ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ನಡುವೆ ದೇಶದ ವಾಯು ಗುಣಮಟ್ಟದಲ್ಲಿ ಭಾರೀ ಸುಧಾರಣೆ

|
Google Oneindia Kannada News

ನವದೆಹಲಿ, ಮಾರ್ಚ್ 16: ಕೊರೊನಾ ಲಾಕ್‌ಡೌನ್ ಪ್ರೇರಿತವಾಗಿ ಭಾರತದ ವಾಯು ಗುಣಮಟ್ಟದಲ್ಲಿ ಗಣನೀಯವಾಗಿ ಸುಧಾರಣೆ ಕಂಡಿರುವುದಾಗಿ ವರದಿಯೊಂದು ತಿಳಿಸಿದೆ. ಎರಡು ವರ್ಷಗಳ ಹಿಂದೆ ಹೋಲಿಸಿದರೆ, 2020ರಲ್ಲಿ ವಾಯು ಗುಣಮಟ್ಟದಲ್ಲಿ ಸಾಕಷ್ಟು ಸುಧಾರಣೆ ಆಗಿರುವುದಾಗಿ ಮಂಗಳವಾರ ಐಕ್ಯೂ ಏರ್ ವರದಿ ಮಾಹಿತಿ ನೀಡಿದೆ.

ಭಾರತದ ಪ್ರಮುಖ ನಗರಗಳಲ್ಲಿ ವಾಯುಗುಣಮಟ್ಟ ಸುಧಾರಿಸಿದೆ. 2020ರಲ್ಲಿ ಹಿಂದೆಂದಿಗಿಂತಲೂ ಆಶ್ಚರ್ಯಕರ ರೀತಿ ಗಾಳಿಯ ಗುಣಮಟ್ಟ ಸುಧಾರಣೆ ಕಂಡಿದೆ. ಇದಕ್ಕೆ ಕೊರೊನಾ ಲಾಕ್‌ಡೌನ್ ಪ್ರಮುಖ ಕಾರಣವಾಗಿದೆ ಎಂದು ಐಕ್ಯೂಏರ್ ‌ಜಾಗತಿಕ ವಾಯು ಗುಣಮಟ್ಟದ ದತ್ತಾಂಶ ಒದಗಿಸಿದೆ. 106 ದೇಶಗಳ ವರದಿಯನ್ನಾಧರಿಸಿ ಈ ವರದಿಯನ್ನು ತಯಾರಿಸಲಾಗಿದೆ. ವಿವಿಧ ದೇಶಗಳ ವಾಯುಗುಣಮಟ್ಟ ಪರಿಶೀಲನಾ ಕೇಂದ್ರದಿಂದ ಮಾಹಿತಿ ಪಡೆಯಲಾಗಿದೆ. ಸರ್ಕಾರಿ ಸಂಸ್ಥೆಗಳು, ಸ್ಥಳೀಯರು, ಎನ್‌ಜಿಒಗಳು, ವಿವಿಧ ಸಂಸ್ಥೆಗಳಿಂದ ಮಾಹಿತಿ ಕಲೆ ಹಾಕಿ ಈ ವರದಿ ಸಿದ್ಧಪಡಿಸಲಾಗಿದೆ. ಮುಂದೆ ಓದಿ...

 ಅನಿರೀಕ್ಷಿತ ರೀತಿ ತಗ್ಗಿದ ವಾಯುಮಾಲಿನ್ಯ

ಅನಿರೀಕ್ಷಿತ ರೀತಿ ತಗ್ಗಿದ ವಾಯುಮಾಲಿನ್ಯ

2020ನೇ ವರ್ಷ ವಾಯು ಮಾಲಿನ್ಯವನ್ನು ಅನಿರೀಕ್ಷಿತ ರೀತಿಯಲ್ಲಿ ತಗ್ಗಿಸಿದೆ. 2021ರಲ್ಲಿ ಮತ್ತೆ ಮಾನವನ ಚಟುವಟಿಕೆಗಳು ಹೆಚ್ಚಾಗಿದ್ದು, ವಾಯುಗುಣಮಟ್ಟ ಪುನಃ ಕುಸಿಯಬಹುದಾಗಿದೆ. ಆದರೆ ಈ ವರದಿ ವಾಯು ಗುಣಮಟ್ಟದ ಪ್ರಾಮುಖ್ಯವನ್ನು ತಿಳಿಸುವ ಭರವಸೆಯಿದೆ. ಇಡೀ ವಿಶ್ವಕ್ಕೆ ವಾಯುಗುಣಮಟ್ಟವನ್ನು ಸುಧಾರಿಸುವ ಅವಶ್ಯಕತೆಯನ್ನು ತಿಳಿಸಬೇಕಿದೆ ಎಂದು ಐಕ್ಯೂ ಏರ್ ಸಿಇಒ ಫ್ರಾಂಕ್ ಹಾಮ್ಸ್‌ ತಿಳಿಸಿದ್ದಾರೆ.

ದೇಶದ ಅತಿ ಹೆಚ್ಚು ಕಲುಷಿತ ನಗರಗಳ ಪಟ್ಟಿ: 3 ನೇ ಸ್ಥಾನದಲ್ಲಿ ದೆಹಲಿದೇಶದ ಅತಿ ಹೆಚ್ಚು ಕಲುಷಿತ ನಗರಗಳ ಪಟ್ಟಿ: 3 ನೇ ಸ್ಥಾನದಲ್ಲಿ ದೆಹಲಿ

 ಭಾರತೀಯ ವಾಯುಗುಣಮಟ್ಟ 63% ಸುಧಾರಣೆ

ಭಾರತೀಯ ವಾಯುಗುಣಮಟ್ಟ 63% ಸುಧಾರಣೆ

2019ಕ್ಕೆ ಹೋಲಿಸಿದರೆ 2020ರಲ್ಲಿ ಎಲ್ಲಾ ಭಾರತೀಯ ನಗರಗಳಲ್ಲಿ ವಾಯುಗುಣಮಟ್ಟವು 63% ಏರಿಕೆಯಾಗಿರುವುದಾಗಿ ವರದಿ ತಿಳಿಸಿದೆ. ಇದಾಗ್ಯೂ 2020ರಲ್ಲಿ ನವದೆಹಲಿ, ಧಾಕಾ, ಜಕರ್ತಾ, ಕಠ್ಮಂಡು, ಇಸ್ಲಾಮಾಬಾದ್, ಹನಾಯ್, ಬೀಜಿಂಗ್ ನಗರಗಳು ಅತಿ ಕಲುಷಿತವಾದ 20 ನಗರಗಳಲ್ಲಿ ಒಂದಾಗಿವೆ.

 ಪ್ರಮುಖ ನಗರಗಳಲ್ಲಿ ತಗ್ಗಿದ ವಾಯುಮಾಲಿನ್ಯ

ಪ್ರಮುಖ ನಗರಗಳಲ್ಲಿ ತಗ್ಗಿದ ವಾಯುಮಾಲಿನ್ಯ

ಕೊರೊನಾ ವೈರಸ್ ಕಾರಣವಾಗಿ 2020ರಲ್ಲಿ ವಿವಿಧೆಡೆ ಕೆಲವು ತಿಂಗಳ ಅವಧಿ ಲಾಕ್‌ಡೌನ್ ವಿಧಿಸಿದ್ದು, ಈ ಕಾರಣವಾಗಿ ಎಲ್ಲಾ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟವು 84% ಸುಧಾರಿಸಿರುವುದಾಗಿ ತಿಳಿದುಬಂದಿದೆ. ದೆಹಲಿಯಲ್ಲಿ 15%, ಬೀಜಿಂಗ್‌ನಲ್ಲಿ 11%, ಷಿಕಾಗೋ, ಲಂಡನ್, ಪ್ಯಾರಿಸ್, ಸಿಯೋಲ್ ನಲ್ಲಿ 13%, 16%, 17% ಹಾಗೂ 16% ಮಾಲಿನ್ಯ ತಗ್ಗಿರುವುದಾಗಿ ವರದಿ ತಿಳಿಸಿದೆ.

ವಾಯುಗುಣಮಟ್ಟ ನಿರ್ವಹಣೆಗಾಗಿ ರಚನೆಯಾಗಿದ್ದ ಆಯೋಗ 5 ತಿಂಗಳಲ್ಲೇ ಸ್ಥಗಿತವಾಯುಗುಣಮಟ್ಟ ನಿರ್ವಹಣೆಗಾಗಿ ರಚನೆಯಾಗಿದ್ದ ಆಯೋಗ 5 ತಿಂಗಳಲ್ಲೇ ಸ್ಥಗಿತ

 ಚೀನಾದಲ್ಲಿ 86% ವಾಯುಗುಣಮಟ್ಟ ಸುಧಾರಣೆ

ಚೀನಾದಲ್ಲಿ 86% ವಾಯುಗುಣಮಟ್ಟ ಸುಧಾರಣೆ

2020ರಲ್ಲಿ ಚೀನಾದ ನಗರಗಳಲ್ಲಿ 86% ವಾಯು ಶುದ್ಧವಾಗಿರುವುದಾಗಿ ತಿಳಿಸಿದೆ. ಅಮೆರಿಕದಲ್ಲಿ ಮಾತ್ರ ಕಾಡ್ಗಿಚ್ಚಿನ ಕಾರಣವಾಗಿ 6.7% ವಾಯುಮಾಲಿನ್ಯ ಪ್ರಮಾಣ ಹೆಚ್ಚಿದ್ದು, ಅಮೆರಿಕದ 38% ನಗರಗಳು ವಿಶ್ವ ಆರೋಗ್ಯ ಸಂಸ್ಥೆಯ ವಾಯುಮಾಲಿನ್ಯ ಸಂಬಂಧಿ ಮಾರ್ಗಸೂಚಿಯನ್ನು ತಲುಪಲು ಸಾಧ್ಯವಾಗಿಲ್ಲ ಎಂದು ತಿಳಿಸಿದೆ.

English summary
Air quality has improved in major cities in India in 2020 due to coronavirus lockdown
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X