• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫಸ್ಟ್ ನ್ಯೂಸ್ ಸಮೀಕ್ಷೆ: ಮೋದಿ-ಅತ್ಯಂತ ವಿಶ್ವಾಸಾರ್ಹ ರಾಜಕೀಯ ನಾಯಕ

|

ಬೆಂಗಳೂರು, ಜನವರಿ 27: ಭಾರತದ ರಾಜಕೀಯ ಇತಿಹಾಸದಲ್ಲಿ 2019 ನೇ ವರ್ಷವನ್ನು ಅತ್ಯಂತ ನಿರೀಕ್ಷೆಯ ವರ್ಷ ಎಂದು ಗುರುತಿಸಲಾಗಿದೆ. ಪ್ರಧಾನಮಂತ್ರಿಯಲ್ಲಿ ದೇಶ ನಂಬಿಕೆ-ವಿಶ್ವಾಸವನ್ನಿಡುವುದೇ ಅಥವಾ ಇತರ ಪರ್ಯಾಯವನ್ನು ಆರಿಸಿಕೊಳ್ಳುವುದೇ? ಐಪಿಎಸ್ಒಎಸ್ ಫಸ್ಟ್ ಪೋಸ್ಟ್ ನ್ಯಾಶನಲ್ ಟ್ರಸ್ಟ್ ಸಮೀಕ್ಷೆಯು ಈ ವರದಿ ನೀಡಿದೆ.

ಈ ಸಮೀಕ್ಷೆಗಾಗಿ 291 ನಗರ ವಾರ್ಡ್ ಗಳು ಮತ್ತು 690 ಹಳ್ಳಿಗಳಿಂದ 34,470 ಜನರನ್ನು ಬಳಸಿಕೊಂಡಿತ್ತು. ಈ ವರದಿ 2018 ರ ಜನವರಿ 26 ರಂದು ಉದ್ಘಾಟನೆಗೊಳ್ಳುವ ವೃತ್ತ ಪತ್ರಿಕೆಯ ಆವೃತ್ತಿಯಲ್ಲಿ ಪ್ರಕಟವಾಗಿದೆ. ವರ್ಗ, ಜಾತಿ ಮತ್ತು ಲಿಂಗದ ಆಧಾರದಲ್ಲಿ 57 ರಾಜ್ಯ-ಸಾಂಸ್ಕೃತಿಕ ಪ್ರದೇಶಗಳಿಂದ 23 ರಾಜ್ಯಗಳಲ್ಲಿ 320 ರಾಜ್ಯಸಭಾ ಕ್ಷೇತ್ರಗಳನ್ನು ಒಳಗೊಂಡಿತ್ತು.

ಮೋದಿ ಅಲ್ಲದಿದ್ದರೆ ಭಾರತದ ಮುಂದಿನ ಪ್ರಧಾನಿ ಯಾರಾಗಬೇಕು?

ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಅತ್ಯಂತ ವಿಶ್ವಾಸಾರ್ಹ ರಾಜಕೀಯ ನಾಯಕ ಎಂದು 53% ರಷ್ಟು ಅನುಮೋದನೆ ಪಡೆದಿದ್ದಾರೆ ಎಂದು ಸಂಶೋಧನೆಗಳು ಬಹಿರಂಗ ಪಡಿಸಿವೆ.

ಇಂಡಿಯಾ ಟುಡೇ ಸಮೀಕ್ಷೆ: ಅತಂತ್ರ ಪರಿಸ್ಥಿತಿ ನಿರ್ಮಾಣ, ಎನ್ಡಿಎಗೆ 99 ಸ್ಥಾನ ಕಮ್ಮಿ

ಸುಪ್ರೀಂ ಕೋರ್ಟ್ ಮತ್ತು ಸಂಸತ್ತುಗಿಂತ ಪಿಎಂಒ ಹೆಚ್ಚು ವಿಶ್ವಾಸಾರ್ಹವಾಗಿದೆ ಎಂದೂ ಅದು ತಿಳಿಸಿದೆ. ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರಪ್ರದೇಶ, ಕೇರಳ, ತಮಿಳುನಾಡು ಗಳಲ್ಲಿ ರಾಹುಲ್ ಗಾಂಧಿ ಹೆಚ್ಚು ಜನಪ್ರಿಯ ನಾಯಕರಾಗಿದ್ದಾರೆ ಎಂದು ಐಪಿಎಸ್ಒಎಸ್ ಫಸ್ಟ್ ಪೋಸ್ಟ್ ನ್ಯಾಶನಲ್ ಟ್ರಸ್ಟ್ ಸಮೀಕ್ಷೆ ಹೇಳಿದೆ.

ಮೋದಿ ದೇಶದ ವಿಶ್ವಾಸಾರ್ಹ ರಾಜಕೀಯ ನಾಯಕ

ಮೋದಿ ದೇಶದ ವಿಶ್ವಾಸಾರ್ಹ ರಾಜಕೀಯ ನಾಯಕ

ಪ್ರಧಾನಿ ನರೇಂದ್ರ ಮೋದಿ ದೇಶದ ವಿಶ್ವಾಸಾರ್ಹ ರಾಜಕೀಯ ನಾಯಕನಾಗಿದ್ದು 53% ರಷ್ಟು ಮತಗಳನ್ನು ಪಡೆದಿದ್ದಾರೆ ಎಂದು ಸಂಶೋಧನೆಗಳು ಬಹಿರಂಗಪಡಿಸಿವೆ. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 26.9% ರಷ್ಟು ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 4% ಮತಗಳನ್ನು ಪಡೆದರೆ, ಮಾಯಾವತಿ 2% ಮತ ಪಡೆದಿದ್ದಾರೆ.

ಕುತೂಹಲಕರ ಸಂಗತಿಯೆಂದರೆ ನೆಹರೂ-ಗಾಂಧಿ ಕುಟುಂಬದಿಂದ ಹೊಸದಾಗಿ ರಾಜಕೀಯ ಪ್ರವೇಶ ಪಡೆದಿರುವ ಪ್ರಿಯಾಂಕ 1% ಕ್ಕಿಂತ ಕಡಿಮೆ ಮತ ಸಂಗ್ರಹಿಸಿದ್ದಾರೆ. ಆದರೆ ರಾಜಕೀಯಕ್ಕೆ ಅವರ ಔಪಚಾರಿಕ ಪ್ರವೇಶದ ಮುನ್ನವೇ ಈ ಸಮೀಕ್ಷೆ ನಡೆಸಲಾಗಿತ್ತು. ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರಪ್ರದೇಶ, ಕೇರಳ, ತಮಿಳುನಾಡುಗಳಲ್ಲಿ ರಾಹುಲ್ ಗಾಂಧಿ ಹೆಚ್ಚು ಜನಪ್ರಿಯ ನಾಯಕರಾಗಿದ್ದಾರೆ.

ಹಿಂದಿ ಭಾಷಿಕ ನಾಡಿನಲ್ಲಿ ಮೋದಿಗಿದೆ ಜನಪ್ರಿಯತೆ

ಹಿಂದಿ ಭಾಷಿಕ ನಾಡಿನಲ್ಲಿ ಮೋದಿಗಿದೆ ಜನಪ್ರಿಯತೆ

ಭಾರತೀಯ ಜನತಾ ಪಕ್ಷ ವಿಶೇಷವಾಗಿ ಹಿಂದಿ ಭಾಷಿಕರು ನಾಡಿನಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರ, ಕಾನೂನು ಮತ್ತು ಸುವ್ಯವಸ್ಥೆ ಮುಂತಾದ ಸಮಸ್ಯೆಗಳ ಪ್ರಮುಖ ನಿಭಾಯಿಸುವ ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ. ಉದ್ಯೋಗಾವಕಾಶಗಳು, ಶ್ರೀಮಂತರು ಮತ್ತು ಬಡವರ ನಡುವೆ ಇರುವ ಅಂತರವನ್ನು ತಗ್ಗಿಸಿ ಉತ್ತಮ ಆರೋಗ್ಯ ಮತ್ತು ಶಿಕ್ಷಣವನ್ನು ಒದಗಿಸುತ್ತದೆ. ಮೋದಿ ನೇತೃತ್ವದ ಸರ್ಕಾರವು ಹಿಂದಿ ಭಾಷಿಕರ ನಾಡಿನಲ್ಲಿ ಹಾಗು ಪಶ್ಚಿಮ ಭಾರತದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದೆ.

ಸಮೀಕ್ಷೆ: ಜಗನ್, ಪಳನಿಸ್ವಾಮಿ ಕೈ ಜೋಡಿಸಿದರೂ ಮೋದಿಗೆ ಬಲವಿಲ್ಲ!

ಮೋದಿ ಮತ್ತು ರಾಹುಲ್ ಗಾಂಧಿಯವರ ನಡುವೆ ಸ್ಪರ್ಧೆ

ಮೋದಿ ಮತ್ತು ರಾಹುಲ್ ಗಾಂಧಿಯವರ ನಡುವೆ ಸ್ಪರ್ಧೆ

ಮೋದಿ ಮತ್ತು ರಾಹುಲ್ ಗಾಂಧಿಯವರ ನಡುವೆ ಸ್ಪರ್ಧೆ ಎಂಬಂತೆ ಬಿಜೆಪಿ ಈ ಚುನಾವಣೆಯನ್ನು ಬಿಂಬಿಸಲು ಯಶಸ್ವಿಯಾದರೆ, ಮೋದಿ ಜನಪ್ರಿಯತೆಯಿಂದ ಬಿಜೆಪಿಗೆ ಗೆಲ್ಲುವ ಉತ್ತಮ ಅವಕಾಶ ಲಭಿಸಲಿದೆ. ಸಹಜವಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ರಾಜಕೀಯ ವಲಯದಲ್ಲಿ ದುರ್ಬಲ ಎದುರಾಳಿ ಎಂದು ಸಾಬೀತುಪಡಿಸಿದ್ದಾರೆ. ಸಂಶೋಧನೆಗಳು ಮುಖ್ಯವಾಗಿ ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳ, ಕೇರಳ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ತಮ್ಮ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚಿನ ವಿಶ್ವಾಸವನ್ನು ಸೂಚಿಸಿವೆ.

ಪ್ರಧಾನಿ ಕಚೇರಿ ಮೇಲೆ ಅತ್ಯಂತ ವಿಶ್ವಾಸ

ಪ್ರಧಾನಿ ಕಚೇರಿ ಮೇಲೆ ಅತ್ಯಂತ ವಿಶ್ವಾಸ

ಸಾರ್ವಜನಿಕ ಸಂಸ್ಥೆಗಳ ಪೈಕಿ ಭಾರತೀಯರು ಪ್ರಧಾನಿ ಕಚೇರಿಯನ್ನು 75%ರಷ್ಟು ನಂಬುತ್ತಾರೆ. ಸುಪ್ರೀಂ ಕೋರ್ಟ್ ಅನ್ನು 73% ರಷ್ಟು ಮತ್ತು ಸಂಸತ್ತನ್ನು 72% ರಷ್ಟನ್ನು ನಂಬುತ್ತಾರೆ ಎನ್ನುತ್ತದೆ ಸಂಶೋಧನೆ. ಪ್ರಧಾನ ವಿರೋಧ ಪಕ್ಷವು 53% ಅನುಮೋದನೆಯನ್ನು ಪಡೆದಿದೆ.

ಮುಂಬರುವ ಚುನಾವಣೆಗಳಲ್ಲಿ, ಅಭಿವೃದ್ಧಿಗೆ ಮೊದಲ ಆದ್ಯತೆ ದೊರೆತಿದೆ. 2019 ರ ಚುನಾವಣಾ ಅಭಿಯಾನವು ಅಭಿವೃದ್ಧಿ ಕಾರ್ಯಸೂಚಿಯಲ್ಲಿ ಸ್ಪರ್ಧಿಸಲಿದೆ ಎಂದು 85% ಮತದಾರರು ಭಾವಿಸಿಲ್ಲ ಮತ್ತು ಬಹುಪಾಲು ಪ್ರತಿಕ್ರಿಯಿಸಿದವರು ಹಣದುಬ್ಬರ, ನಿರುದ್ಯೋಗ ಮತ್ತು ಭ್ರಷ್ಟಾಚಾರದಂತಹ ಸಮಸ್ಯೆಗಳನ್ನು ಬಿಜೆಪಿ ಪರಿಹರಿಸಲಿದೆ ಎಂದು ಮತದಾರರು ನಂಬಿದ್ದಾರೆ.

ಇಂಡಿಯಾ ಟುಡೇ ಸಮೀಕ್ಷೆ: ಅತಂತ್ರ ಪರಿಸ್ಥಿತಿ ನಿರ್ಮಾಣ, ಎನ್ಡಿಎಗೆ 99 ಸ್ಥಾನ ಕಮ್ಮಿ

ಮತದಾರರಿಗೆ ಆರ್ಥಿಕ ಬೆಳವಣಿಗೆಯ ಭರವಸೆ

ಮತದಾರರಿಗೆ ಆರ್ಥಿಕ ಬೆಳವಣಿಗೆಯ ಭರವಸೆ

ಬಿಜೆಪಿ ನೇತೃತ್ವದ ಎನ್ ಡಿಎ ಒಕ್ಕೂಟ ಮತದಾರರಿಗೆ ಆರ್ಥಿಕ ಬೆಳವಣಿಗೆಯ ಭರವಸೆ ನೀಡಿದೆ. ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ನೋಡಬೇಕೆಂದು ಶೇಕಡಾ 37 ರಷ್ಟು ಜನ ಬಯಸಿದ್ದು ಅವರ ಜನಪ್ರಿಯ ಕಾರಣ. ಹಿಂದಿನ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸುವವರು ಕಾರ್ಯಕ್ಷಮತೆಯನ್ನು ಪ್ರಮುಖ ಕಾರಣವೆಂದು ಗುರುತಿಸಿದ್ದಾರೆ. ರಾಫೆಲ್ ಡೀಲ್ ಭ್ರಷ್ಟಾಚಾರ ಕುರಿತು ಕಾಂಗ್ರೆಸ್, ಪ್ರಧಾನಮಂತ್ರಿ ಮೇಲೆ ಆರೋಪಿಸಿರುವ ಆರೋಪಗಳನ್ನು 43% ಜನ ಒಪ್ಪಿಕೊಂಡರೆ, 74.3% ಜನ ಪರಮಾಧಿಕಾರದಿಂದ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಾಣವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

ಟ್ರಸ್ಟ್ ಪಿರಮಿಡ್ ಸಮೀಕ್ಷೆಯ ಡಿಕೋಡಿಂಗ್

ಟ್ರಸ್ಟ್ ಪಿರಮಿಡ್ ಸಮೀಕ್ಷೆಯ ಡಿಕೋಡಿಂಗ್

ಪ್ರಶ್ನೆ: ನೀವು ನಂಬುವ ಸಂಸ್ಥೆ ಯಾವುದು?

* ದೇಶದ ಪ್ರಧಾನಿ: 75%

* ಸರ್ವೋಚ್ಚ ನ್ಯಾಯಾಲಯ: 73%

* ಸಂಸತ್ತು: 72%

* ಸಾರ್ವಜನಿಕ ಅಧಿಕಾರಿಗಳು: 63%

* ಮಂತ್ರಿಗಳ ಸಮಿತಿ: 58%

* ಪ್ರಧಾನ ವಿರೋಧ ಪಕ್ಷ: 53

****ಪ್ರ: ಈ ಪೈಕಿ ನೀವು ಯಾವ ಪಕ್ಷಗಳು ಕೆಳಗಿನವುಗಳನ್ನು ನಿಭಾಯಿಸಬಹುದು ಎಂದು ನಂಬುತ್ತೀರಿ?

ಬೆಲೆ ಏರಿಕೆ: ಬಿಜೆಪಿ ಪರವಾಗಿ 15 ರಾಜ್ಯಗಳು; ಅಸ್ಸಾಂ, ಕೇರಳ ಮತ್ತು ಪಂಜಾಬ್ ನಲ್ಲಿ ಕಾಂಗ್ರೆಸ್ ಮುಂದಿದೆ.

ಭ್ರಷ್ಟಾಚಾರ: 14 ರಾಜ್ಯಗಳಲ್ಲಿ ಬಿಜೆಪಿ ಪರವಾಗಿ ಹೆಚ್ಚು ಮತ ಬಂದಿದ್ದರೆ, ಅಸ್ಸಾಂ, ಪಂಜಾಬ್ ಮತ್ತು ರಾಜಸ್ಥಾನಗಳಲ್ಲಿ ಕಾಂಗ್ರೆಸ್ ಮುಂದಿದೆ.

ಮೂಲಸೌಕರ್ಯ: ಬಿಜೆಪಿ 13 ರಾಜ್ಯಗಳಲ್ಲಿ ಮುಂದಿದ್ದರೆ; ಅಸ್ಸಾಂ, ಪಂಜಾಬ್ ಮತ್ತು ರಾಜಸ್ಥಾನಗಳಲ್ಲಿ ಕಾಂಗ್ರೆಸ್ ಮುಂದಿದೆ.

ಕಾನೂನು ಮತ್ತು ಸುವ್ಯವಸ್ಥೆ: ಬಿಜೆಪಿ ಪರವಾಗಿ 14 ರಾಜ್ಯಗಳು ಮತ ಚಲಾಯಿಸಿದ್ದರೆ, ಅಸ್ಸಾಂ, ಜಮ್ಮು ಮತ್ತು ಪಂಜಾಬ್ ನಲ್ಲಿ ಕಾಂಗ್ರೆಸ್ ಮುಂದಿದೆ.

ಅಂತರ್ಗತ ಬೆಳವಣಿಗೆ: ಬಿಜೆಪಿ ಪರವಾಗಿ 14 ರಾಜ್ಯಗಳು ಮತ ಚಲಾಯಿಸಿದ್ದರೆ ಅಸ್ಸಾಂ, ಜಮ್ಮು ಮತ್ತು ಪಂಜಾಬ್ ನಲ್ಲಿ ಕಾಂಗ್ರೆಸ್ ಬಹುಮತ ಪಡೆದಿದೆ.

ಸಿ ವೋಟರ್-ಎಬಿಪಿ ಸಮೀಕ್ಷೆ: ಸಣ್ಣ ರಾಜ್ಯಗಳಲ್ಲಿ ಯಾರಿಗೆ ಎಷ್ಟು ಸೀಟು?

ಮಹಾಘಟಬಂಧನ್ ಬಗ್ಗೆ ಖಚಿತವಾಗಿಲ್ಲ

ಮಹಾಘಟಬಂಧನ್ ಬಗ್ಗೆ ಖಚಿತವಾಗಿಲ್ಲ

51% ಜನ ಮಹಾಘಟಬಂಧನ್ ಅಥವಾ ವಿರೋಧ ಪಕ್ಷಗಳ ಒಕ್ಕೂಟ ರಚನೆಯ ಬಗ್ಗೆ 'ಇಲ್ಲ' ಅಥವಾ 'ಖಚಿತವಾಗಿಲ್ಲ' ಎಂದು ಹೇಳಿದರೆ, 49% ಜನ ಅದು ವಾಸ್ತವದಲ್ಲಿ ರಚನೆಯಾದರೆ ಬಿಜೆಪಿ ಮೈತ್ರಿಗೆ ಕಠಿಣ ಸ್ಪರ್ಧೆ ನೀಡಲಿದೆ ಎಂದಿದ್ದಾರೆ. ಮತ್ತು 34% ಜನ ಇದು ಚುನಾವಣೆಯಲ್ಲಿ ಬೈ ಪೋಲಾರ್ ಸ್ಪರ್ಧೆಗೆ ಕಾರಣವಾಗಬಹುದು ಎಂದಿದ್ದಾರೆ.

ಪಂಚರಾಜ್ಯಗಳ ಚುನಾವಣೆ ಫಲಿತಾಂಶ

ಪಂಚರಾಜ್ಯಗಳ ಚುನಾವಣೆ ಫಲಿತಾಂಶ

2018 ರ ವಿಧಾನಸಭಾ ಚುನಾವಣೆ ಫಲಿತಾಂಶಗಳ ಬಳಿಕ ನಡೆದ ಸಮೀಕ್ಷೆಯ ಪ್ರಕಾರ ಪಕ್ಷಗಳ ನಡುವಿನ ಅಂತರ ಕಡಿಮೆಯಾಗಿದೆ. ವಿಧಾನಸಭೆಯ ಚುನಾವಣೆಯ ಫಲಿತಾಂಶಗಳನ್ನು ಗಮನಿಸಿದರೆ, ಮತದಾರರು ಸಮಸ್ಯೆಗಳನ್ನು ಬಗೆಹರಿಸಲು ಕಾಂಗ್ರೆಸ್ ಪಕ್ಷದ ಮೇಲೆ ಹೆಚ್ಚು ನಂಬಿಕೆ ಇಟ್ಟಿದ್ದಾರೆ ಮತದಾರರು INC ಗೆ ಹೆಚ್ಚು ನಂಬಿಕೆಯನ್ನು ತೋರಿಸಿದ್ದು, ಅದು ಬಿಜೆಪಿಯ ಚಿಂತೆಗೂ ಕಾರಣವಾಗಿದೆ. ಹೀಗಿದ್ದೂ, ಬಿಜೆಪಿ ತನ್ನ ಶೇ 37.6 ರಷ್ಟು ಮತದಾರರನ್ನು ಉಳಿಸಿಕೊಳ್ಳಲಿದ್ದು ಕಾಂಗ್ರೆಸ್ ಕೇವಲ 7.8% ಮತದಾರರನ್ನು ಉಳಿಸಿಕೊಳ್ಳಲಿದೆ ಎಂದು ವರದಿ ತಿಳಿಸಿದೆ.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary
As the race to the 2019 Lok Sabha Elections enters its final lap, the Narendra Modi and the BJP-led National Democratic Alliance hold a clear edge over the United Opposition Alliance or Mahagathbandhan, says the Firstpost National Trust Survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X