Get Updates
Get notified of breaking news, exclusive insights, and must-see stories!

ಸಂಸತ್ತಿನಲ್ಲಿ ಬಾಡಿಗೆ ತಾಯ್ತನ ಮಸೂದೆ ತಿದ್ದುಪಡಿಯೊಂದಿಗೆ ಅಂಗೀಕಾರ

ನವದೆಹಲಿ, ಡಿಸೆಂಬರ್ 19: ಬಾಡಿಗೆ ತಾಯ್ತನ(ತಿದ್ದುಪಡಿ) ಕಾಯ್ದೆ 2016 ಲೋಕಸಭೆಯಲ್ಲಿ ಇಂದು ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಮಂಡಿಸಿ, ಇದೊಂದು ಐತಿಹಾಸಿಕ ಕ್ಷಣ ಎಂದಿದ್ದಾರೆ.

ಬಾಡಿಗೆ ತಾಯ್ತನವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದನ್ನು ನಿರ್ಬಂಧಿಸುವುದು ಈ ಕಾಯ್ದೆಯಿಂದ ಸಾಧ್ಯವಾಗಲಿದೆ. ಮಸೂದೆ ಮಂಡನೆಯಾಗಿ ಅಂಗೀಕಾರವಾಗುವುದಕ್ಕೂ ಮುನ್ನ ಕಾಂಗ್ರೆಸ್ ಹಾಗೂ ಎಐಎಡಿಎಂಕೆ ಸದಸ್ಯರು ಭಾರಿ ಪ್ರತಿಭಟನೆ ಮಾಡಿ ಸದನದ ಕಲಾಪಕ್ಕೆ ಅಡ್ಡಿ ಪಡಿಸಿದ ಘಟನೆ ನಡೆಯಿತು.

ಬಾಡಿಗೆ ತಾಯಿ ಎಂದರೆ ಮಹಿಳೆ ಯೊಬ್ಬಳು ಕೃತಕ ಗರ್ಭಧಾರಣೆ ಮೂಲಕ ಯಾವುದೇ ವ್ಯಕ್ತಿ ಅಥವಾ ದಂಪತಿಗಾಗಿ ಮಗುವನ್ನು ಹೆತ್ತುಕೊಡುವುದು.

Lok Sabha passes Surrogacy (Regulation) Bill amid disruptions

ಭಾರತದಲ್ಲಿ ಬಾಡಿಗೆ ತಾಯ್ತನ ಮಾರುಕಟ್ಟೆಯು 1,000 ದಿಂದ 5,000 ಕೋಟಿ ರು. ವಹಿವಾಟು ಕಾಣುತ್ತಿದೆ. ಜರ್ಮನಿ, ಫ್ರಾನ್ಸ್, ಪೋಲೆಂಡ್, ಜೆಕ್ ಗಣರಾಜ್ಯ, ಇಟಲಿ, ನೆದರ್‌ಲೆಂಡ್, ಬೆಲ್ಜಿಯಂ ಮತ್ತು ಸ್ಪೇನ್ ರಾಷ್ಟ್ರಗಳ ದೂತಾವಾಸ ನಿರ್ದೇಶನಾಲಯಗಳು ಮುಂಬೈಯಲ್ಲಿ 10 ಕ್ಕೂ ಹೆಚ್ಚು ಗರ್ಭಧಾರಣೆ ಕ್ಲಿನಿಕ್‌ಗಳನ್ನು ಗುರುತಿಸಿದ್ದು, ತನ್ನ ನಾಗರಿಕರಿಗೆ ಬಾಡಿಗೆ ತಾಯ್ತನ ನೆರವು ನೀಡದಂತೆ ಸೂಚಿಸಿದೆ' ಎಂದು ಗರ್ಭಧಾರಣೆಯೊಂದರ ವೈದ್ಯರು ತಿಳಿಸಿದ್ದಾರೆ.

ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಇಂತಹ ತಾಯ್ತನ ಒಪ್ಪಂದ ಅನೇಕ ಯುರೋಪ್ ರಾಷ್ಟ್ರಗಳಲ್ಲೂ ಕಾನೂನುಬಾಹಿರವಾಗಿದೆ. ಗಮನಾರ್ಹವೆಂದರೆ ಭಾರತದಲ್ಲಿಯೂ ಇದರ ಬಗ್ಗೆ ಯಾವುದೇ ಕಾನೂನು ಸ್ಪಷ್ಟವಾಗಿಲ್ಲ. ಆದರೆ ಇದರ ಅಗತ್ಯ ಬಹಳಷ್ಟಿದೆ ಎಂಬುದು ವೈದ್ಯಕೀಯ ಕ್ಷೇತ್ರದ ಅಭಿಪ್ರಾಯ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+