ಕೆ ಪಕ್ಷದ ನಾಯಕರ ಜೊತೆ ಮಾತನಾಡುತ್ತೇನೆ, ಸದನ ಸುಗಮವಾಗಿ ನಡೆಯಬೇಕು, ಶಿಸ್ತು, ಸೌಹಾರ್ದತೆ ಕಾಪಾಡಬೇಕು. ಅವರ ಸಹಕಾರದಿಂದ ಸದನದಲ್ಲಿ ಉತ್ಪಾದಕತೆ ಮತ್ತು ಚರ್ಚೆಯ ಮಟ್ಟ ಗಣನೀಯವಾಗಿ ಹೆಚ್ಚಿದೆ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.

Lok Sabha Winter session likely at new Parliament building says Speaker Om Birla

ನೂತನ ಸಂಸತ್ ಭವನಕ್ಕೆ ಅಬ್ದುಲ್ ಕಲಾಂ ಹೆಸರು: ದೇಶದ ಕೋಮು ಸೌಹಾರ್ದತೆಯ ಕುರಿತು ಸಂದೇಶ ರವಾನಿಸಲು ಹೊಸ ಸಂಸತ್ ಭವನಕ್ಕೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಹೆಸರನ್ನು ಇಡುವಂತೆ ಮೇ ತಿಂಗಳಲ್ಲಿ ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿಯು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿಕೊಂಡಿತ್ತು. ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರಕಾರ, ಈ ವರ್ಷದ ಅಕ್ಟೋಬರ್ ವೇಳೆಗೆ ನೂತನ ಸಂಸತ್ ಭವನದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.

English summary
Lok Sabha Winter session likely at new Parliament building, says Speaker Om Birla. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X