ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1 ರುಪಾಯಿಗೆ ಸಬ್ಸಿಡಿ ದರದಲ್ಲಿ ರೇಷನ್ : ಬಿಜೆಪಿಯಿಂದ ಭರವಸೆ

|
Google Oneindia Kannada News

ಕಟಕ್, ಏಪ್ರಿಲ್ 14: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಒಡಿಶಾದ ಮತದಾರರಿಗೆ ಭರ್ಜರಿ ಆಶ್ವಾಸನೆ ನೀಡಿದ್ದಾರೆ. 1 ರುಪಾಯಿಗೆ ಸಬ್ಸಿಡಿ ದರದಲ್ಲಿ ರೇಷ ಪ್ಯಾಕೇಜ್ ನೀಡುವ ಭರವಸೆ ಕೊಟ್ಟಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ರಾಷ್ಟ್ರೀಯ ಅಹಾರ ಭದ್ರತಾ ಕಾಯ್ದೆಯಡಿಗೆ ಬರುವವರಿಗೆ 1 ರು ನಲ್ಲಿ ಅಗತ್ಯ ಆಹಾರ ಪೂರೈಕೆಯಾಗಲಿದೆ. ಆದರೀ, ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಇದೆಲ್ಲವೂ ಸಾಧ್ಯ. ಲೋಕಸಭೆ ಚುನಾವಣೆ ಜೊತೆಗೆ ವಿಧಾನಸಭೆಗೂ ಚುನಾವಣೆ ನಡೆಯುತ್ತಿದೆ.

Lok Sabha Elections 2019: BJP promises subsidised ration package at Rs 1

ಕಟಕ್ ಲೋಕಸಭಾ ಕ್ಷೇತ್ರದ ಚೌದ್ವಾರ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ವಿಜಯ್ ಸಂಕಲ್ಪ್ ಸಮಾವೇಶದಲ್ಲಿ ಪ್ರಧಾನ್ ಅವರು ಮಾತನಾಡಿದರು. ಈ ಯೋಜನೆಯ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ, 500 ಗ್ರಾಂ ಬೇಳೆ, 500 ಗ್ರಾಂ ಉಪ್ಪು ಎಲ್ಲವೂ 1 ರು ಸಬ್ಸಿಡಿ ದರದಲ್ಲಿ ಸಿಗಲಿದೆ.

ಬಿಜೆಪಿ ಪ್ರಣಾಳಿಕೆಯಲ್ಲಿನ 'ನದಿ ಜೋಡಣೆ' ಅಂಶ ಮೆಚ್ಚಿದ ರಜನಿ ಬಿಜೆಪಿ ಪ್ರಣಾಳಿಕೆಯಲ್ಲಿನ 'ನದಿ ಜೋಡಣೆ' ಅಂಶ ಮೆಚ್ಚಿದ ರಜನಿ

ರಾಷ್ಟ್ರೀಯ ಅಹಾರ ಭದ್ರತಾ ಕಾಯ್ದೆಯಡಿ ಸುಮಾರು 3.26 ಕೋಟಿ ಫಲಾನುಭವಿಗಳಿದ್ದಾರೆ. ಇದಲ್ಲದೆ, ಅಂಗನವಾಡಿ ಕಾರ್ಯಕರ್ತರಿಗೆ ತಿಂಗಳಿಗೆ 15,000ರು ಸಂಭಾವನೆ ಹಾಗೂ ಪಿಂಚಣಿಯನ್ನು ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ನೀಡಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹೇಳಿದರು.

ಪ್ರಣಾಳಿಕೆ: ಸಂವಿಧಾನದ 370ನೇ ವಿಧಿ ಹಿಂಪಡೆಯಲು ಮುಂದಾದ ಬಿಜೆಪಿಪ್ರಣಾಳಿಕೆ: ಸಂವಿಧಾನದ 370ನೇ ವಿಧಿ ಹಿಂಪಡೆಯಲು ಮುಂದಾದ ಬಿಜೆಪಿ

ಕಾಲೇಜ್ ಹಾಗೂ ವಿವಿಗಳಲ್ಲಿನ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಮೊಪೆಡ್ ಗಳನ್ನು ವಿತರಿಸಲಾಗುವುದು. ಐತಿಹಾಸಿಕ ನಗರಗಳಾದ ಕಟಕ್, ಭುವನೇಶ್ವರ್ ನಡುವೆ ಮೇಟ್ರೊ ರೈಲು ಚಾಲನೆ ನೀಡಲಾಗುವುದು ಈ ಮೂಲಕ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಲಾಗುವುದು ಎಂದರು. ಕಟಕ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಕಾಶ್ ಮಿಶ್ರಾ ಹಾಗೂ ಶಾಸಕ ಅಭ್ಯರ್ಥಿ ನಯಾನ್ ರಂಜನ್ ಮೊಹಂತಿ ಅವರ ಪ್ರಚಾರ ಮಾಡಿದರು.

English summary
Union minister Dharmendra Pradhan has announced that a subsidised ration package at Re 1 will be provided to the beneficiaries under the National Food Security Act, if the BJP is voted to power in Odisha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X