• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ರೇಕಿಂಗ್ ನ್ಯೂಸ್; ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ

|

ನವದೆಹಲಿ, ಮೇ 01 : ಕೊರೊನಾ ಹರಡದಂತೆ ತಡೆಯಲು ಜಾರಿಗೆ ತಂದಿರುವ ಲಾಕ್ ಡೌನ್‌ ಅನ್ನು ಇನ್ನೂ ಎರಡು ವಾರಗಳ ಕಾಲ ವಿಸ್ತರಣೆ ಮಾಡಲಾಗಿದೆ. ಮೇ 3ರಂದು ಎರಡನೇ ಹಂತದ ಲಾಕ್ ಡೌನ್ ಅಂತ್ಯಗೊಳ್ಳಲಿದೆ.

   ಬಿವೈ ರಾಘವೇಂದ್ರ ಮಾಡಿದ ಕೆಲಸಕ್ಕೆ ನಟ ಅರುಣ್ ಸಾಗರ್ ಹೇಳಿದ್ದೇನು? | B Y Ragvendra | Arun Sagar

   ಶುಕ್ರವಾರ ಸಂಜೆ ಕೇಂದ್ರ ಗೃಹ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ. ದೇಶಾದ್ಯಂತ ಲಾಕ್ ಡೌನ್ ಅನ್ನು ಇನ್ನೂ‌ ಎರಡು ವಾರಗಳ ಕಾಲ ವಿಸ್ತರಣೆ ಮಾಡಿ ಆದೇಶ ನೀಡಿದೆ.

   ಲಾಕ್ ಡೌನ್ ಸಡಿಲಿಕೆ ಸಂಬಂಧ ಸಿಎಂಗೆ ಸಿದ್ದರಾಮಯ್ಯ ಸಲಹೆ

   ಮೇ 3ರ ಬಳಿಕ ಲಾಕ್ ಡೌನ್ ತೆರವಾಗಬಹುದು ಎಂದು ಅಂದಾಜಿಸಿದ್ದ ಜನರಿಗೆ ನಿರಾಸೆಯಾಗಿದೆ. ಹಲವು ರಾಜ್ಯಗಳು ಲಾಕ್ ಡೌನ್ ವಿಸ್ತರಣೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದವು.

   ಲಾಕ್ ಡೌನ್ ಎಫೆಕ್ಟ್: ಮುಂದಿನ 6 ತಿಂಗಳಲ್ಲಿ 7 ಮಿಲಿಯನ್ ಗರ್ಭಿಣಿಯರು?

   ಪ್ರಧಾನಿ ನರೇಂದ್ರ ಮೋದಿ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸುವಾಗ ಲಾಕ್ ಡೌನ್ ವಿಸ್ತರಣೆಯಾಗುವ ಸುಳಿವು ಕೊಟ್ಟಿದ್ದರು. 2ನೇ ಹಂತದ ಲಾಕ್ ಡೌನ್ ಮೇ 3ರ ತನಕ ಜಾರಿಯಲ್ಲಿರುತ್ತದೆ. ಮೇ 4 ರಿಂದ 3ನೇ ಹಂತದ ಲಾಕ್ ಡೌನ್ ಜಾರಿಗೆ ಬರಲಿದೆ.

   ಶುಭ ಸುದ್ದಿ ನೀಡಿದ ಅಧ್ಯಯನ: ಮೇ 21 ಕ್ಕೆ ಭಾರತದಲ್ಲಿ ಕೊರೊನಾ ಮಾಯ!

   3ನೇ ಹಂತದ ಲಾಕ್ ಡೌನ್‌ ಮಾರ್ಗಸೂಚಿಯಲ್ಲಿ ಕೆಂಪು, ಹಸಿರು ಮತ್ತು ಹಳದಿ ವಲಯಕ್ಕೆ ಕೆಲವು ವಿನಾಯಿತಿಗಳನ್ನು ನೀಡಲಾಗುತ್ತದೆ. ಈಗಾಗಲೇ ಹಲವು ರಾಜ್ಯಗಳು ಲಾಕ್ ಡೌನ್ ನಿಯಮದಲ್ಲಿ ಕೆಲವು ಬದಲಾವಣೆ ಮಾಡಿವೆ.

   ಕೆಂಪು ವಲಯದಲ್ಲಿ ಕೈಗಾರಿಕೆಗಳಿಗೆ ಷರತ್ತು ಬದ್ಧ ಅನುಮತಿ ನೀಡಲಾಗಿದೆ. ಶೇ 33ರಷ್ಟು ಉದ್ಯೋಗಿಗಳು ಮಾತ್ರ ಕೆಲಸಕ್ಕೆ ಹಾಜರಾಗಬೇಕು. ಸರ್ಕಾರಿ ಕಚೇರಿಗಳು ಸಹ ಶೇ 33ರಷ್ಟು ಸಿಬ್ಬಂದಿ ಜೊತೆ ಕಾರ್ಯ ನಿರ್ವಹಣೆ ಮಾಡಬಹುದು.

   ಕಿತ್ತಲೆ ವಲಯದಲ್ಲಿ ಟ್ಯಾಕ್ಸಿ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ, ಒಂದು ವಾಹನದಲ್ಲಿ ಇಬ್ಬರು ಮಾತ್ರ ಓಡಾಡಬೇಕು. ಅಂತರ್ ಜಿಲ್ಲಾ ಸಂಚಾರ ನಡೆಸುವವರು ಅನುಮತಿ ಪಡೆಯಬೇಕು.

   ಹಸಿರು ವಲಯದಲ್ಲಿ ಈಗಾಗಲೇ ಘೋಷಣೆ ಮಾಡಿರುವ ಎಲ್ಲಾ ರಿಯಾಯಿತಿ ಸಿಗಲಿದೆ. ಬಸ್‌ಗಳು ಸಂಚಾರ ನಡೆಸಬಹುದಾಗಿದ್ದು, ಶೇ 50ರಷ್ಟು ಪ್ರಯಾಣಿಕರು ಮಾತ್ರ ಇರಬೇಕು.

   ಲಾಕ್ ಡೌನ್ ವಿಸ್ತರಣೆ ಮಾಡಿರುವ ಕುರಿತು ಗೃಹ ಸಚಿವಾಲಯ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ. ಶುಕ್ರವಾರ ಸಂಜೆಯ ತನಕ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 35,365. 1152 ಜನರು ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.

   English summary
   Ministry of Home Affairs issued order extend the Lockdown in the country for period of two weeks. 2nd phase of lock down will end on May 3, 2020.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X